ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬ್ರೆಝಿಲ್ ಮಹಿಳಾ ತಂಡ ಸೋಲಿಸಿ ವಾಲಿಬಾಲ್ ಚೊಚ್ಚಲ ಬಂಗಾರ ಗೆದ್ದ ಯುಎಸ್‌ಎ

Tokyo Olympics 2021: US women beat Brazil to win 1st Olympic volleyball gold

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ವಾಲಿಬಾಲ್ ಸ್ಪರ್ಧೆಯಲ್ಲಿ ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾ ತಂಡ ಚೊಚ್ಚಲ ಬಾರಿಗೆ ಬಂಗಾರದ ಪದಕ ಜಯಿಸಿದೆ. ಫೈನಲ್‌ ಪಂದ್ಯದಲ್ಲಿ ಬ್ರೆಝಿಲ್ ಸೋಲಿಸಿದ ಅಮೆರಿಕಾ ಒಲಿಂಪಿಕ್ಸ್ ಚೊಚ್ಚಲ ಬಂಗಾರಕ್ಕೆ ಮುತ್ತಿಕ್ಕಿದೆ. ಭಾನುವಾರ (ಆಗಸ್ಟ್ 8) ನಡೆದ ಫೈನಲ್ ಪಂದ್ಯದಲ್ಲಿ ಬ್ರೆಝಿಲ್ ವನಿತೆಯರ ವಿರುದ್ಧ ಅಮೆರಿಕಾ 25-21, 25-20, 25-14ರ ಜಯ ಗಳಿಸಿದೆ.

ಅತಿ ದೊಡ್ಡ ಭಾರವನ್ನು ಕಳಚಿಟ್ಟಂತ ಭಾಸವಾಗುತ್ತಿದೆ: ಚಿನ್ನ ಗೆದ್ದ ನೀರಜ್ ಚೋಪ್ರಾ ಮಾತುಅತಿ ದೊಡ್ಡ ಭಾರವನ್ನು ಕಳಚಿಟ್ಟಂತ ಭಾಸವಾಗುತ್ತಿದೆ: ಚಿನ್ನ ಗೆದ್ದ ನೀರಜ್ ಚೋಪ್ರಾ ಮಾತು

ಪಂದ್ಯದ ವೇಳೆ ಯುಎಸ್‌ ನಾಯಕಿ ಜೋರ್ಡಾನ್ ಲಾರ್ಸನ್ ಅತ್ತಿದ್ದು ಕಂಡುಬಂತು. ಚಿನ್ನ ಗೆಲ್ಲುವ ಬಗ್ಗೆ ಅತೀವ ಆಸೆ ಇಟ್ಟುಕೊಂಡಿದ್ದರಿಂದ ಫೈನಲ್‌ನಲ್ಲಿ ಅಮೆರಿಕಾ ಬಂಗಾರ ಗೆಲ್ಲುತ್ತಲೇ ಲಾರ್ಸನ್ ಕಣ್ಣೀರು ಸುರಿಸಿದರು. ಇದಕ್ಕೂ ಹಿಂದೆ ಅಂದರೆ ಆಗಸ್ಟ್ 6ರಂದು ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಯುಎಸ್‌ ಗೆದ್ದಿತ್ತು. 25-19, 25-15, 25-23ರ ಅಂತರದಿಂದ ಗೆದ್ದಿತ್ತು.

ನಾನು ಈಗಾಲೂ ಆ ಆಘಾತದಲ್ಲಿದ್ದೇನೆ
"ನಾನು ಈಗಾಲೂ ಆ ಆಘಾತದಲ್ಲಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ನಾನು ತುಂಬಾ ಅತ್ತಿದ್ದೇ ಈಗ. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಕಳೆದ 24 ಗಂಟೆಗಳಲ್ಲಿ ನಾನು ಅತ್ತಿದ್ದೆ. ನಾನು ಭಾವನಾತ್ಮಕ ಆಟಗಾರ್ತಿಯಲ್ಲ, ಭಾವನಾತ್ಮಕ ವ್ಯಕ್ತಿ. ಆದರೆ ಈ ಭಾವನೆಗಳು ನನ್ನಿಂದ ಉತ್ತಮ ಕಾರಣಕ್ಕಾಗಿ ಹೊರಬಿತ್ತು ಎಂದು ನಾನು ಭಾವಿಸುತ್ತೇನೆ. ನಾನು ಈಗ ಈ ಸಂಭ್ರಮದಲ್ಲಿದ್ದೇನೆ, ಆಘಾತದ ಸ್ಥಿತಿಯಲ್ಲಿದ್ದೇನೆ" ಎಂದು ಪಂದ್ಯದ ಬಳಿಕ ಮಾತನಾಡಿದ ಯುಎಸ್ ನಾಯಕಿ ಜೋರ್ಡಾನ್ ಲಾರ್ಸನ್ ಹೇಳಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಯುಎಸ್ ಮಹಿಳಾ ವಾಲಿಬಾಲ್ ತಂಡ ಇಲ್ಲೀವರೆಗೆ ಮೂರು ಬೆಳ್ಳಿ ಪದಕಗಳು ಮತ್ತು ಎರಡು ಕಂಚಿನ ಪದಕಗಳನ್ನು ಜಯಿಸಿದೆ. ಆದರೆ ಚಿನ್ನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಯುಎಸ್ ಕಡೇಯ ಬಾರಿ ಬಂಗಾರ ಗೆದ್ದಿದ್ದು 1984ರಲ್ಲಿ. ಆ ಬಳಿಕ 2008 ಮತ್ತು 2012ರಲ್ಲಿ ಫೈನಲ್‌ಗೆ ಪ್ರವೇಶಿಸಿ ಉತ್ತಮ ಪ್ರದರ್ಶನ ನೀಡಿತ್ತಾದರೂ ಎದುರಾಳಿ ತಂಡ ಯುಎಸ್ ಸೋಲಿಸಿ ಆಘಾತ ನೀಡಿತ್ತು. ಆದರೆ ಈಗ ಯುಎಸ್ ಕನಸು ನನಸಾಗಿದೆ.

ಸಿಎಸ್‌ಕೆಯಿಂದ ನೀರಜ್ ಚೋಪ್ರಾಗೆ 1 ಕೋ.ರೂ., ವಿಶೇಷ ಜೆರ್ಸಿ ಕೊಡುಗೆಸಿಎಸ್‌ಕೆಯಿಂದ ನೀರಜ್ ಚೋಪ್ರಾಗೆ 1 ಕೋ.ರೂ., ವಿಶೇಷ ಜೆರ್ಸಿ ಕೊಡುಗೆ

ಒಲಿಂಪಿಕ್ಸ್‌ನಲ್ಲಿ ಕೀನ್ಯಾದ ಎಲಿಯುಡ್‌ಗೆ ಚಿನ್ನ
ಭಾನುವಾರ (ಆಗಸ್ಟ್ 8) ನಡೆದ ಟೋಕಿಯೋ ಒಲಿಂಪಿಕ್ಸ್ ಪುರುಷರ ಮ್ಯಾರಥಾನ್ ಸ್ಪರ್ಧೆಯಲ್ಲಿ ಕೀನ್ಯಾದ ಎಲಿಯುಡ್ ಕಿಪ್ಚೋಗೆ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. ಇದು ಕಿಪ್ಚೋಗೆ ಒಲಿಂಪಿಕ್ಸ್ ಮ್ಯಾರಥಾನ್‌ನಲ್ಲಿ ಸಿಗುತ್ತಿರುವ ಸತತ ಎರಡನೇ ಬಂಗಾರದ ಪದಕ. 42.195 ಕಿಮೀ ದೂರವನ್ನು 2:08:38 ಸೆಕೆಂಡ್ ಕಾಲಾವಧಿಯೊಂದಿಗೆ ತಲುಪಿರುವ ಕಿಪ್ಚೋಗೆ ಬಂಗಾರದ ಪದಕ ಜಯಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲೂ ಕಿಪ್ಚೋಗೆ ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದರು. ಕಿಪ್ಟೋಗೆ, ಈ ಬಾರಿ ಬೆಳ್ಳಿ ಪದಕ ಗೆದ್ದ ದರ್‌ಲ್ಯಾಂಡ್ಸ್‌ನ ಅಬ್ದಿ ನಗೆಯೆ ಅವರಿಗಿಂತ 80 ಸೆಕೆಂಡ್ ಮುಂಚಿತವಾಗಿ ಓಟ ಮುಗಿಸಿದ್ದಾರೆ. ನಗೆಯೆ 2:09:58 ಸೆ. ಕಾಲಾವಧಿಯೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡರು. ಈ ವಿಭಾಗದ ತೃತೀಯ ಸ್ಥಾನ ಬೆಲ್ಜಿಯಂನ ಬಶೀರ್ ಅಬ್ದಿ (2:10:00 ಸೆ.) ಪಾಲಾಗಿದೆ.

ಭಾರತಕ್ಕೆ ಒಟ್ಟು 7 ಪದಕ, ಒಲಿಂಪಿಕ್ಸ್ ಹೊಸ ದಾಖಲೆ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಈ ಬಾರಿ ಅತೀ ಹೆಚ್ಚಿನ ಪದಕ ಗೆದ್ದು ಗಮನ ಸೆಳೆದಿದೆ. ಒಟ್ಟು 7 ಪದಕಗಳನ್ನು ಭಾರತ ಗೆದ್ದಿದ್ದು, ಇದರಲ್ಲಿ 1 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳು ಸೇರಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಮೊದಲ ಪದಕವಾಗಿ ಗೆದ್ದಿದ್ದರು. ಆ ಬಳಿಕ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕಂಚು ಗೆದ್ದರು. ಮಹಿಳಾ 69 ಕೆಜಿ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಹೊಹೈನ್ ಮತ್ತೊಂದು ಕಂಚು ಸೇರಿಸಿದ್ದರು. ಆ ಬಳಿಕ ಪುರುಷರ ಹಾಕಿಯಲ್ಲೂ ಭಾರತಕ್ಕೆ ಕಂಚಿನ ಪದಕ ಒಲಿದಿತ್ತು. ಬಳಿಕ ನಡೆದ ಪುರುಷರ ರಸ್ಲಿಂಗ್ 57 ಕೆಜಿ ವಿಭಾಗದಲ್ಲಿ ಭಾರತದ ರವಿಕುಮಾರ್ ದಾಹಿಯಾ ಬೆಳ್ಳಿ ಜಯಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಭಜರಂಗ್ ಪೂನಿಯಾ ಕೂಡ ಕಂಚು ಗೆದ್ದರು. ಕೊನೇಯದಾಗಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾಗೆ ಜಾವೆಲಿನ್ ಥ್ರೋನಲ್ಲಿ ಬಂಗಾರ ಲಭಿಸಿತ್ತು.

Story first published: Sunday, August 8, 2021, 15:44 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X