ಚೀನಾ ಬಗ್ಗುಬಡಿದು ಏಷ್ಯಾಕಪ್ ಗೆದ್ದ ಭಾರತದ ವನಿತೆಯರು

Posted By:

ಕಕಮಿಗಹರ(ಜಪಾನ್), ನವೆಂಬರ್ 06: ಭಾರತದ ಮಹಿಳಾ ಹಾಕಿ ತಂಡ ಭಾನುವಾರದಂದು ಹೊಸ ಇತಿಹಾಸ ನಿರ್ಮಾಣ ಮಾಡಿದೆ. 13 ವರ್ಷಗಳ ಬಳಿಕ ಏಷ್ಯಾಕಪ್ ಗೆದ್ದು ಸಂಭ್ರಮಿಸಿದೆ.

ಇಲ್ಲಿನ ಕಕಮಿಗಹರ ಕವಾಸಕಿ ಮೈದಾನದಲ್ಲಿ ನಡೆದ ಏಷ್ಯಾಕಪ್ 2017ರ ಅಂತಿಮ ಹಣಾಹಣಿಯಲ್ಲಿ ಚೀನಾ ತಂಡವನ್ನು ಸೋಲಿಸಿ ಖಂಡಾಂತರ ಚಾಂಪಿಯನ್ ಎನಿಸಿಕೊಂಡ ಭಾರತ ತಂಡ ಮುಂದಿನ ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡಿದೆ.

Women's Asia Cup: Golden Rani strikes at the death against China to win it for India

ಗೋಲ್ಡನ್ ರಾಣಿ: ಭಾರತ ಮಹಿಳಾ ತಂಡದ ನಾಯಕಿ ರಾಣಿ ರಾಮ್ ಪಾಲ್ ಅವರು ಗೆಲುವಿನ ಗೋಲು ಬಾರಿಸಿದ್ದು ವಿಶೇಷವಾಗಿತ್ತು. ಪೆನಾಲ್ಟಿ ಶೂಟೌಟ್ ನಲ್ಲಿ ಗೋಲಿ ಸವಿತಾ ಅವರು ಸೇವ್ ಮಾಡಿದ್ದನ್ನು ಮರೆಯುವಂತಿಲ್ಲ. ಅಂತಿಮವಾಗಿ 5-4ರ ಅಂತರದಲ್ಲಿ ಭಾರತದ ವನಿತೆಯರು ಗೆಲುವಿನ ನಗೆ ಬೀರಿದರು.

2004ರಲ್ಲಿ ಜಪಾನ್ ತಂಡವನ್ನು 1-0 ಅಂತರದಿಂದ ಸೋಲಿಸಿದ ಭಾರತ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿತ್ತು. ಇದಾದ ಬಳಿಕ ಈಗ ಚೀನಾವನ್ನು ಮಣಿಸಿದೆ.

ಇತ್ತೀಚೆಗೆ ಮಲೇಷಿಯಾದಲ್ಲಿ ಭಾರತದ ಪುರುಷರ ತಂಡ ಏಷ್ಯನ್ ಚಾಂಪಿಯನ್ ಶಿಪ್ ಗೆದ್ದು ಬೀಗಿದ್ದನ್ನು ಇಲ್ಲಿ ಸ್ಮರಿಸಬಹುದು.

Story first published: Sunday, November 5, 2017, 18:58 [IST]
Other articles published on Nov 5, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ