ಬಾಲ ಪ್ರತಿಭೆ : ರುಹಾನ್ ಆಳ್ವಾ ಭವಿಷ್ಯದ ಎಫ್ 1 ಚಾಲಕ

By ಮಹೇಶ್ ಮಲ್ನಾಡ್

ಬೆಂಗಳೂರಿನ ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಮೂರನೇ ತರಗತಿಯ ವಿದ್ಯಾರ್ಥಿ ರುಹಾನ್ ನನ್ನು ಭಾರತದ ಭವಿಷ್ಯದ ಎಫ್ 1 ಚಾಲಕ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ತಕ್ಕಂತೆ ರುಹಾನ್ ಕೂಡಾ ಸಾಧನೆ ಮಾಡಿದ್ದಾನೆ ಕೂಡಾ. ಅಂತಾರಾಷ್ಟ್ರೀಯ ಮಟ್ಟದ ಎರಡು ರೇಸುಗಳಲ್ಲಿ ಎರಡನೇ ಸ್ಥಾನಗಳಿಸಿದ ರುಹಾನ್ ಗೆ ಎಫ್ 1 ಚಾಲಕನಾಗುವ ಕನಸಿದೆ. ಈ ಮಕ್ಕಳ ದಿನಾಚರಣೆ ನಿಮಿತ್ತ ವಿಶೇಷ ಲೇಖನ ಇಲ್ಲಿದೆ.. ಸಂದರ್ಶಕರು : ಅಪ್ರಯೇಯ ಸಿ.

'ಆಟದಲ್ಲಿ ಗೆಲುವು ಸೋಲು ಮಾಮೂಲಿ ಪ್ರಯತ್ನ ಮಾತ್ರ ಜಾರಿಯಲ್ಲಿರುತ್ತದೆ' ಎಂದು ಹೇಳುವ ಪುಟ್ಟ ಪೋರ ರುಹಾನ್ ಆಳ್ವಾ ಅಂತಾರಾಷ್ಟ್ರೀಯ ಮಟ್ಟದ ಕಾರ್ಟಿಂಗ್ ರೇಸ್ ಚಾಂಪಿಯನ್. ಎಂಟನೇ ವಯಸ್ಸಿಗೆ ಮಕ್ಕಳು ಸ್ಮಾರ್ಟ್ ಫೋನಿನಲ್ಲಿ ಕಾರ್ ರೇಸ್ ಆಡುವುದನ್ನು ಕಂಡಿರುತ್ತೀರಾ ಅದರೆ, ರುಹಾನ್ ರೇಸ್ ಕಾರು ಹತ್ತಿ 100 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುವುದನ್ನು ನೋಡುವುದೇ ಆನಂದ. [ಸಾವನ್ನು ಗೆದ್ದ ಎಫ್ 1 ವೀರ ಮೈಕಲ್ ಶೂಮಿ]

ಅಂತಾರಾಷ್ಟ್ರೀಯ ಮಟ್ಟದ ಎರಡು ಕಾರ್ಟಿಂಗ್ ರೇಸ್ ನಲ್ಲಿ ಸತತವಾಗಿ ಎರಡನೇ ಸ್ಥಾನ ಕಾಯ್ದುಕೊಂಡ ಸಾಧನೆ ಮಾಡಿದ್ದಾನೆ ರುಹಾನ್ ಆಳ್ವ. ಐಎಎಂಇ ಕ್ಲಬ್ ವಿಭಾಗದಲ್ಲಿ ಸ್ಪರ್ಧಿಸುವವರ ಪೈಕಿ ಹೊಸಬನಾದ ರುಹಾನ್ ಅವರು ಎರಡನೇ ಸ್ಥಾನ ಪಡೆದುಕೊಂಡು ಅಚ್ಚರಿ ಮೂಡಿಸಿದ್ದ ಪಿಎಫ್ ಅಂತಾರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಎಂಟು ಹಾಗೂ ಏಳನೇ ಸ್ಥಾನ ಗಳಿಸಿದ್ದಾನೆ.[ಇಂಗ್ಲೆಂಡಿನಲ್ಲಿ ಬೆಳಗಿದ ಬೆಂಗಳೂರಿನ ಬಾಲಕ]

ನನ್ನ ಮಗ ಬರೀ ಎಫ್ 1 ಕಾರು ಚಾಲಕ ಎನಿಸಿಕೊಂಡರೆ ಸಾಲದು ಎಫ್ 1 ಚಾಂಪಿಯನ್ ಆಗಬೇಕು ಎಂಬುದು ನನ್ನ ಮಹದಾಸೆ ಎಂದು ರುಹಾನ್ ತಂದೆ ಉಮಾಕಾಂತ್ ಆಳ್ವಾ ಹೇಳುತ್ತಾರೆ. ರುಹಾನ್ ಕನಸು ಸಾಕಾರಗೊಳಿಸಲು ಶ್ರಮಿಸುತ್ತಿರುವ ಅವರ ತಂದೆ ಉಮಾಕಾಂತ್ ಅವರು ನೀಡಿದ ಸಂದರ್ಶನದ ಮುಂದಿನ ಭಾಗ ಚಿತ್ರಗಳ ಜೊತೆ ಓದಿ...

ತಂದೆ ಉಮಾಕಾಂತ್ ಜೊತೆ ರುಹಾನ್ ಆಳ್ವಾ

ತಂದೆ ಉಮಾಕಾಂತ್ ಜೊತೆ ರುಹಾನ್ ಆಳ್ವಾ

ನನ್ನ ಮಗ ಬರೀ ಎಫ್ 1 ಕಾರು ಚಾಲಕ ಎನಿಸಿಕೊಂಡರೆ ಸಾಲದು ಎಫ್ 1 ಚಾಂಪಿಯನ್ ಆಗಬೇಕು ಎಂಬುದು ನನ್ನ ಮಹದಾಸೆ ಎಂದು ರುಹಾನ್ ತಂದೆ ಉಮಾಕಾಂತ್ ಆಳ್ವಾ ಹೇಳುತ್ತಾರೆ.

ಭಾರತದಲ್ಲಿ ಎಫ್ 1 ಜನಪ್ರಿಯವಾಗುತ್ತಿದೆ. ಜೊತೆಗೆ ಎಫ್ 1 ರೇಸಿನ ಚಾಲಕರು ಹೆಚ್ಚಾಗುತ್ತಿದ್ದಾರೆ. ಆದರೆ, ವಿಶ್ವಮಟ್ಟದಲ್ಲಿ ಚಾಂಪಿಯನ್ ಎನಿಸಿಕೊಳ್ಳುವ ವಿಶ್ವದ ವೇಗದ ಚಾಲಕ ಎಂಬ ಕೀರ್ತಿ ಗಳಿಸುವ ಮಟ್ಟಕ್ಕೆ ಇನ್ನೂ ಯಾರೂ ಬೆಳೆದಿಲ್ಲ. ಈ ಕನಸನ್ನು ನನ್ನ ಮಗ ಈಡೇರಿಸಲಿ ಎಂಬುದು ನನ್ನ ಆಸೆ ಎಂದರು.

2005ರಲ್ಲಿ ಯುಎಸ್ ಗ್ರಾಂಡ್ ಪ್ರೀನಲ್ಲಿ ನಾರಾಯಣ್ ಕಾರ್ತಿಕೇಯನ್ ಅವರು ನಾಲ್ಕನೇ ಸ್ಥಾನ ಗಳಿಸಿದ್ದೇ ಇದುವರೆಗಿನ ಭಾರತೀಯ ಚಾಲಕನ ದೊಡ್ಡ ಸಾಧನೆ.

ರುಹಾನ್ ಗಾಗಿ ಯುಕೆಗೆ ಪ್ರಯಾಣ

ರುಹಾನ್ ಗಾಗಿ ಯುಕೆಗೆ ಪ್ರಯಾಣ

ಯುಕೆಯಲ್ಲಿ ಮೊದಲ ರೇಸಿನಲ್ಲಿ ರುಹಾನ್ ತೋರಿದ ಸಾಧನೆಯನ್ನು ಕಂಡು ನಾನಷ್ಟೇ ಅಲ್ಲ ಅಲ್ಲಿನ ತಜ್ಞರು ಕೂಡಾ ಅ‌ಚ್ಚರಿ ಪಟ್ಟೆ. ಫ್ಯೂಷನ್ ಮೋಟರ್ ಸ್ಫೋರ್ಟ್ ನಲ್ಲಿ ರುಹಾನ್ ಸಾಧನೆ ನಂತರ ಅವನ ಇನ್ನಷ್ಟು ಕಲಿಕೆ ಹಾಗೂ ಅಭ್ಯಾಸಕ್ಕೆ ಇಂಗ್ಲೆಂಡ್ ಉತ್ತಮ ವೇದಿಕೆ ಒದಗಿಸಬಲ್ಲುದು ಎಂದು ನಿರ್ಧರಿಸಿ ನಾವು ಬೆಂಗಳೂರಿನಿಂದ ಯುಕೆಗೆ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ ಎಂದು ಉಮಾಕಾಂತ್ ಹೇಳಿದ್ದಾರೆ.

ಯುಕೆಗೆ ಶಿಫ್ಟ್ ಆಗುವುದು ಕಠಿಣ ನಿರ್ಧಾರವಾಗಿತ್ತು. ಅದರೆ, ರುಹಾನ್ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಗಿದೆ. 2015ರ ಆಗಸ್ಟ್ ವೇಳೆಗೆ ಯುಕೆಯಲ್ಲಿ ರುಹಾನ್ ತನ್ನ ಅಭ್ಯಾಸ ಆರಂಭಿಸಬಹುದು ಎಂದು ಉಮಾಕಾಂತ್ ಹೇಳಿದ್ದಾರೆ.

ಮೋಟರ್ ಸ್ಫೋರ್ಟ್ಸ್ ದುಬಾರಿ ಕ್ರೀಡೆ

ಮೋಟರ್ ಸ್ಫೋರ್ಟ್ಸ್ ದುಬಾರಿ ಕ್ರೀಡೆ

ಮೋಟರ್ ಸ್ಫೋರ್ಟ್ಸ್ ಸಾಹಸ ಕ್ರೀಡೆಯಷ್ಟೆ ಅಲ್ಲ ದುಬಾರಿ ಕೂಡಾ ಹೌದು. ಸುಮಾರು 70 ಲಕ್ಷ ರು.ಗೂ ಅಧಿಕ ಮೊತ್ತವನ್ನು ರುಹಾನ್ ನ ಕನಸಿಗಾಗಿ ಈ ವರ್ಷ ಉಮಾಕಾಂತ್ ಧಾರೆ ಎರೆದಿದ್ದಾರೆ. 2015ರಲ್ಲಿ ವರ್ಷಕ್ಕೆ 1 ಕೋಟಿ ರು.ನಂತೆ ಖರ್ಚಾಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಪ್ರತಿಭಾವಂತೆ ರುಹಾನ್ ಗೆ ಇದುವರೆವಿಗೂ ಯಾವುದೆ ಪ್ರಾಯೋಜಕರ ನೆರವು ಸಿಕ್ಕಿಲ್ಲ. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ತಿಳಿದೂ ಇಲ್ಲ.

12ನೇ ವಯಸ್ಸಿನ ತನಕ ಇಂಗ್ಲೆಂಡಿನಲ್ಲಿ ಅನೇಕ ರೇಸ್ ಗಳಲ್ಲಿ ಪಾಲ್ಗೊಳ್ಳಲಿರುವ ರುಹಾನ್ ನಂತರ ಯುರೋಪಿನ ಅನೇಕ ದೇಶಗಳ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾನೆ. ರೇಸಿಂಗ್ ನಲ್ಲಿ ಪಾಲ್ಗೊಳ್ಳಲು ಭಾರತದಿಂದ NOC ಪಡೆಯಲಾಗಿದೆ. ಅಲ್ಲದೆ, ಯುಕೆಯಲ್ಲಿ ಅಭ್ಯಾಸ ಮಾಡಿದರೂ ಎಂದಿಗೂ ಭಾರತೀಯ ಚಾಲಕನಾಗೇ ರುಹಾನ್ ಸ್ಪರ್ಧಿಸಲಿದ್ದಾನೆ.

ಮೂರುವರೆ ವರ್ಷದಲ್ಲೇ ರುಹಾನ್ ಗೆ ಆಸಕ್ತಿ

ಮೂರುವರೆ ವರ್ಷದಲ್ಲೇ ರುಹಾನ್ ಗೆ ಆಸಕ್ತಿ

ರುಹಾನ್ ತಂದೆ ಉಮಾಕಾಂತ್ ಕೂಡ ಮಾಜಿ ರ‍್ಯಾಲಿ ಚಾಲಕರಾಗಿದ್ದವರು, ಹೀಗಾಗಿ ಮನೆಯಲ್ಲಿ ಸಾಹಸ ಕ್ರೀಡೆ ಬಗ್ಗೆ ಮಗ ರುಹಾನ್ ಗೆ ಬಾಲ್ಯದಿಂದಲೇ ಪರಿಚಯ ಸಿಕ್ಕಿತ್ತು. ಮೂರುವರೆ ವರ್ಷ ವಯಸ್ಸಿನಲ್ಲೇ ರುಹಾನ್ ಗೆ ಆಟೋ ಮ್ಯಾಗಜೀನ್ ನತ್ತ ಕಣ್ಣು ಹಾಯಿಸತೊಡಗಿದ್ದ, ಆಟಿಕೆಗಳೆಲ್ಲವೂ ಕಾರುಗಳಾಗಿದ್ದವು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಚಿಕ್ಕವಯಸ್ಸಿನಲ್ಲೇ ಮೋಟರ್ ಕ್ರೀಡೆಯತ್ತ ವಾಲಿರುವ ರುಹಾನ್ ಓದಿನಲ್ಲೂ ಮುಂದಿದ್ದಾನೆ. ಅಂಕಗಳಿಗೆ ರೇಸಿನಲ್ಲಿ ಸಹಪಾಠಿಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾನೆ. ಶೇ 90ರಷ್ಟು ಅಂಕ ಗಳಿಸುತ್ತಾ ಬಂದಿದ್ದಾನೆ. ಅದರೆ, ಮುಂದಿನ ಸೆಪ್ಟೆಂಬರ್ 2015ರಿಂದ ಇಂಗ್ಲೆಂಡಿನಲ್ಲಿ ಹೊಸ ಶಾಲೆ, ಹೊಸ ಪರಿಸರಕ್ಕೆ ಹೊಂದಿಕೊಂಡು ಓದಿನ ಜೊತೆ ನೆಚ್ಚಿನ ಕ್ರೀಡೆಯ ಅಭ್ಯಾಸ ಮಾಡಬೇಕಾಗಿದೆ.

2014 ರಿಂದ 2023ರ ತನಕದ ವೇಳಾಪಟ್ಟಿ

2014 ರಿಂದ 2023ರ ತನಕದ ವೇಳಾಪಟ್ಟಿ

2014 ರಿಂದ 2023ರ ತನಕ ರುಹಾನ್ ಸ್ಪರ್ಧಿಸಲಿರುವ ರೇಸ್ ಗಳ ವಿವರ ಇಂತಿದೆ:

* ಲಿಟ್ಲ್ ಗ್ರೀನ್ ಮನ್ ಚಾಂಪಿಯನ್ ಶಿಪ್(ಬ್ರಿಟಿಷ್ ಚಾಂಪಿಯನ್ ಶಿಪ್)_

* 2016 ರಿಂದ 2017 ಸೂಪರ್ ಎಸ್ 1 ಸರಣಿ (ಬ್ರಿಟಿಷ್ ಚಾಂಪಿಯನ್ ಶಿಪ್)

* 2018 ರಿಂದ 2019 ಕೆಎಫ್ ಯುರೋ ಮ್ಯಾಕ್ಸ್ ಸರಣಿ(ಯುರೋಪಿಯನ್ ಚಾಂಪಿಯನ್ ಶಿಪ್)

* 2020 ರಲ್ಲಿ ಎಫ್ 4 ಸರಣಿ ಬ್ರಿಟಿಷ್ ಸೀರಿಸ್

* 2022-2023ರಲ್ಲಿ ಎಫ್ 3 ಸರಣಿ

* 2023ರಲ್ಲಿ ನೆಚ್ಚಿನ ಗುರಿಯಾದ ಫಾರ್ಮೂಲಾ 1 ರೇಸಿನಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾನೆ.

2014ರಲ್ಲಿ ರುಹಾನ್ ಸಾಧನೆಯ ಪಟ್ಟಿ

2014ರಲ್ಲಿ ರುಹಾನ್ ಸಾಧನೆಯ ಪಟ್ಟಿ

ರುಹಾನ್ ಸ್ಪರ್ಧಿಗಳೆಲ್ಲರೂ 11 ರಿಂದ 12 ವರ್ಷ ವಯೋಮಿತಿಯುಳ್ಳವರು, ಅದರೆ, 26 ದಿನಗಳ ತರಬೇತಿ ನಂತರ ರುಹಾನ್ ಟೆಸ್ಟ್ ಡ್ರೈವ್ ನಲ್ಲೇ ಚಾಂಪಿಯನ್ ಗಿಂತ ಕೇವಲ 4/10ನೇ ಸೆಕೆಂಡುಗಳ ಹಿಂದೆ ಇದ್ದ ಎಂದರೆ ರುಹಾನ್ ವೇಗದ ಬಗ್ಗೆ ಊಹಿಸಬಹುದು.

* S1 British Championship at GYG support race - 1st in Novice Category

* Club Meet at Rissington - 1st in Novice but demoted due to 5 place penalty

* Little Greenman Championship - Round 4 at Rowrah - 1st Novice

* Little Greenman Championship - Round 5 at Buckmore - 1st Novice

* S1 Championship support race - PFI - Runner-up Novice

* LGM - Shennington - 1st Novice

For Quick Alerts
ALLOW NOTIFICATIONS
For Daily Alerts

Story first published: Friday, November 14, 2014, 15:07 [IST]
Other articles published on Nov 14, 2014
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more