ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: ಧ್ವಜಧಾರಿಯಾಗಿ ಭಾರತವನ್ನು ಮುನ್ನಡೆಸಿದ ಪಿವಿ ಸಿಂಧು, ಮನ್‌ಪ್ರೀತ್ ಸಿಂಗ್; ದಿನ 1ರ ಭಾರತದ ವೇಳಾಪಟ್ಟಿ

CWG 2022 Opening Ceremony: PV Sindhu And Manpreet Singh Lead India As Flagbearer

ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಬರ್ಮಿಂಗ್‌ಹ್ಯಾಮ್ 2022 ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಗಳಾಗಿ ಭಾರತ ತಂಡವನ್ನು ಮುನ್ನಡೆಸಿದರು.

ಗುರುವಾರದಿಂದ ಪ್ರಾರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್‌ನ 22ನೇ ಆವೃತ್ತಿಗಾಗಿ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್ ಮತ್ತು ವೆಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದಲ್ಲಿ ದಾಖಲೆಯ 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಎಲ್ಲಾ 6,500 ಕ್ರೀಡಾಪಟುಗಳು ಮತ್ತು ತಂಡದ ಅಧಿಕಾರಿಗಳು ಇಲ್ಲಿ ಸೇರಿದ್ದಾರೆ.

"ಇಂತಹ ಕ್ರೀಡಾ ಕೂಟದಲ್ಲಿ ಭಾರತದ ತುಕಡಿಯನ್ನು ಮುನ್ನಡೆಸುವ ಮತ್ತು ಧ್ವಜವನ್ನು ಹಿಡಿಯುವ ಜವಾಬ್ದಾರಿಯನ್ನು ನೀಡಿರುವುದು ದೊಡ್ಡ ಗೌರವ. ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ನನ್ನ ಎಲ್ಲಾ ಸಹವರ್ತಿ ತಂಡಕ್ಕೆ ಗೇಮ್ಸ್‌ಗೆ ಶುಭ ಹಾರೈಸುತ್ತೇನೆ. ನನ್ನನ್ನು ಧ್ವಜಧಾರಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಗೆ ಧನ್ಯವಾದ ಹೇಳಲು ಬಯಸುತ್ತೇನೆ." ಎಂದು ಪಿವಿ ಸಿಂಧು ಹೇಳಿದ್ದಾರೆ.

CWG 2022 ಭಾರತದ ವೇಳಾಪಟ್ಟಿ ದಿನ 1:
ಟೀಮ್ ಇಂಡಿಯಾ ತನ್ನ ಕಾಮನ್‌ವೆಲ್ತ್ ಗೇಮ್ಸ್ 2022ರ ಅಭಿಯಾನವನ್ನು ಜುಲೈ 29ರಿಂದ ಪ್ರಾರಂಭಿಸಲಿದೆ. ಸಾಕಷ್ಟು ಪದಕ ವಿಜೇತರು ತಮ್ಮ ಅಭಿಯಾನವನ್ನು ಪ್ರಾರಂಭಿಸಲು ಮತ್ತು ದೇಶಕ್ಕೆ ಪ್ರಶಸ್ತಿಗಳನ್ನು ತರಲು ಕಾತುರರಾಗಿದ್ದಾರೆ.

ಕಳೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 66 ಪದಕಗಳನ್ನು ಗೆದ್ದಿದೆ. ಇದರಲ್ಲಿ ತಲಾ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚು ಸೇರಿದೆ. ಇನ್ನು ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ತನ್ನ ಚೊಚ್ಚಲ ಪದಕ, ಬೆಳ್ಳಿಯನ್ನು ಗೆದ್ದುಕೊಂಡಿರುವ ತಮ್ಮ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನು ಮಿಸ್ ಮಾಡಿಕೊಳ್ಳಲಿದೆ.

CWG 2022 Opening Ceremony: PV Sindhu And Manpreet Singh Lead India As Flagbearer

ನೀರಜ್ ಚೋಪ್ರಾಗೆ ತೊಡೆಯ ಗಾಯದ ಸಮಸ್ಯೆ ಇದೆ ಮತ್ತು ಕನಿಷ್ಠ ಒಂದು ವಾರದ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಈ ಕಾರಣದಿಂದಾಗಿ ಅವರು CWG ಯಿಂದ ಹಿಂದೆ ಸರಿಯಲು ನಿರ್ಧರಿಸಿದರು. 2018ರಲ್ಲಿ ಗೋಲ್ಡ್ ಕೋಸ್ಟ್‌ನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಜಾವೆಲಿನ್‌ನಲ್ಲಿ ಚಿನ್ನವನ್ನು ಗೆದ್ದಿದ್ದರು.

ಕಾಮನ್ವೆಲ್ತ್ ಗೇಮ್ಸ್ (CWG) 2022 ರಲ್ಲಿ ಭಾರತದ ದಿನದ 1 ವೇಳಾಪಟ್ಟಿ ಮತ್ತು ಭಾರತೀಯ ಕಾಲಮಾನ

ಲಾನ್ ಬೌಲ್- ಸಂಜೆ 05:30 pm IST

ಸುನಿಲ್ ಬಹದ್ದೂರ್

ಚಂದನ್ ಕುಮಾರ್ ಸಿಂಗ್

ನವನೀತ್ ಸಿಂಗ್

ದಿನೇಶ್ ಕುಮಾರ್

ಮೃದುಲ್ ಬೊರ್ಗೊಹೈನ್

ಪಿಂಕಿ

ತಾನಿಯಾ ಚೌಧರಿ

ರೂಪಾ ರಾಣಿ ಟಿರ್ಕಿ

ನಯನ್ ಮೋನಿ ಸೈಕಿಯಾ

ಸುಂದರ ಚೌಬೆ

ಟೇಬಲ್ ಟೆನ್ನಿಸ್- ಸಂಜೆ 06:30 pm IST

ಪುರುಷರ ಮತ್ತು ಮಹಿಳೆಯರ ತಂಡದ ಈವೆಂಟ್ ಅರ್ಹತಾ ಸುತ್ತು 1

ಮಹಿಳೆಯರ ಟೇಬಲ್ ಟೆನಿಸ್ ತಂಡ: ಮಾಣಿಕಾ ಬಾತ್ರಾ, ಶ್ರೀಜಾ ಅಕುಲಾ, ರೀತ್ ರಿಶ್ಯಾ, ದಿಯಾ ಚಿತಾಲೆ.

ಪುರುಷರ ಟೇಬಲ್ ಟೆನಿಸ್ ತಂಡ: ಶರತ್ ಕಮಲ್, ಜ್ಞಾನಶೇಖರನ್ ಸತ್ಯನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ.

ಈಜು - 07:30 pm IST

ಸಜನ್ ಪ್ರಕಾಶ್

ಶ್ರೀಹರಿ ನಟರಾಜ್

ಕುಶಾಗ್ರ ರಾವತ್

ಮಹಿಳೆಯರ ಟಿ20 ಕ್ರಿಕೆಟ್- 08:00 pm IST

ಆಸ್ಟ್ರೇಲಿಯಾ vs ಭಾರತ ಗುಂಪು ಪಂದ್ಯ

ಟ್ರಯಥಾಲನ್

ಮಹಿಳೆಯರ ವೈಯಕ್ತಿಕ (ಸ್ಪ್ರಿಂಟ್ ದೂರ) ಫೈನಲ್ - 08:00 pm IST

ಸಂಜನಾ ಜೋಶಿ

ಪ್ರಜ್ಞಾ ಮೋಹನ್

ಬಾಕ್ಸಿಂಗ್ - 9:00 pm - 3 AM IST

ಶಿವ ಥಾಪಾ- ಪುರುಷರ ಲೈಟ್‌ವೆಲ್ಟರ್ ರೌಂಡ್ 32

ಸುಮಿತ್ ಕುಂದು- ಪುರುಷರ 75 ಕೆಜಿ ಸುತ್ತಿನ 32

ರೋಹಿತ್ ಟೋಕಾಸ್: ಪುರುಷರ 67 ಕೆಜಿ (R 32)

ಆಶಿಶ್ ಚೌಧರಿ: ಪುರುಷರ 75 ಕೆಜಿ (R 32)

ಸ್ಕ್ವಾಷ್ - 09:00 pm IST

ಪುರುಷರ ಸಿಂಗಲ್ಸ್- ರಮಿತ್ ಟಂಡನ್, ಸೌರವ್ ಘೋಷಾಲ್, ಅಭಯ್ ಸಿಂಗ್.

ಮಹಿಳೆಯರ ಸಿಂಗಲ್ಸ್- ಜೋಷ್ನಾ ಚಿನಪ್ಪ, ಅನಾಹತ್ ಸಿಂಗ್, ಸುನಯ್ನಾ ಕುರುವಿಲ್ಲ

ಬ್ಯಾಡ್ಮಿಂಟನ್ - ರಾತ್ರಿ 11:00 IST

ಮಿಶ್ರ ತಂಡ ಈವೆಂಟ್ ಅರ್ಹತಾ ಸುತ್ತು 1- ಭಾರತ ವಿರುದ್ಧ ಪಾಕಿಸ್ತಾನ.

ಹಾಕಿ - ಸುಮಾರು 6.30 PM

ಮಹಿಳೆಯರ ಗುಂಪು ಪಂದ್ಯ: ಭಾರತ ವಿರುದ್ಧ ಘಾನಾ

Story first published: Friday, July 29, 2022, 16:06 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X