ಟೋಕಿಯೋ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ 2 ಕೋವಿಡ್-19 ಪ್ರಕರಣಗಳು ಪತ್ತೆ

ಟೋಕಿಯೋ: ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಕೇವಲ 5 ದಿನಗಳು ಬಾಕಿಯಿರುವಾಗ ಟೂರ್ನಿಯ ಬಗ್ಗೆ ಕೆಟ್ಟ ಸುದ್ದಿ ಕೇಳಿ ಬರತೊಡಗಿದೆ. ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ಎರಡು ಕೋವಿಡ್ 19 ಪ್ರಕರಣಗಳು ವರದಿಯಾಗಿರುವುದು ಪತ್ತೆಯಾಗಿದೆ. ಅಲ್ಲಿನ ಅಧಿಕಾರಿಗಳು ಈ ವಿಚಾರವನ್ನು ಖಾತರಿಪಡಿಸಿದ್ದಾರೆ.

ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!

ಕೋವಿಡ್-19 ಸೋಂಕು ಪಾಸಿಟಿವ್ ಬಂದಿರುವ ಇಬ್ಬರಲ್ಲಿ ಒಬ್ಬರು ಸೌತ್ ಕೊರಿಯಾದ ಇಂಟರ್ ನ್ಯಾಷನಲ್ ಒಲಿಂಪಿಕ್ ಕಮಿಟಿ (ಐಒಸಿ) ಸದಸ್ಯ ಎಂದು ತಿಳಿದು ಬಂದಿದೆ. ಸೋಂಕಿಗೀಡಾಗಿರುವವರು ಈಗ ಐಸೊಲೇಶನ್‌ನಲ್ಲಿದ್ದಾರೆ. ಅಂತೂ ಕೋವಿಡ್ ಪ್ರಕರಣಗಳು ಕ್ರೀಡಾಕೂಟಕ್ಕೆ ಹಿನ್ನೆಡೆ ತರಲಾರಂಭಿಸಿದೆ.

ನರಿಟಾ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ಗೆ ಬಂದಿಳಿದಿದ್ದ 2004ರ ಒಲಿಂಪಿಕ್ಸ್ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್‌ನಲ್ಲಿ ಬಂಗಾರ ಗೆದ್ದಿದ್ದ ರ್ಯು ಸೆಯುಂಗ್-ರ್ಯೊಂಗ್ ಅವರಲ್ಲಿ ಶನಿವಾರ (ಜುಲೈ 17) ಸೋಂಕು ಕಂಡು ಬಂದಿತ್ತು.

ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!ಲಿಯೋನೆಲ್ ಮೆಸ್ಸಿ, ಕ್ರಿಸ್ಚಿಯಾನೊ ರೊನಾಲ್ಡೋ ಭಾರತದಲ್ಲಿ ಬೀಡಿ ಪ್ರಚಾರ ಮಾಡ್ತಿದ್ದಾರಾ?!

"ಜಪಾನ್‌ಗೆ ಬಂದಿಳಿದಾಗ ಐಒಸಿ ಸದಸ್ಯ ಸೆಯುಂಗ್-ರ್ಯೊಂಗ್ ಅವರ ಕೋವಿಡ್ 19 ಫಲಿತಾಂಶ ಪಾಸಿಟಿವ್ ಬಂದಿದೆ," ಎಂದು ಐಒಸಿ ವಕ್ತಾರರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, July 18, 2021, 10:14 [IST]
Other articles published on Jul 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X