ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ 2020: ಡಿಡಿ ಸ್ಪೋರ್ಟ್ಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ನೇರಪ್ರಸಾರ

Tokyo Olympics 2021: Olympics with DD channels and All India Radio; Coverage and Schedule in kannada

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿ ದೊಡ್ಡ ಕ್ರೀಡಾಕೂಟವಾಗಿರುವ ಒಲಿಂಪಿಕ್ಸ್‌ನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2020ರಲ್ಲಿ ನಡೆಯಬೇಕಿದ್ದ ಈ ಕ್ರೀಡಾಕೂಟ ಕೊರೊನಾವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟು ಒಂದು ವರ್ಷಗಳ ನಂತರ ನಡೆಯುತ್ತಿದೆ. ಈ ಮಹತ್ವದ ಪಂದ್ಯಾವಳಿಯನ್ನು ಕಣ್ತುಂಬಿಕೊಳ್ಳಲು ಭಾರತೀಯ ಕ್ರೀಡಾಪ್ರೇಮಿಗಳು ಕೂಡ ಕಾಯುತ್ತಿದ್ದಾರೆ. ಪ್ರಸಾರ ಭಾರತಿ ಭಾರತದಲ್ಲಿ ಈ ಕ್ರೀಡಾಕೂಟದ ನೇರಪ್ರಸಾರವನ್ನು ಮಾಡಲು ಸಕಲ ರೀತಿಯಲ್ಲೂ ಸಜ್ಜಾಗಿದೆ.

ಪ್ರಸಾರ ಭಾರತಿ ತನ್ನ ಎರಡು ಅವಳಿ ಜಾಲಗಳಾದ ದೂರದರ್ಶನ ಮತ್ತು ಆಕಾಶವಾಣಿ ಹಾಗೂ ಕ್ರೀಡೆಗೆ ಮೀಸಲಾದ ಡಿಡಿ ಸ್ಪೋರ್ಟ್ಸ್ ಚಾನಲ್ ಮೂಲಕ 2020ರ ಒಲಿಂಪಿಕ್ಸ್ ಕುರಿತ ಮಾಹಿತಿ ಹಾಗೂ ಸುದ್ದಿಗಳನ್ನು ಬಿತ್ತರಿಸಲಿದೆ. ಅಲ್ಲದೆ ಡಿಡಿ ಸ್ಪೋರ್ಟ್ಸ್‌ನಲ್ಲಿ ಕ್ರೀಡೆಗಳ ನೇರಪ್ರಸಾರವನ್ನು ಕೂಡ ಮಾಡಲಾಗುತ್ತದೆ.

ಟೋಕಿಯೋ ಒಲಿಂಪಿಕ್ಸ್ 2021ನಿಂದ ಹಿಂದೆ ಸರಿದ ಉತ್ತರ ಕೊರಿಯಾಟೋಕಿಯೋ ಒಲಿಂಪಿಕ್ಸ್ 2021ನಿಂದ ಹಿಂದೆ ಸರಿದ ಉತ್ತರ ಕೊರಿಯಾ

ಪ್ರತಿದಿನ ಬೆಳಿಗ್ಗೆ 5ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಒಲಿಂಪಿಕ್ಸ್‌ನ ನಾನಾ ಕ್ರೀಡಾ ವಿಭಾಗಗಳ ಸ್ಪರ್ಧೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಅವುಗಳ ವಿವರಗಳನ್ನು ಪ್ರತಿದಿನ ಡಿಡಿ ಸೋರ್ಟ್ಸ್ ಮತ್ತು ಎಐಆರ್ ಸ್ಪೋರ್ಟ್ಸ್ ಟ್ವೀಟರ್ ಖಾತೆಯಲ್ಲಿಯೂ ನೀಡಲಾಗುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ ಡಿಡಿ ನ್ಯೂಸ್, ಡಿಡಿ ಇಂಡಿಯಾ ಹಾಗೂ ಆಕಾಶವಾಣಿಯಲ್ಲಿಯೂ ಸಾಕಷ್ಟು ಒಲಿಂಪಿಕ್ಸ್‌ಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನದ ಕರ್ಟನ್ ರೈಸರ್ ಮತ್ತು ದಿನದ ಮುಖ್ಯಾಂಶಗಳನ್ನು ಅಯಾ ಪ್ರಾದೇಶಿಕ ಆವೃತ್ತಿಗಳಲ್ಲಿ ಆಕಾಶವಾಣಿ ಕೇಂದ್ರಗಳು ಪ್ರಸಾರವನ್ನು ಮಾಡಲಿದೆ ಎಂದು ತಿಳಿಸಿದೆ.

ಆಕಾಶವಾಣಿಯ ಸುದ್ದಿ ಸೇವಾ ವಿಭಾಗ (AIR) ಒಲಿಂಪಿಕ್ಸ್ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವುಗಳ ವಿವರಗಳು ಈ ಕೆಳಗಿನಂತಿದೆ.

ಎಐಆರ್ ನ್ಯೂಸ್ ಜೊತೆ ಒಲಿಂಪಿಕ್ಸ್ ಕ್ವಿಜ್: ಜುಲೈ 1, 2021ರಿಂದ ಪ್ರತಿದಿನ ಸ್ಟೋರ್ಟ್ಸ್ ಕ್ಯಾನ್ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದೆ. ದೇಶಾದ್ಯಂತ ಎಲ್ಲ ವಿಜೇತರಿಗೆ ಟೀಮ್ ಇಂಡಿಯಾ ಜರ್ಸಿ ದೊರಕಲಿದೆ. ಇದಕ್ಕಾಗಿ ಎಸ್ಐಎ ಜೊತೆ ಒಡಂಬಡಿಕೆ.

ಐಐಆರ್ ಒಲಿಂಪಿಕ್ಸ್ ವಿಶೇಷ ಸರಣಿ: ಪ್ರತಿದಿನ ಸ್ಟೋರ್ಟ್ಸ್ ಕ್ಯಾನ್ ಕಾರ್ಯಕ್ರಮ ಮತ್ತು ಪ್ರೈಮ್ ಟೈಮ್ ಸುದ್ದಿ ಬುಲೆಟಿನ್ ಗಳಲ್ಲಿ ಭಾರತೀಯ ಆಟಗಾರರ ವಿವರಗಳನ್ನು ಪ್ರಸಾರ.
ಪ್ರತಿದಿನ ಸ್ಟೋರ್ಟ್ಸ್ ಕ್ಯಾನ್ ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಮತ್ತು ಭಾರತದ ಸಂಭಾವ್ಯ ಪದಕ ವಿಜೇತರಿಗೆ ಒತ್ತು.

ವಿಶೇಷ ಸುದ್ದಿ ವರದಿಗಳು/ವಾಯ್ಸ್ ಕಾಸ್ಟ್: ಭಾರತೀಯ ಸಂಭಾವ್ಯ ಪದಕ ಗೆಲ್ಲುವವರು, ತಂಡಗಳ ಸಿದ್ಧತೆ ಮತ್ತು ಸರ್ಕಾರದ ಬೆಂಬಲದ ಬಗ್ಗೆ ಆದ್ಯತೆ.

ಹಿಂದಿಯಲ್ಲಿ "ಸುರ್ಖಿಯಾನ್ ಮೇ" ಮತ್ತು ಇಂಗ್ಲೀಷ್ ನಲ್ಲಿ "ಸ್ಪಾಟ್ ಲೈಟ್" ಕಾರ್ಯಕ್ರಮದ ಮೂಲಕ ವಿಶೇಷ ಸಂದರ್ಶನಗಳು ಮತ್ತು ವಿಶೇಷ ಚರ್ಚಾ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ
ಭಾರತೀಯ ತಂಡದ ಸದಸ್ಯರು, ಖ್ಯಾತ ಕ್ರೀಡಾ ವ್ಯಕ್ತಿಗಳು, ಭಾರತದ ಸಿದ್ಧತೆ ಬಗ್ಗೆ ತರಬೇತುದಾರರು, ಟೋಕಿಯೊ ಒಲಿಂಪಿಕ್ಸ್ ಸಾಧನೆ ಮತ್ತು ಸಂಭವನೀಯತೆ ಬಗ್ಗೆ ಚರ್ಚೆ.

ಶೂಟಿಂಗ್‌: ಅಭಿಷೇಕ್‌ ವರ್ಮಾಗೆ ಒಲಿಂಪಿಕ್ಸ್‌ ಅರ್ಹತೆಶೂಟಿಂಗ್‌: ಅಭಿಷೇಕ್‌ ವರ್ಮಾಗೆ ಒಲಿಂಪಿಕ್ಸ್‌ ಅರ್ಹತೆ

ಚೀಯರ್ 4 ಇಂಡಿಯಾ ಅಭಿಯಾನ: ಖ್ಯಾತ ಕ್ರೀಡಾ ವ್ಯಕ್ತಿಗಳು, ತರಬೇತುದಾರರು, ತಂಡದ ಸದಸ್ಯರ ಸಂಬಂಧಿಗಳು, ಸಾಮಾಜಿಕವಾಗಿ ಪ್ರಭಾವ ಬೀರುವಂತಹ ವ್ಯಕ್ತಿಗಳ ಸಂದೇಶಗಳ ಪ್ರಸಾರ.
ಭಾರತೀಯ ತಂಡಕ್ಕೆ ಶುಭ ಕೋರುವ ಖ್ಯಾತ ಕ್ರೀಡಾ ವ್ಯಕ್ತಿಗಳು ಮತ್ತು ಗಣ್ಯರು ಹಾಗೂ ಸಾರ್ವಜನಿಕರ ಅನಿಸಿಕೆಗಳನ್ನು ವಾಕ್ಸ್-ಪಾಪ್ ಮೂಲಕ ಬಿತ್ತರ.

ಪ್ರಾದೇಶಿಕ ಪ್ರಸಾರ: ದೇಶದ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ನಮ್ಮ ಪ್ರಾದೇಶಿಕ ಸುದ್ದಿ ವಿಭಾಗಗಳು ಸುದ್ದಿ ಸಂಬಂಧಿಸಿದ ವರದಿ ಮತ್ತು ಭಾರತೀಯ ಆಟಗಾರರ ವಿವರಗಳನ್ನು ಅಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ.

ಹೀಗೆ ಪ್ರಸಾರ ಭಾರತಿ ತನ್ನ ವಾಹಿನಿಗಳಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Story first published: Tuesday, July 27, 2021, 15:35 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X