Google Search 2022: ಅತಿ ಹೆಚ್ಚು ಹುಡುಕಿದ ಕ್ರೀಡಾಕೂಟಗಳಲ್ಲಿ IPLಗೆ ಮೊದಲ ಸ್ಥಾನ; ಇತರೆ ಕ್ರೀಡೆಗಳ ಪಟ್ಟಿ

ಗೂಗಲ್ ಇಂಡಿಯಾ ಈ ವರ್ಷದ "ಇಯರ್ ಇನ್ ಸರ್ಚ್' ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದು ಕಳೆದ 12 ತಿಂಗಳುಗಳಲ್ಲಿ ಗೂಗಲ್ ಸರ್ಚ್‌ನಲ್ಲಿನ ಟಾಪ್ ಕ್ರೀಡಾಕೂಟಗಳ ಟ್ರೆಂಡ್‌ಗಳನ್ನು ತೋರಿಸಿದೆ. ಭಾರತ ಮೂಲದ ಐಪಿಎಲ್ ಅತ್ಯುತ್ತಮ ಕ್ರಿಕೆಟ್ ಮತ್ತು ಕ್ರೀಡಾ ಪಂದ್ಯಾವಳಿಗಳಲ್ಲಿ ಮೊದಲ ಸ್ಥಾನ ಪಡೆದಿದೆ.

ಕ್ರಿಕೆಟ್ ಅನ್ನು ಧರ್ಮದಂತೆ ಪರಿಗಣಿಸುವ ಭಾರತದಲ್ಲಿ ಇತರ ಕ್ರೀಡೆಗಳನ್ನೂ ಅತ್ಯಂತ ನಿಕಟವಾಗಿ ಅನುಸರಿಸುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕೊರೊನಾ ವೈರಸ್ ನಂತರ 2022ರ ವರ್ಷ ಹಲವಾರು ಪ್ರಮುಖ ಕ್ರೀಡಾಕೂಟಗಳೊಂದಿಗೆ ಕ್ರೀಡಾ ಪ್ರಪಂಚಕ್ಕೆ ಬಿಡುವಿಲ್ಲದ ವರ್ಷವಾಗಿದೆ.

IND vs BAN: 2022ರಲ್ಲಿ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದ ಮೊಹಮ್ಮದ್ ಸಿರಾಜ್IND vs BAN: 2022ರಲ್ಲಿ ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದ ಮೊಹಮ್ಮದ್ ಸಿರಾಜ್

2022ರಲ್ಲಿ ಗೂಗಲ್ ಹುಡುಕಾಟದಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚು ಹುಡುಕಲ್ಪಟ್ಟ ಕ್ರೀಡಾಕೂಟವಾಗಿ ಹೊರಹೊಮ್ಮಿದೆ.

ಟಾಪ್ 10 ಹುಡುಕಾಟದಲ್ಲಿ ಐಪಿಎಲ್ ಮೊದಲ ಸ್ಥಾನ

ಟಾಪ್ 10 ಹುಡುಕಾಟದಲ್ಲಿ ಐಪಿಎಲ್ ಮೊದಲ ಸ್ಥಾನ

ವಾಸ್ತವವಾಗಿ ಈ ವರ್ಷದ ಟಾಪ್ 10 ಕ್ರೀಡಾಕೂಟಗಳಲ್ಲಿ ನಾಲ್ಕು ಕ್ರಿಕೆಟ್‌ಗೆ ಸಂಬಂಧಿಸಿದ್ದಾಗಿವೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಕ್ರೀಡಾಕೂಟಗಳು ಪ್ರೇಕ್ಷಕರಿಲ್ಲದೆ ನಡೆಯುತ್ತಿದ್ದವು. ಆದರೆ 2022ರಲ್ಲಿ ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದು ಕೆಲವು ದೊಡ್ಡ ಕ್ರೀಡಾಕೂಟಗಳನ್ನು ಲೈವ್ ಆಗಿ ವೀಕ್ಷಿಸಿದ್ದಾರೆ.

ಗೂಗಲ್‌ನ ಟಾಪ್ 10 ಹುಡುಕಾಟದಲ್ಲಿ ಐಪಿಎಲ್ ಮೊದಲ ಸ್ಥಾನವನ್ನು ಪಡೆದರೆ, ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಎರಡನೇ ಅತಿ ಹೆಚ್ಚು ಹುಡುಕಾಟದ ಕ್ರೀಡಾ ವಿಷಯವಾಗಿದೆ. ಅನಂತರ ಯುಎಇನಲ್ಲಿ ನಡೆದ 2022ರ ಏಷ್ಯಾ ಕಪ್ ಮೂರನೇ ಸ್ಥಾನ ಪಡೆದಿದ್ದರೆ, ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ನಾಲ್ಕನೇ ಸ್ಥಾನದಲ್ಲಿದೆ.

ಪ್ರೊ ಕಬಡ್ಡಿ ಲೀಗ್ ಏಳನೇ ಸ್ಥಾನ

ಪ್ರೊ ಕಬಡ್ಡಿ ಲೀಗ್ ಏಳನೇ ಸ್ಥಾನ

ಇಂಗ್ಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಐದನೇ ಸ್ಥಾನ ಪಡೆದಿದ್ದರೆ, ಭಾರತದ ಫುಟ್ಬಾಲ್ ಪಂದ್ಯಾವಳಿ ಇಂಡಿಯನ್ ಸೂಪರ್ ಲೀಗ್ ಆರನೇ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಏಳನೇ ಹೆಚ್ಚು ಹುಡುಕಲ್ಪಟ್ಟ ಕ್ರೀಡಾಕೂಟವಾಗಿದೆ.

ಇನ್ನು ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಎಂಟನೇ ಸ್ಥಾನ ಪಡೆದಿದ್ದರೆ, ಟೆನ್ನಿಸ್ ಕ್ರೀಡಾಕೂಟ ಆಸ್ಟ್ರೇಲಿಯನ್ ಓಪನ್ ಒಂಬತ್ತನೇ ಸ್ಥಾನದಲ್ಲಿದೆ. ಇದೇ ವೇಳೆ ಮತ್ತೊಂದು ಟೆನ್ನಿಸ್ ಕ್ರೀಡಾ ವಿಂಬಲ್ಡನ್ ಹತ್ತನೇ ಸ್ಥಾನ ಪಡೆದುಕೊಂಡಿದೆ.

2022ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಕ್ರೀಡಾಕೂಟಗಳ ಪಟ್ಟಿ

2022ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಕ್ರೀಡಾಕೂಟಗಳ ಪಟ್ಟಿ

1) ಇಂಡಿಯನ್ ಪ್ರೀಮಿಯರ್ ಲೀಗ್
2) ಫಿಫಾ ವಿಶ್ವಕಪ್
3) ಏಷ್ಯಾ ಕಪ್
4) ಐಸಿಸಿ ಟಿ20 ವಿಶ್ವಕಪ್
5) ಕಾಮನ್ವೆಲ್ತ್ ಗೇಮ್ಸ್
6) ಇಂಡಿಯನ್ ಸೂಪರ್ ಲೀಗ್
7) ಪ್ರೊ ಕಬಡ್ಡಿ ಲೀಗ್
8) ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್
9) ಆಸ್ಟ್ರೇಲಿಯನ್ ಓಪನ್
10) ವಿಂಬಲ್ಡನ್

For Quick Alerts
ALLOW NOTIFICATIONS
For Daily Alerts
Story first published: Wednesday, December 7, 2022, 18:32 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X