Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾವೈರಸ್‌ಗೆ ಪಾಕಿಸ್ತಾನ ಸ್ಕ್ವಾಶ್ ದಂತಕತೆ ಅಝಾಮ್ ಖಾನ್ ಬಲಿ

Pakistan squash great Azam Khan dies of Covid-19 in London

ಕರಾಚಿ, ಮಾರ್ಚ್ 30: ಕೊರೊನಾವೈರಸ್‌ನಿಂದಾಗಿ ಪಾಕಿಸ್ತಾನ ಸ್ಕ್ವಾಶ್ ದಂತಕತೆ ಅಝಾಮ್ ಅಲಿ ಖಾನ್ ಮೃತದಾಗಿದ್ದಾರೆ. ಲಂಡನ್‌ನಲ್ಲಿ ಕೊನೆಯುಸಿರೆಳೆದಿರುವ ಖಾನ್‌ಗೆ 95 ವರ್ಷ ವಯಸ್ಸಾಗಿತ್ತು. ಕಳೆದ ವಾರ ಪರೀಕ್ಷೆಯ ವೇಳೆ ಖಾನ್‌ಗೆ ಕೋವಿಡ್-19 ಇದ್ದಿದ್ದು ಪತ್ತೆಯಾಗಿತ್ತು.

1959ರಿಂದ 1961ರ ಅವಧಿಯಲ್ಲಿ ಅಝಾಮ್‌ ಖಾನ್ ಯಶಸ್ವಿಯಾಗಿ ಬ್ರಿಟಿಷ್ ಓಪನ್ ಪ್ರಶಸ್ತಿ ಜಯಿಸಿದ್ದ ಹೆಗ್ಗಳಿಕೆ ಹೊಂದಿದ್ದರು. ಮಾರಕ ಕೊರೊನಾವೈರಸ್ ತಲುಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಮಾರ್ಚ್ 28) ಲಂಡನ್‌ನ ಈಲಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸ್ಕ್ವಾಶ್ ದಿಗ್ಗಜ ಹಾಶಿಮ್ ಖಾನ್ ಅವರ ಕಿರಿಯ ಸಹೋದರರಾಗಿರುವ ಅಝಾಮ್, ವಿಶ್ವದಾದ್ಯಂತ ಅತ್ಯುತ್ತಮ ಸ್ಕ್ವಾಶ್ ಆಟಗಾರರೆಂದು ಗುರುತಿಸಿಕೊಂಡವರು. ಮೊಣಕಾಲು ಗಾಯ ಮತ್ತು ತನ್ನ 14 ವರ್ಷದ ಮಗನ ದುರಂತಮಯ ಸಾವಿನಿಂದಾಗಿ ಖಾನ್ 1962ರಲ್ಲಿ ಆಟ ನಿಲ್ಲಿಸಿದ್ದರು.

ಗಂಭೀರವಾಗಿ ಗಾಯಗೊಂಡಿದ್ದ ಮೊಣಕಾಲು ಹೇಗೋ 2 ವರ್ಷಗಳ ಬಳಿಕ ಗುಣವಾಯಿತಾದರೂ ತನಗೆ ತನ್ನ ಮಗನ ಸಾವಿನಿಂದ ಇನ್ನೂ ಚೇತರಿಸಿಕೊಳ್ಳಲಾಗುತ್ತಿಲ್ಲ ಎಂದಿದ್ದ ಖಾನ್ ಅನಂತರ ಸ್ಕ್ವಾಶ್ ಆಡುವ ಗೋಜಿಗೇ ಹೋಗಿರಲಿಲ್ಲ. ಅಝಾಮ್ 1956ರಿಂದ ಯುನೈಟೆಡ್ ಕಿಂಗ್ಡಮ್‌ನಲ್ಲಿ ವಾಸವಿದ್ದರು.

Story first published: Monday, March 30, 2020, 19:24 [IST]
Other articles published on Mar 30, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+