ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್‍ಹ್ಯಾಮ್‌ನಲ್ಲಿ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಕಳೆದ ಜುಲೈ 28ರಂದು ಶುರುವಾಗಿದ್ದ ಈ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟ ಇದೇ ತಿಂಗಳ 8ರಂದು ಮುಕ್ತಾಯಗೊಳ್ಳಲಿದೆ. ಇನ್ನು ಕಳೆದ ಬಾರಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಗರದಲ್ಲಿ ಆಯೋಜನೆಯಾಗಿದ್ದ 2018ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿತ್ತು ಎಂದೇ ಹೇಳಬಹುದು.
ಏಷ್ಯಾಕಪ್ 2022: ದಿನೇಶ್ ಕಾರ್ತಿಕ್‌ಗೆ ಸ್ಥಾನ, ಈ ಇಬ್ಬರು ಸ್ಟಾರ್ ಆಟಗಾರರು ಮನೆಗೆ!
ಇನ್ನು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ಗೆ ಕ್ರಿಕೆಟ್ ಆಟವನ್ನೂ ಸಹ ಸೇರ್ಪಡೆ ಮಾಡಿರುವುದು ವಿಶೇಷವಾಗಿದ್ದು, ಭಾರತ ಈ ಬಾರಿ ಪದಕ ಗೆಲ್ಲುವ ನಿರೀಕ್ಷೆ ತುಸು ದೊಡ್ಡ ಮಟ್ಟದಲ್ಲೇ ಇತ್ತು. ಆದರೆ ಹಿಂದಿನ ಕಾಮನ್‌ವೆಲ್ತ್ ಕ್ರೀಡಾಕೂಟಗಳಿಗೆ ಹೋಲಿಸಿದರೆ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮಂಕಾಗಿದೆ ಎಂದೇ ಹೇಳಬಹುದು. 2018ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ 26 ಚಿನ್ನದ ಪದಕ, 20 ಬೆಳ್ಳಿ ಪದಕ ಮತ್ತು 20 ಕಂಚಿನ ಪದಕಗಳು ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದಿದ್ದ ಭಾರತ ಈ ಬಾರಿ ಕ್ರೀಡಕೂಟದ ಏಳು ದಿನದ ಮುಕ್ತಾಯದ ಹಂತಕ್ಕೆ 6 ಚಿನ್ನದ ಪದಕಗಳು, 7 ಬೆಳ್ಳಿ ಪದಕಗಳು ಹಾಗೂ 7 ಕಂಚಿನ ಪದಕಗಳು ಸೇರಿದಂತೆ ಒಟ್ಟು 20 ಪದಕಗಳನ್ನು ಗೆದ್ದಿದೆ. ಇನ್ನು ಕ್ರೀಡಾಕೂಟ ಮುಗಿಯುವುದಕ್ಕೆ ಇನ್ನು ಮೂರು ದಿನಗಳು ಬಾಕಿ ಇದ್ದು, ಭಾರತದ ಪದಕಗಳ ಸಂಖ್ಯೆ 25ರ ಗಡಿ ಮುಟ್ಟುವುದೂ ಸಹ ಕಷ್ಟ ಎನ್ನಬಹುದು.
CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?
ಹೀಗೆ ಕಳೆದ ಬಾರಿ 66 ಪದಕಗಳನ್ನು ಗೆದ್ದು ಮೆರೆದಿದ್ದ ಭಾರತ ಈ ಬಾರಿ ಇಷ್ಟರ ಮಟ್ಟಿಗೆ ನೆಲಕಚ್ಚಲು ಕಾರಣವೇನಿರಬಹುದು ಎಂದು ಹುಡುಕಿದರೆ ಹಲವು ಕಾರಣಗಳು ಸಿಗಲಿದ್ದು, ಅದರ ಜತೆಗೆ ಒಂದು ಆಟವನ್ನು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಕೂಟದಿಂದ ತೆಗೆದು ಹಾಕಿರುವುದು ಭಾರತ ತಂಡ ಪದಕ ಪಟ್ಟಿಯಲ್ಲಿ ಕುಸಿತ ಕಾಣಲು ಕಾರಣ ಎನ್ನಲಾಗುತ್ತಿದೆ.
ಈ ಬಾರಿ ಇಲ್ಲ ಈ ಆಟ
ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಕಾಣೆಯಾಗಿರುವ ಪ್ರಮುಖ ಆಟದ ವಿಭಾಗ ಶೂಟಿಂಗ್. ಹೌದು, ಶೂಟಿಂಗ್ ಇಲ್ಲದಿರುವುದು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯನ್ನುಂಟುಮಾಡಿದೆ. ಕಳೆದ ಬಾರಿ ಶೂಟಿಂಗ್ ವಿಭಾಗವೊಂದರಲ್ಲೇ 16 ಪದಕಗಳನ್ನು ಗೆದ್ದಿದ್ದ ಭಾರತ ಈ ಬಾರಿ ಶೂಟಿಂಗ್ ಇಲ್ಲದಿರುವ ಕಾರಣ ಪದಕಪಟ್ಟಿಯಲ್ಲಿ ತೀವ್ರ ಕುಸಿತ ಕಂಡಿದೆ ಎನ್ನಬಹುದು.
ಕಳೆದ ಬಾರಿ ಶೂಟಿಂಗ್‌ನಲ್ಲಿ ಭಾರತ ಗೆದ್ದಿದ್ದ ಪದಕ ಸಂಖ್ಯೆ
ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತ 7 ಚಿನ್ನದ ಪದಕಗಳು, 4 ಬೆಳ್ಳಿ ಪದಕಗಳು ಮತ್ತು 5 ಕಂಚಿನ ಪದಕಗಳು ಸೇರಿದಂತೆ ಒಟ್ಟು 16 ಪದಕಗಳನ್ನು ಗೆದ್ದಿತ್ತು. ಈ ಮೂಲಕ ಭಾರತ ಕಳೆದ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಒಟ್ಟು ಪದಕಗಳ ಸಂಖ್ಯೆಯಲ್ಲಿ ಶೂಟಿಂಗ್ ವಿಭಾಗವೇ ಸಿಂಹಪಾಲನ್ನು ಹೊಂದಿತ್ತು.
ಕಳೆದ ಕೆಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಶೂಟಿಂಗ್‌ನಲ್ಲಿ ಭಾರತೀಯರ ಅಬ್ಬರ
ಇನ್ನು ಕಳೆದ ಕಾಮನ್‌ವೆಲ್ತ್ ಗೇಮ್ಸ್ ಮಾತ್ರವಲ್ಲದೇ 2010 ಹಾಗೂ 2014ರಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟಗಳಲ್ಲಿಯೂ ಸಹ ಭಾರತ ಈ ಶೂಟಿಂಗ್ ವಿಭಾಗದಲ್ಲಿಯೇ ಹೆಚ್ಚಿನ ಪದಕಗಳನ್ನು ಗೆದ್ದಿತ್ತು. ಹೀಗಾಗಿ ಈ ಬಾರಿ ಶೂಟಿಂಗ್ ಕ್ರೀಡೆ ಇಲ್ಲದೇ ಭಾರತ ಹೆಚ್ಚು ಪದಕಗಳನ್ನು ಗಳಿಸುವಲ್ಲಿ ವಿಫಲವಾಗಿದೆ ಎನ್ನಬಹುದು.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed