ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಯೋಗೇಂದ್ರ ಮಾದಪ್ಪ

Nammura Pratibhe: Karnatakas Yogendra Madappa won silver medal at 42nd national championship

60 ವರ್ಷ ವಯಸ್ಸಿನ ಯೋಗೇಂದ್ರ ಮಾದಪ್ಪ ಕೇಂದ್ರ ಸರ್ಕಾರದ ಸರಕು ಮತ್ತು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇತ್ತೀಚೆಗಷ್ಟೆ ಚೆನ್ನೈನ ಜವಹರಲಾಲ್ ಕ್ರೀಡಾಂಗಣದಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 42ನೇ ನ್ಯಾಷನಲ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 2000 ಮೀಟರ್ ಸ್ಟೀಪಲ್‌ಚೇಸ್ ಓಟದಲ್ಲಿ ರಜತ ಪದಕವನ್ನು ಗೆದ್ದು, ತಮ್ಮ ಪದಕ ಪಟ್ಟಿಗೆ ಮಗದೊಂದು ಪದಕವನ್ನು ಸೇರಿಸಿಕೊಂಡಿದ್ದಾರೆ.

tax

ಯೋಗೇಂದ್ರ ಮಾದಪ್ಪ ಅವರು ಮೂಲತಃ ಮೈಸೂರಿನವರಾಗಿದ್ದು, ಅವರು ತಮ್ಮ ಬಾಲ್ಯದಲ್ಲಿದ್ದಾಗ ಕ್ರೀಡಾಪಟುವಾಗಬೇಕು ಎಂಬ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ, ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗ ಎನ್‌ಸಿಸಿ ಕೆಡೆಟ್ ಆಗಿದ್ದ ಯೋಗೇಂದ್ರ ಮಾದಪ್ಪ ಅವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಕನಸನ್ನು ಹೊಂದಿದ್ದರು. ಇನ್ನು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಬೇಕೆಂದರೆ 6 ಕಿಲೋ ಮೀಟರ್ ದೂರದ ಅಂತರದ ಓಟದಲ್ಲಿ ಭಾಗವಹಿಸಿ ಗೆಲ್ಲಲೇಬೇಕಾಗಿತ್ತು. ಆದರೂ ಛಲ ಬಿಡದ ಯೋಗೇಂದ್ರ ಮಾದಪ್ಪ ಪಿಯು ಕಾಲೇಜಿನಲ್ಲಿದ್ದಾಗ ತಮ್ಮ ಈ ಕನಸನ್ನು ನನಸು ಮಾಡಿಕೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಜಡೇಜಾ ಔಟ್‌?: ಉತ್ತರ ಕೊಟ್ಟ ಸಿಎಸ್‌ಕೆ ಸಿಇಒ ಹೇಳಿದ್ದಿಷ್ಟುಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಜಡೇಜಾ ಔಟ್‌?: ಉತ್ತರ ಕೊಟ್ಟ ಸಿಎಸ್‌ಕೆ ಸಿಇಒ ಹೇಳಿದ್ದಿಷ್ಟು

ನಂತರವೂ ಸಹ ಓಟವನ್ನು ಮುನ್ನಡೆಸಿದ ಯೋಗೇಂದ್ರ ಮಾದಪ್ಪ ಅವರು 1981ರಿಂದ ಒಂದು ದಶಕದವರೆಗೆ ಮೈಸೂರು, ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಅಥ್ಲೆಟಿಕ್ ತಂಡಗಳ ಭಾಗವಾಗಿದ್ದರು ಹಾಗೂ ಇದು ಅವರಿಗೆ ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಇಲಾಖೆಯಲ್ಲಿ ಹುದ್ದೆಯನ್ನೂ ಕೂಡ ತಂದುಕೊಟ್ಟಿತ್ತು. 1982ರಿಂದ ಐದು ವರ್ಷಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯ ಅಥ್ಲೆಟಿಕ್ ತಂಡದ ಸದಸ್ಯರಾಗಿದ್ದ ಯೋಗೇಂದ್ರ ಮಾದಪ್ಪ ಒಮ್ಮೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು ಹಾಗೂ ಆರು ವರ್ಷಗಳ ಕಾಲ ಇವರು ಕರ್ನಾಟಕ ಅಥ್ಲೆಟಿಕ್ ತಂಡದ ಸದಸ್ಯನಾಗಿದ್ದರು.

a

ಇನ್ನು ಕಾಲೇಜಿನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಕನಸನ್ನು ಹೊಂದಿದ್ದ ಯೋಗೇಂದ್ರ ಮಾದಪ್ಪ ಮಾಸ್ಟರ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡರು. ರಾಜ್ಯ ತಂಡದ ಸದಸ್ಯರಾಗಿದ್ದ ಇವರು ಕೆಲಸ ಪಡೆದ ನಂತರವೂ ತಮ್ಮ ತಾಲೀಮನ್ನು ಮುಂದುವರೆಸಿದ್ದರು. 2010ರಲ್ಲಿ ಮೈಸೂರಿನಲ್ಲಿ ಆಯೋಜನೆಯಾಗಿದ್ದ ಕಾಮನ್‌ವೆಲ್ತ್ ರಿಲೇ ಬೇಟನ್‌ನಲ್ಲಿ ಭಾಗವಹಿಸಿದ್ದ ಯೋಗೇಂದ್ರ ಮಾದಪ್ಪ ಅಲ್ಲಿ ಭಾಗವಹಿಸಿದ್ದ ವಿದೇಶಿ ಮಾಸ್ಟರ್ಸ್ ಕ್ರೀಡಾಪಟುಗಳನ್ನು ಕಂಡು ಪ್ರೇರೇಪಿತರಾಗಿ ತಾವೂ ಸಹ ಮಾಸ್ಟರ್ ಕ್ರೀಡಾಪಟು ಆಗಬೇಕೆಂದು ಪಣತೊಟ್ಟರು.

ಪಂಜಾಬ್ ವಿರುದ್ಧ ಆರ್‌ಸಿಬಿ ಸೋತ ನಂತರ ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆಲ್ಲಬೇಕು?ಪಂಜಾಬ್ ವಿರುದ್ಧ ಆರ್‌ಸಿಬಿ ಸೋತ ನಂತರ ಪ್ಲೇಆಫ್ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆಲ್ಲಬೇಕು?

ಅದರಂತೆ ಮಾಸ್ಟರ್ ಅಥ್ಲೆಟ್ ಆಗುವಲ್ಲಿ ಯೋಗೇಂದ್ರ ಮಾದಪ್ಪ ಯಶಸ್ವಿಯಾಗಿದ್ದು, ಅಂದಿನಿಂದ ಹಲವಾರು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. 2010ರಲ್ಲಿ ಮಲೇಷಿಯಾ, 2011ರಲ್ಲಿ ಅಮೆರಿಕಾ ದೇಶಗಳಲ್ಲಿ ಭಾಗವಹಿಸಿದ್ದ ಇವರು 2012ರಲ್ಲಿ ತೈವಾನ್‌ನಲ್ಲಿ ನಡೆದಿದ್ದ ಏಷ್ಯನ್ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ 3000 ಮೀಟರ್ ಸ್ಟೀಪಲ್‌ಚೇಸ್ ಓಟದಲ್ಲಿ ಭಾಗವಹಿಸಿದ್ದರು. 2014ರಲ್ಲಿ ಜಪಾನ್‌ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 4x400 ರಿಲೇ ಓಟದಲ್ಲಿ ಭಾಗವಹಿಸಿದ್ದ ಅವರು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಬೆಳಗ್ಗೆ ಅಥವಾ ಸಂಜೆ ವ್ಯಾಯಾಮ ಮತ್ತು ತಾಲೀಮನ್ನು ನಡೆಸುವ ಯೋಗೇಂದ್ರ ಮಾದಪ್ಪ ಹಲವು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.

Story first published: Saturday, May 14, 2022, 23:18 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X