ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Australian Open: 4ನೇ ಸುತ್ತಿಗೆ ಪ್ರವೇಶಿಸಿದ ಇಗಾ ಸ್ವಿಟೆಕ್, ಕೊಕೊ ಗಾಲ್ಫ್, ಹೊರಬಿದ್ದ ಮಡ್ವೆಡೇವ್

Australian Open day 5 Highlights: Medvedev, Sakkari knocked out, Iga Swiatek advance to 4th round

ಆಸ್ಟ್ರೇಲಿಯನ್ ಓಪನ್‌ನ 5ನೇ ದಿನ ಎರಡು ದೊಡ್ಡ ಅಚ್ಚರಿಯ ಫಲಿತಾಂಶಗಳಿಗೆ ಟೆನಿಸ್ ಅಭಿಮಾನಿಘಲು ಸಾಕ್ಷಿಯಾಗಿದ್ದಾರೆ. ಸ್ಟಾರ್ ಆಟಗಾರರಾದ ಡೇನಿಲ್ ಮಡ್ವೆಡೇವ್ ಹಾಗೂ ರಿಯಾ ಸಕ್ಕರಿ ಪೈಪೋಟಿಯ ಸವಾಲು ಎದುರಿಸಿ ಸೋಲು ಅನುಭವಿಸಿದ್ದು ನಾಲ್ಕನೇ ಸುತ್ತಿಗೆ ಪ್ರವೇಶಿಸಲು ವಿಫಲವಾಗಿ ಹೊರಬಿದ್ದಿದ್ದಾರೆ.

2022ರ ಪುರುಷರ ಸಿಂಗಲ್ಸ್‌ನಲ್ಲಿ ರಾಫೆಲ್ ನಡಾಲ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಸೆಣೆಸಾಡಿ ರನ್ನರ್ ಅಪ್ ಸ್ಥಾನ ಪಡೆದ ಮೆಡ್ವೆಡೆವ್ ಈ ಬಾರಿಯ ಟೂರ್ನಿಯಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದರು. ಆದರೆ29 ನೇ ಶ್ರೇಯಾಂಕದ ಸೆಬಾಸ್ಟಿಯನ್ ಕೊರ್ಡಾ ವಿರುದ್ಧ 6-7 (7-9), 3-6, 6-7 (4-7) ಅಂತರದಿಂದ ಸೋಲು ಅನುಭವಿಸಿದ್ದಾರೆ. ಮೆಡ್ವೆಡೆವ್ ಅಮೆರಿಕದ ಮಾರ್ಕೋಸ್ ಗಿರಾನ್ ಮತ್ತು ಆಸ್ಟ್ರೇಲಿಯಾದ ಜಾನ್ ಮಿಲ್ಮನ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದರು.

Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!Ranji Trophy: 43 ವರ್ಷಗಳ ನಂತರ ಮೊದಲ ಬಾರಿಗೆ ಮುಂಬೈ ಸೋಲಿಸಿ ಇತಿಹಾಸ ನಿರ್ಮಿಸಿದ ದೆಹಲಿ!

ಇನ್ನು ಮತ್ತೊಂದೆಡೆ ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ನಡದ ಪಂದ್ಯದಲ್ಲಿ 27 ವರ್ಷದ ಸಕ್ಕರಿ 87ನೇ ಶ್ರೇಯಾಂಕದ ಚೀನಾದ ಜು ಲಿನ್ ವಿರುದ್ಧ 6-7 (3-7), 6-1, 4-6 ಅಂಕಗಳಿಂದ ಸೋಲು ಕಂಡಿದ್ದಾರೆ. ಮೊದಲ ಸೆಟ್‌ನಲ್ಲಿ ನೀರಸ ಪ್ರದರ್ಶನದ ನಂತರ ಸಕ್ಕರಿ ಮೂರನೇ ಸೆಟ್‌ನಲ್ಲಿ ಕಮ್‌ಬ್ಯಾಕ್ ಮಾಡಿದರು. ಆದರೆ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗದೆ ಸೋಲು ಕಂಡಿದ್ದಾರೆ.

ಗಬ್ಬಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿಗೆ 2 ವರ್ಷ: 36 ರನ್‌ಗಳಿಗೆ ಆಲೌಟ್ ಆದ ನಂತರ ಸರಣಿ ಗೆದ್ದಿದ್ದೆ ರೋಚಕಗಬ್ಬಾದಲ್ಲಿ ಐತಿಹಾಸಿಕ ಟೆಸ್ಟ್ ಗೆಲುವಿಗೆ 2 ವರ್ಷ: 36 ರನ್‌ಗಳಿಗೆ ಆಲೌಟ್ ಆದ ನಂತರ ಸರಣಿ ಗೆದ್ದಿದ್ದೆ ರೋಚಕ

ಇನ್ನು ಇದಕ್ಕೂ ಮುನ್ನ ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಟೆಕ್ ಎದುರಾಳಿ ಕ್ರಿಸ್ಟಿನಾ ಬುಕ್ಸಾ ಅವರನ್ನು 6-0, 6-1 ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಅವರು ಮುಂದಿನ ಸುತ್ತಿನಲ್ಲಿ 2022ರ ವಿಂಬಲ್ಡನ್ ಚಾಂಪಿಯನ್ ಎಲೆನಾ ರೈಬಾಕಿನಾ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ 2021ರ ಯುಎಸ್ ಓಪನ್ ಚಾಂಪಿಯನ್ ಎಮ್ಮಾ ರಾಡುಕಾನು ಅವರನ್ನು ಸೋಲಿಸಿದ್ದ ಕೊಕೊ ಗೌಫ್, ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬರ್ನಾರ್ಡಾ ಪೆರಾ ಅವರನ್ನು ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಪಂದ್ಯದಲ್ಲಿ ಗೌಫ್ 6-3, 6-2 ನೇರ ಸೆಟ್‌ಗಳ ಗೆಲುವು ಸಾಧಿಸಿದ್ದಾರೆ.

Story first published: Friday, January 20, 2023, 21:05 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X