ಟೋಕಿಯೋ ಒಲಿಂಪಿಕ್ಸ್: ದಾಖಲೆ ಬರೆದ ಭಾರತದ ಅವಿನಾಶ್ ಸಬ್ಲೆ

ಟೋಕಿಯೋ ಒಲಿಂಪಿಕ್ಸ್‌ನ 3000 ಮೀ ಸ್ಟೀಪಲ್‌ಚೇಸ್ ಪುರುಷರ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು ಅವಿನಾಶ್ ಮುಕುಂದ್ ಸಬ್ಲೆ ತಮ್ಮದೇ ಆದ ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.

3000 ಮೀ ದೂರವನ್ನು 8:18.2 ನಿಮಿಷಗಳಲ್ಲಿ ಕ್ರಮಿಸುವುದರ ಮೂಲಕ ಅವಿನಾಶ್ ಮುಕುಂದ್ ಸಬ್ಲೆ ಈ ಹಿಂದೆ ತಾವು ನಿರ್ಮಿಸಿದ್ದ ದಾಖಲೆಯೊಂದನ್ನು ತಾವೇ ಮುರಿದುಕೊಂಡಿದ್ದಾರೆ. ಹಾಗೂ ಈ ಸುತ್ತಿನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.

ಮೊದಲ 1000 ಮೀ. ದೂರವನ್ನು 2:46.6 ನಿಮಿಷಕ್ಕೆ ತಲುಪಿದ ಅವಿನಾಶ್ ಸಬ್ಲೆ 2000 ಮೀಟರ್‌ನ್ನು 5:33.6 ನಿಮಿಷಕ್ಕೆ ತಲುಪಿದರು ಹಾಗೂ ಕೊನೆಯ ಮತ್ತು ಮೂರನೇ ಸುತ್ತಾದ 3000 ಮೀಟರ್ ದೂರವನ್ನು ಅವಿನಾಶ್ ಸಬ್ಲೆ 8:18.2 ನಿಮಿಷಗಳಲ್ಲಿ ಕ್ರಮಿಸಿ ಏಳನೇ ಸ್ಥಾನ ಪಡೆದುಕೊಂಡರು. ಈ ಮೂಲಕ ಅವಿನಾಶ್ ಸಬ್ಲೆ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಫೆಡರೇಷನ್ ಕಪ್ ಟೂರ್ನಿಯಲ್ಲಿ ತಾವು ನಿರ್ಮಿಸಿದ್ದ ದಾಖಲೆಯನ್ನು ತಾವೇ ಮುರಿದು ಹಾಕಿದ್ದಾರೆ. ಫೆಡರೇಷನ್ ಕಪ್ ಟೂರ್ನಿಯಲ್ಲಿ ಅವಿನಾಶ್ ಸಬ್ಲೆ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯನ್ನು 8:20.20 ನಿಮಿಷಗಳಲ್ಲಿ ಪೂರೈಸಿದ್ದರು. ಆದರೆ ಈಗ ಅದೇ ಅಂತರವನ್ನು 8:18.2 ನಿಮಿಷಗಳಲ್ಲಿ ಪೂರೈಸುವುದರ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದು ಹಾಕಿದ್ದಾರೆ.

ಅತ್ತ ಮಹಿಳಾ ಸಿಂಗಲ್ಸ್ ಆರ್ಚರಿ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರಷಿಯನ್ ಒಲಿಂಪಿಕ್ಸ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ವಿರುದ್ಧ 6-5 ಅಂತರದಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.

ತಮ್ಮದೇ ಹಳೆಯ ದಾಖಲೆಯನ್ನು ಮುರಿದ ಅವಿನಾಶ್ ಸಬ್ಲೆ

ತಮ್ಮದೇ ಹಳೆಯ ದಾಖಲೆಯನ್ನು ಮುರಿದ ಅವಿನಾಶ್ ಸಬ್ಲೆ

ಸದ್ಯ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್ ಸ್ಟೀಪಲ್ ಚೇಸ್ ಸ್ಪರ್ಧೆಯಿಂದ ಹೊರಬಿದ್ದಿದ್ದರೂ ಭಾರತದ ಅವಿನಾಶ್ ಮುಕುಂದ್ ಸಾಬ್ಲೆ ತಮ್ಮ ಹಳೆಯ ಅಂಕಿಅಂಶವೊಂದನ್ನು ಮುರಿಯುವುದರ ಮೂಲಕ ಉತ್ತಮ ಸಾಧನೆಯೊಂದನ್ನು ಮಾಡಿದ್ದಾರೆ. ಈ ಹಿಂದೆ ನಡೆದಿದ್ದ ಫೆಡರೇಷನ್ ಕ್ಲಬ್ ಟೂರ್ನಿಯೊಂದರಲ್ಲಿ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 3000 ಮೀಟರ್ ಕ್ರಮಿಸಲು 8:20.2 ನಿಮಿಷಗಳನ್ನು ತೆಗೆದುಕೊಂಡಿದ್ದ ಅವಿನಾಶ್ ಮುಕುಂದ್ ಸಾಬ್ಲೆ ಈ ಬಾರಿ ಎರಡು ಸೆಕೆಂಡ್ ವೇಗವಾಗಿ ಅಷ್ಟೇ ಅಂತರವನ್ನು ಕ್ರಮಿಸಿದ್ದಾರೆ. ಅಂದರೆ 3000 ಮೀಟರ್ ದೂರವನ್ನು 8:18.2 ನಿಮಿಷಗಳಲ್ಲಿ ಅರವಿಂದ್ ಮುಕುಂದ್ ಸಾಬ್ಲೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ರಮಿಸಿದ್ದಾರೆ.

ಅವಿನಾಶ್ ಮುಕುಂದ್ ಸಾಬ್ಲೆಗೆ ಪ್ರಶಂಸೆಯ ಮಳೆ

ಅವಿನಾಶ್ ಮುಕುಂದ್ ಸಾಬ್ಲೆಗೆ ಪ್ರಶಂಸೆಯ ಮಳೆ

ಇನ್ನು ಟೊಕಿಯೊ ಒಲಿಂಪಿಕ್ಸ್‌ನಿಂದ ಅವಿನಾಶ್ ಮುಕುಂದ್ ಸಾಬ್ಲೆ ಹೊರಬಿದ್ದರೂ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳ ಮಳೆ ಸುರಿದಿದೆ. ಹೌದು ಅವಿನಾಶ್ ಮುಕುಂದ್ ಸಾಬ್ಲೆ ತಮ್ಮ ಹಳೆಯ ಅಂಕಿಅಂಶವೊಂದನ್ನು ಈ ಬಾರಿ ದಾಟಿರುವ ಸಲುವಾಗಿ ಕ್ರೀಡಾಭಿಮಾನಿಗಳು ಮತ್ತು ಕ್ರೀಡಾ ತಜ್ಞರು ಅವಿನಾಶ್ ಮುಕುಂದ್ ಸಾಬ್ಲೆ ಮಾಡಿರುವ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈತನ ಮಗ ಅವಿನಾಶ್ ಮುಕುಂದ್ ಸಾಬ್ಲೆ

ರೈತನ ಮಗ ಅವಿನಾಶ್ ಮುಕುಂದ್ ಸಾಬ್ಲೆ

ಇಂದು ಸಾಮಾಜಿಕ ಜಾಲತಾಣದಲ್ಲಿ ಇಷ್ಟೆಲ್ಲ ಸದ್ದುಮಾಡುತ್ತಿರುವ ಅವಿನಾಶ್ ಮುಕುಂದ್ ಸಾಬ್ಲೆ ದೇಶದ ಬೆನ್ನುಲುಬಾದ ಓರ್ವ ರೈತನ ಮಗ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಾಂಡ್ವಾ ಗ್ರಾಮದಲ್ಲಿ ಜನಿಸಿದ ಅವಿನಾಶ್ ಸಾಬ್ಲೆ ತನ್ನ ಬಾಲ್ಯದ ದಿನಗಳಲ್ಲಿ ಪ್ರತಿದಿನ 6 ಕಿಲೋಮೀಟರ್ ದೂರ ನಡೆದುಕೊಂಡು ಶಾಲೆ ಸೇರುತ್ತಿದ್ದರಂತೆ. ಶಾಲೆಗೆ ಹೋಗಿ ಬರಲು ವಾಹನದ ಸವಲತ್ತು ಇಲ್ಲದ ಕಾರಣ ಅರವಿಂದ್ ಸಾಬ್ಲೆ ಕಾಲ್ನಡಿಗೆಯಲ್ಲಿಯೇ 6ಕಿಲೋ ಮೀಟರ್ ಕ್ರಮಿಸುತ್ತಿದ್ದಂತೆ. ಹೀಗೆ ಸಣ್ಣ ವಯಸ್ಸಿನಿಂದಲೂ ಕ್ರೀಡೆ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದ ಅವಿನಾಶ್ ಸಬ್ಲೆ ದಿನ ಕಳೆದಂತೆ ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಯುತ್ತಿದ್ದ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಾ ಇದೀಗ ಒಲಿಂಪಿಕ್ಸ್‌ವರೆಗೂ ಪ್ರಯಾಣವನ್ನು ಬೆಳೆಸಿಕೊಂಡು ಬಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 30, 2021, 7:51 [IST]
Other articles published on Jul 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X