ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಚಿನ್ನ ಗೆದ್ದ ಭಾರತದ ಕ್ರೀಡಾಳುಗಳು

By Mahesh

ಇಂಚಿಯಾನ್, ಅ.5: 17ನೇ ಆವೃತ್ತಿಯ ಏಷ್ಯನ್ ಗೇಮ್ಸ್ ದಕ್ಷಿಣ ಕೊರಿಯಾದಲ್ಲಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿದೆ. ಈ ಬಾರಿಯ ಗೇಮ್ಸ್‌ನಲ್ಲಿ 151 ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಚೀನಾ ಸತತ 9ನೇ ಬಾರಿಗೆ ನಂ.1 ಸ್ಥಾನ ಕಾಯ್ದುಕೊಂಡಿದೆ.ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ 14 ವಿಶ್ವ ದಾಖಲೆಗಳು ದಾಖಲಾಗಿದ್ದು, 40 ಏಷ್ಯಾ ದಾಖಲೆಗಳು ಮುರಿಯಲ್ಪಟ್ಟವು.

ಸಂಪೂರ್ಣ ಪದಕಗಳ ಪಟ್ಟಿ | ಏಷ್ಯನ್ ಗೇಮ್ಸ್ ಗ್ಯಾಲರಿ

79 ಚಿನ್ನ ಜಯಿಸಿದ್ದ ಆತಿಥೇಯ ಕೊರಿಯಾ ಎರಡನೆನೇ ಹಾಗೂ 47 ಚಿನ್ನ ಗೆದ್ದುಕೊಂಡ ಜಪಾನ್ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿತು. ಭಾರತ 57 ಪದಕ(11 ಚಿನ್ನ, 10 ಬೆಳ್ಳಿ, 36 ಕಂಚು) ಒಟ್ಟಾರೆ 8ನೇ ಸ್ಥಾನ ಪಡೆದುಕೊಂಡಿತು. 2010ರಲ್ಲಿ ಚೀನಾದಲ್ಲಿ ನಡೆದ ಏಷ್ಯಾಡ್ ನಲ್ಲಿ ಭಾರತ 65 ಪದಕ ಗೆದ್ದಿತ್ತು. ಈ ಬಾರಿ ನಾಲ್ಕು ವೈಯಕ್ತಿಕ ಚಿನ್ನದ ಪದಕ, 7 ತಂಡಗಳಿಂದ ಚಿನ್ನದ ಪದಕ ಗಳಿಸಿತು. ಚಿನ್ನದ ಪದಕ ವಿಜೇತರ ಚಿತ್ರ ಸಂಪುಟ ಇಲ್ಲಿದೆ

ಶೂಟರ್ ಜೀತು ರೈ

ಶೂಟರ್ ಜೀತು ರೈ

ಇಂಚಿಯಾನ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಶೂಟರ್ ಜೀತು ರೈ, 50 ಮೀ ಪಿಸ್ತೂಲ್ ಶೂಟಿಂಗ್ ಇವೆಂಟ್ ನಲ್ಲಿ ಚಿನ್ನ ಗೆದ್ದರು.

 ಪುರುಷರ ಬಿಲ್ಲುಗಾರಿಕೆ ತಂಡ

ಪುರುಷರ ಬಿಲ್ಲುಗಾರಿಕೆ ತಂಡ

ಎಡದಿಂದ ಬಲಕ್ಕೆ: ಸಂದೀಪ್ ಕುಮಾರ್, ರಜತ್ ಚೌಹಾಣ್, ಅಭಿಷೇಕ್ ವರ್ಮ

ಪುರುಷರ ಸ್ಕ್ವಾಶ್ ತಂಡ

ಪುರುಷರ ಸ್ಕ್ವಾಶ್ ತಂಡ

ಸೌರವ್ ಘೋಶಾಲ್, ಹರೀಂದರ್ ಪಾಲ್ ಸಿಂಗ್ ಸಂಧು, ಕುಶ್ ಕುಮಾರ್, ಮಹೇಶ್ ಮನೊಳ್ಕರ್

ಕುಸ್ತಿ ಪಟು ಯೋಗೇಶ್ವರ್ ದತ್

ಕುಸ್ತಿ ಪಟು ಯೋಗೇಶ್ವರ್ ದತ್

65 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿ ಪಟು ಯೋಗೇಶ್ವರ್ ದತ್.

ಡಿಸ್ಕಸ್ ಥ್ರೋ ಆಟ

ಡಿಸ್ಕಸ್ ಥ್ರೋ ಆಟ

ಮಹಿಳೆಯರ ಡಿಸ್ಕಸ್ ಥ್ರೋ ಆಟದಲ್ಲಿ ಚಿನ್ನದ ಪದಕ ಗೆದ್ದ ಸೀಮಾ ಪೂನಿಯಾ.

ಮಿಶ್ರ ಟೆನಿಸ್ ಸ್ಪರ್ಧೆ ಗೆದ್ದ ಜೋಡಿ

ಮಿಶ್ರ ಟೆನಿಸ್ ಸ್ಪರ್ಧೆ ಗೆದ್ದ ಜೋಡಿ

ಸಾಕೇತ್ ಮೈನೇನಿ ಹಾಗೂ ಸಾನಿಯಾ ಮಿರ್ಜಾ ಅವರು ಮಿಶ್ರ ಡಬಲ್ಸ್ ಟೆನಿಸ್ ನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ಬಾಕ್ಸಿಂಗ್ ನಲ್ಲಿ ಮೇರಿ ಕೋಮ್

ಬಾಕ್ಸಿಂಗ್ ನಲ್ಲಿ ಮೇರಿ ಕೋಮ್

48-51ಕೆಜಿ ವಿಭಾಗದ ಮಹಿಳೆಯರ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಗೆದ್ದ ಮೇರಿ ಕೋಮ್.

ಭಾರತ ಹಾಕಿ ತಂಡ

ಭಾರತ ಹಾಕಿ ತಂಡ

ಭಾರತ ಹಾಕಿ ತಂಡ ಫೈನಲ್ ನಲ್ಲಿ ಪಾಕಿಸ್ತಾನ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 4-2 ರಲ್ಲಿ ಸೋಲಿಸಿ 16 ವರ್ಷಗಳ ನಂತರ ಚಿನ್ನ ಗೆದ್ದಿದ್ದಾರೆ.

ಮಹಿಳೆಯರ 4 ‍‌x 400 ರಿಲೇ

ಮಹಿಳೆಯರ 4 ‍‌x 400 ರಿಲೇ

ಮಹಿಳೆಯರ 4 ‍‌x 400 ರಿಲೇ ಇವೆಂಟ್ ನಲ್ಲಿ ಚಿನ್ನದ ಪದಕ ಗೆದ್ದ ಎಂಆರ್ ಪೂವಮ್ಮ, ಟಿಂಟೂ ಲೂಕಾ, ಮಂದೀಪ್ ಕೌರ್, ಪ್ರಿಯಾಂಕಾ ಪನ್ವಾರ್.

ಕಬಡ್ಡಿ ಮಹಿಳೆಯರ ತಂಡ

ಕಬಡ್ಡಿ ಮಹಿಳೆಯರ ತಂಡ

ಮಮತಾ ಪೂಜಾರಿ ನೇತೃತ್ವದ ಕಬಡ್ಡಿ ಮಹಿಳೆಯರ ತಂಡ

ಕಬಡ್ಡಿ ಪುರುಷರ ತಂಡ

ಕಬಡ್ಡಿ ಪುರುಷರ ತಂಡ

ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದ ಪುರುಷರ ತಂಡ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X