ಇಂಡಿಯನ್ ನ್ಯಾಷನಲ್ ಸ್ಪ್ರಿಂಟ್ ಚಾಂಪಿಯನ್‌ಶಿಪ್ 2022: ಕರ್ನಾಟಕದ ನಟರಾಜ್ ಚಾಂಪಿಯನ್

ಇಂಡಿಯನ್ ನ್ಯಾಷನಲ್ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್‌ಶಿಪ್ 2022ರಲ್ಲಿ ಕರ್ನಾಟಕದ ನಟರಾಜ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ಇರುವ ಟ್ರೈಬಲ್ ಕೆಫೆಯಲ್ಲಿ ನಡೆದ ರೇಸ್‌ನಲ್ಲಿ ನಟರಾಜ್ ಮೊದಲ ಸ್ಥಾನ ಪಡೆದರು.

ಭಾರೀ ರೋಚಕತೆಯಿಂದ ಕೂಡಿದ್ದ ರೇಸ್‌ನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚಾಲಕರು ಪಾಲ್ಗೊಂಡಿದ್ದರು. ಕರ್ನಾಟಕದ ಅಗ್ರ ರೇಸರ್‌ಗಳಲ್ಲಿ ಒಬ್ಬರಾದ ರಾಜೇಂದ್ರ ಇ. 2ನೇ ಸ್ಥಾನ ಪಡೆದರು. ಸ್ಯಾಮುಯಲ್ ಜೇಕಬ್ 3ನೇ ಸ್ಥಾನ ಗಳಿಸಿದರು.

ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಬುಮ್ರಾಗೆ ಸರಿಸಮ ಈತ‌, ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಬುಮ್ರಾಗೆ ಸರಿಸಮ ಈತ‌, ಆಯ್ಕೆಯಾಗದೇ ಇರುವುದು ದುರಂತ: ಮ್ಯಾಥ್ಯೂ ಹೇಡನ್

600 ಸಿಸಿ ವರೆಗಿನ ಸಾಮರ್ಥ್ಯದ ಬೈಕ್‌ಗಳ ರೇಸ್‌ನಲ್ಲಿ ರಾಜೇಂದ್ರ ಇ ಮೊದಲ ಸ್ಥಾನ ಪಡೆದರೆ, ನಟರಾಜ್ 2ನೇ ಸ್ಥಾನ ಗಳಿಸಿದರು. ಸ್ಯಾಮುಯಲ್ ಜೇಕಬ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ಒಟ್ಟು 22 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಒಟ್ಟಾರೆ ರ್ಯಾಲಿ ಸ್ಪ್ರಿಂಟ್‌ನಲ್ಲಿ 100ಕ್ಕೂ ಹೆಚ್ಚು ಸ್ಪರ್ಧಿಗಳು ಕಣಕ್ಕಿಳಿದಿದ್ದರು. ಇಂಡಿಯನ್ ನಾಷನಲ್ ಱಲಿ ಚಾಂಪಿಯನ್​​ಶಿಪ್​ನ ದಕ್ಷಿಣ ವಲಯದ ರೇಸ್ ಇದಾಗಿದೆ. ಎಲ್ಲಾ ವಲಯಗಳಲ್ಲಿ ಗೆದ್ದವರು, ಗೋವಾದಲ್ಲಿ ನಡೆಯೋ ಫೈನಲ್​ನಲ್ಲಿ ಪಾಲ್ಗೊಳ್ಳಲಿದ್ದು, ಕಡಲ ನಗರಿಯಲ್ಲಿ ನ್ಯಾಷನಲ್ ಚಾಂಪಿಯನ್ ಯಾರು ಅನ್ನೋದು ನಿರ್ಧಾರವಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, September 18, 2022, 13:23 [IST]
Other articles published on Sep 18, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X