ಫ್ರೆಂಚ್ ಓಪನ್‌ ಫೈನಲ್‌ ವೇಳೆಯೇ ಸ್ಟೆಫಾನೊಸ್ ಸಿಸಿಪಸ್ ಅಜ್ಜಿ ಸಾವು!

ಪ್ಯಾರಿಸ್: ಫ್ರೆಂಚ್ ಓಪನ್‌ ಫೈನಲ್‌ನಲ್ಲಿ ತಾನು ನೊವಾಕ್ ಜೊಕೋವಿಕ್‌ ವಿರುದ್ಧ ಸ್ಪರ್ಧಿಸಲು ಇನ್ನು 5 ನಿಮಿಷ ಉಳಿದಿರುವಾಗ ತನ್ನ ಅಜ್ಜಿ ಮೃತರಾಗಿರುವುದಾಗಿ ಗ್ರೀಕ್‌ ಬಲಿಷ್ಠ ಸ್ಟೆಫಾನೊಸ್ ಸಿಸಿಪಸ್ ಹೇಳಿದ್ದಾರೆ. ಭಾನುವಾರ (ಜೂನ್ 13) ನಡೆದ ಫ್ರೆಂಚ್ ಓಪನ್ ಫೈನಲ್ ಪಂದ್ಯದ ವೇಳೆ ಅಜ್ಜಿ ತೀರಿಕೊಂಡಿರುವುದಾಗಿ ಸಿಟ್ಸಿಪಾಸ್ ತಿಳಿಸಿದ್ದಾರೆ.

ಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗಮನೀಷ್ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‌ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ

ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತು ಸ್ಟೆಫಾನೊಸ್ ಸಿಸಿಪಸ್ ಮಧ್ಯೆ ಸುದೀರ್ಘ ಕಾಳಗ ನಡೆದಿತ್ತು. ಅಂತಿಮವಾಗಿ ಜೊಕೋವಿಕ್ 6-7 (6/8), 2-6, 6-3, 6-2, 6-4ರ ಅಂತರದಿಂದ ಗೆದ್ದಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಾರ ತಿಳಿಸಿರುವ ಸಿಸಿಪಸ್, 'ನಾನು ಕೋರ್ಟ್‌ ಪ್ರವೇಶಿಸುವ ಐದು ನಿಮಿಷಕ್ಕೆ ಮುನ್ನ ತನ್ನ ಪ್ರೀತಿಯ ಅಜ್ಜಿ ಕೊನೆಯುಸಿರೆಳೆದಿದ್ದರು. ಬದುಕಿನ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ಮತ್ತು ಇನ್ನೊಬ್ಬರ ನಗುವಿಗೆ ಕಾರಣವಾಗುತ್ತಿದ್ದ ಅಜ್ಜಿಯ ಜಾಗದಲ್ಲಿ ನಾನು ಇನ್ಯಾರನ್ನೇ ನೋಡಲು ಸಾಧ್ಯವಿಲ್ಲ' ಎಂದು ಬರೆದುಕೊಂಡಿದ್ದರು.

ENG vs NZ: ಇಂಗ್ಲೆಂಡ್ ಸೋಲಿಸಿ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್; ತವರಿನಲ್ಲೇ ಇಂಗ್ಲೆಂಡ್‌ಗೆ ಮುಖಭಂಗ!ENG vs NZ: ಇಂಗ್ಲೆಂಡ್ ಸೋಲಿಸಿ ಟೆಸ್ಟ್ ಸರಣಿ ಗೆದ್ದ ನ್ಯೂಜಿಲೆಂಡ್; ತವರಿನಲ್ಲೇ ಇಂಗ್ಲೆಂಡ್‌ಗೆ ಮುಖಭಂಗ!

ಈ ಜಗತ್ತಿನಲ್ಲಿ ಅಜ್ಜಿಯಂಥ ಜನರು ಇರುವುದು ಬಹಳ ಮುಖ್ಯ ಎಂದು ಸಿಸಿಪಸ್ ಹೇಳಿದ್ದಾರೆ. ಏಕೆಂದರೆ ಅವರು ನನ್ನನ್ನು ಕನಸು ಕಾಣುವಂತೆ, ಸಾಧಿಸುವಂತೆ ಪ್ರೇರೇಪಿಸುತ್ತಿದ್ದರು ಎಂದಿದ್ದಾರೆ. ಫ್ರೆಂಚ್‌ ಓಪನ್ ಫೈನಲ್‌ ಜಯದೊಂದಿಗೆ ಜೊಕೋವಿಕ್ 19ನೇ ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿ ಗೆದ್ದಂತಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 14, 2021, 11:23 [IST]
Other articles published on Jun 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X