ಟೋಕಿಯೋ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ವಿಶ್ವದ 15 ನಾಯಕರು

ಇಡೀ ಕ್ರೀಡಾ ಜಗತ್ತು ಸಾಕಷ್ಟು ಕುತೂಹಲದಿಂದ ಕಾಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ ಶುಕ್ರವಾರ ಉದ್ಘಾಟನೆಯಾಗಲಿದೆ. ಕೊರೊನಾವೈರಸ್‌ನ ಮಧ್ಯೆಯೇ ಈ ಬಾರಿಯ ಒಲಿಂಪಿಕ್ಸ್ ನಡೆಯುತ್ತಿರುವುದು ಒಂದಷ್ಟು ಗೊಂದಲಗಳಿಗೂ ಕಾರಣವಾಗಿದೆ. ಆದರೆ ಒಲಿಂಪಿಕ್ಸ್ ಆಯೋಜಕರು ಎಲ್ಲಾ ಸಿದ್ಧತೆಗಳೊಂದಿಗೆ ಯಶಸ್ವಿಯಾಗಿ ಒಲಿಂಪಿಕ್ಸ್ ಕ್ರೀಡಾಪೂಟವನ್ನು ಸಂಪೂರ್ಣಗೊಳಿಸುವ ಆತ್ಮವಿಶ್ವಾಸಲ್ಲಿದ್ದಾರೆ.

ಕೊರೊನಾವೈರಸ್‌ನ ನಿರ್ಬಂಧದ ಕಾರಣದಿಂದಾಗಿ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಕೇವಲ 1000 ಜನರಿಗಷ್ಟೇ ಅವಕಾಶವನ್ನು ನೀಡಲಾಗುತ್ತದೆ. ಹಾಗಿದ್ದರೂ ಈ ಉದ್ಘಾಟನಾ ಸಮಾರಂಭದಲ್ಲಿ ಜಗತ್ತಿನ ಸುಮಾರು 15 ರಾಷ್ಟ್ರಗಳ ಪ್ರಮುಖ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

'ಟೋಕಿಯೋ ಒಲಿಂಪಿಕ್ಸ್ ಎಂಜಾಯ್ ಮಾಡುತ್ತಾ ಸ್ಪರ್ಧಿಸಿ': ಭಾರತೀಯರಿಗೆ ಸಚಿನ್ ಕರೆ'ಟೋಕಿಯೋ ಒಲಿಂಪಿಕ್ಸ್ ಎಂಜಾಯ್ ಮಾಡುತ್ತಾ ಸ್ಪರ್ಧಿಸಿ': ಭಾರತೀಯರಿಗೆ ಸಚಿನ್ ಕರೆ

ಪ್ರಮುಖ ದೇಶಗಳ ನಾಯಕರು ಈ ಟೂರ್ನಿಯಲ್ಲಿ ಭಾಗಿಯಾಗುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಇದರಲ್ಲಿ ಪ್ರಮುಖರಾದವರೆಂದರೆ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್, ಮಂಗೋಲಿಯನ್ ಪ್ರಧಾನಿ ಲುವ್ಸನ್ನಮ್ಸ್ರಾಯ್ ಒಯುನ್-ಎರ್ಡೆನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಪ್ರಥಮ ಮಹಿಳೆ ಜಿಲ್ ಬಿಡೆನ್ ಕೂಡ ಸೇರಿದ್ದಾರೆ.

ಆದರೆ ಜಪಾನ್‌ನಲ್ಲಿ ಈಗ ಮತ್ತೆ ಕೊರೊನಾವೈರಸ್‌ನ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಕೆಲ ಪ್ರಮುಖ ನಾಯಕರು ಅಂತಿಮ ಕ್ಷಣದಲ್ಲಿ ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳು ಇವೆ. ಹೀಗಾಗಿ ಯಾವೆಲ್ಲಾ ಪ್ರಮುಖ ನಾಯಕರು ಈ ಜಾಗತಿಕ ಕ್ರೀಡಾಕೂಟದಲ್ಲಿ ಭಾಗಿಯಾಗಿಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ 2021: ಸಮಯ, ನೇರಪ್ರಸಾರ, ಸಂಪೂರ್ಣ ಮಾಹಿತಿಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ 2021: ಸಮಯ, ನೇರಪ್ರಸಾರ, ಸಂಪೂರ್ಣ ಮಾಹಿತಿ

ಜಪಾನ್‌ನ ಪ್ರಧಾನ ಕ್ಯಾಬಿನೆಟ್ ಕಾರ್ಯದರ್ಶಿ ಕ್ಯಾಟೊ ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ ಅವರಿಗೆ ವಿಶ್ವ ನಾಯಕರೊಂದಿಗೆ ವೈಯಕ್ತಿಕ ಸಂಬಂಧಗಳನ್ನು ಬೆಳೆಸಲು ಅಮೂಲ್ಯವಾದ ಅವಕಾಶವನ್ನು ಈ ಕ್ರೀಡಾಕೂಟ ನೀಡಿದೆ. ಆದರೆ ಈ ಕ್ರೀಡಾಕೂಟಕ್ಕೆ ಕಳೆದ ಒಂದೂವರೆ ವರ್ಷಗಳಿಂದ ಕೊರೊನಾವೈರಸ್ ಸಾಂಕ್ರಾಮಿಕ ರೋಗ ಅಡಚಣೆಯಾಗಿ ಪರಿಣಮಿಸಿದೆ ಎಂದಿದ್ದಾರೆ. 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಸರಿಯಾಗಿ ಒಂದು ವರ್ಷಗಳ ಬಳಿಕ ನಡೆಯುತ್ತಿದೆ. ಈ ಮಧ್ಯೆ ಟೋಕಿಯೋದಲ್ಲಿ ಮತ್ತೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಸ್ಟೇಟ್ ಆಫ್ ಎಮರ್ಜೆನ್ಸ್ ಘೋಷಿಸಲಾಗಿದ್ದು ಇದರ ಮಧ್ಯೆಯೇ ಕ್ರೀಡಾಕೂಟ ನಡೆಯುತ್ತಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, July 21, 2021, 14:58 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X