ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಉಕ್ರೇನ್ ಮೇಲೆ ಆಕ್ರಮಣ: ರಷ್ಯನ್ ಗ್ರ್ಯಾಂಡ್ ಪ್ರಿಕ್ಸ್‌ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಫಾರ್ಮುಲಾ 1

Formula 1

ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್‌ನೊಂದಿಗಿನ ತನ್ನ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಮತ್ತು ಇನ್ನು ಮುಂದೆ ರಷ್ಯಾದಲ್ಲಿ ರೇಸ್ ಮಾಡುವುದಿಲ್ಲ ಎಂದು ಫಾರ್ಮುಲಾ ಒನ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಸೂಚಿಯ ಒಲಿಂಪಿಕ್ ಪಾರ್ಕ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾದ ಈವೆಂಟ್‌ನ 2022 ರನ್ನಿಂಗ್ ಅನ್ನು ಕಳೆದ ವಾರ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಈಗಾಗಲೇ ರದ್ದುಗೊಳಿಸಲಾಗಿತ್ತು.

ಬೇಬಿ ಎಬಿ ಕನಸು ನನಸಾಗಿದೆ: ಭಾರತದ ಈ ಕ್ರಿಕೆಟಿಗ ನನ್ನ ಸ್ಫೂರ್ತಿ ಎಂದ ಡೆವಾಲ್ಡ್‌ ಬ್ರೆವಿಸ್ಬೇಬಿ ಎಬಿ ಕನಸು ನನಸಾಗಿದೆ: ಭಾರತದ ಈ ಕ್ರಿಕೆಟಿಗ ನನ್ನ ಸ್ಫೂರ್ತಿ ಎಂದ ಡೆವಾಲ್ಡ್‌ ಬ್ರೆವಿಸ್

ಪ್ರಸ್ತುತ ಸಂದರ್ಭದಲ್ಲಿ ರಷ್ಯನ್ ಗ್ರ್ಯಾಂಡ್ ಪ್ರಿಕ್ಸ್‌ ಅನ್ನು ನಡೆಸಲು ಸಾಧ್ಯವಿಲ್ಲ ಎಂದು ಫಾರ್ಮುಲಾ ಒನ್ ಹೇಳಿದೆ. ಇತರೆ ಕ್ರೀಡಾ ಸಂಸ್ಥೆಗಳು ರಷ್ಯಾ ವಿರುದ್ಧ ವಿವಿಧ ಕ್ರಮ ಕೈಗೊಂಡ ಬಳಿಕ ಈ ನಿಧಾರವು ಹೊರಬಂದಿತ್ತು. ಇದ್ರ ಬೆನ್ನಲ್ಲೇ ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್‌ನೊಂದಿಗಿನ ಒಪ್ಪಂದವನ್ನೇ ಮುರಿದಿದೆ.

"ಫಾರ್ಮುಲಾ 1 ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್ ಪ್ರೊಮೊಟರ್‌ನೊಂದಿಗೆ ತನ್ನ ಒಪ್ಪಂದವನ್ನು ಮುಕ್ತಾಯಗೊಳಿಸಿದೆ ಎಂದು ಖಚಿತಪಡಿಸುತ್ತದೆ, ಅಂದರೆ ರಷ್ಯಾವು ಭವಿಷ್ಯದಲ್ಲಿ ಫಾರ್ಮುಲಾ ಒನ್ ರೇಸ್ ಹೊಂದಿರುವುದಿಲ್ಲ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಉಕೇನ್ ಮೇಲೆ ರಷ್ಯಾ ಆಕ್ರಮಣದ ಬಳಿಕ ಅನೇಕ ಕ್ರೀಡಾ ಸಂಘಟಕರು ಮತ್ತು ಸಂಸ್ಥೆಗಳು ರಷ್ಯಾದ ಸ್ಪರ್ಧಿಗಳ ಮೇಲೆ ಮತ್ತು ಅಲ್ಲಿನ ಕ್ರೀಡಾ ಸಂಸ್ಥೆಗಳಿಗೆ ನಿಷೇಧ ಹೇರಿದೆ.

ರಷ್ಯಾದಲ್ಲಿ ಪುಟಿನ್ ಅಧಿಕಾರದಲ್ಲಿ ಇರುವವರೆಗೆ ರಷ್ಯಾದಲ್ಲಿ ಸ್ಪರ್ಧಿಸುವಿದಲ್ಲ ಎಂದು ಫಾರ್ಮುಲಾ ಒನ್ ಘೋಷಿಸಿದೆ.

ಇತ್ತೀಚೆಗಷ್ಟೇ UEFA 2022 ರ ಚಾಂಪಿಯನ್ಸ್ ಲೀಗ್ ಫೈನಲ್ ಅನ್ನು ಸೇಂಟ್ ಪೀಟಸ್‌ಬರ್ಗ್‌ನಿಂದ ಪ್ಯಾರಿಸ್‌ಗೆ ಸ್ಥಳಾಂತರಿಸಲಾಗಿದೆ ಎಂದು ಘೋಷಿಸಿತು. ಇದೇ ಹಿನ್ನಲೆಯಲ್ಲಿ ಫಾರ್ಮುಲಾ ಒನ್ ಪ್ರಸ್ತುತ ಬೆಳವಣಿಗೆ ರಷ್ಯಾದ ಕ್ರೀಡೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿದೆ.

Story first published: Thursday, March 3, 2022, 19:53 [IST]
Other articles published on Mar 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X