ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್ ಪದಕ ಕೈ ತಪ್ಪಿದ ಸಿಟ್ಟಿಗೆ ತಾಳ್ಮೆ ಕಳೆದುಕೊಂಡ ಜೊಕೋವಿಕ್: ವೈರಲ್ ವಿಡಿಯೋ!

Tokyo Olympics 2021: Novak Djokovic loses bronze medal match against Pablo Carreno Busta

ಟೋಕಿಯೋ: ವಿಶ್ವ ನಂ.1 ಟೆನಿಸ್ ಆಟಗಾರ, ಸರ್ಬಿಯಾದ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನೂ ಕೈ ಚೆಲ್ಲಿದ್ದಾರೆ. ಶನಿವಾರ (ಜುಲೈ 31) ಕಂಚಿನ ಪದಕಕ್ಕಾಗಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್‌ನ ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು ಜೊಕೋವಿಕ್ ಹತಾಶೆ ಅನುಭವಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜೊಕೋವಿಕ್ ಬಂಗಾರ ಗೆದ್ದಿದ್ದರೆ ಅದು ವಿಶ್ವ ದಾಖಲೆಯಾಗುತ್ತಿತ್ತು. ಆದರೆ ಜೊವಾಕ್ ಕಂಚಿನ ಪದಕವನ್ನು ಗೆಲ್ಲಲಾಗದೆ ನಿರಾಸೆ ಅನುಭವಿಸಿದ್ದಾರೆ.

ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಟಗಾರ ಕಮ್ರನ್ ಅಕ್ಮಲ್!ಸಂಜು ಸ್ಯಾಮ್ಸನ್ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಟಗಾರ ಕಮ್ರನ್ ಅಕ್ಮಲ್!

ಕಂಚಿನ ಪದಕದ ಪಂದ್ಯವನ್ನು ಸೋಲುತ್ತಲೇ ನೊವಾಕ್ ಜೊಕೋವಿಕ್ ಒತ್ತಡ, ಹರಾಶೆ ತಾಳಲಾರದೆ ತನ್ನ ರ್‍ಯಾಕೆಟ್ ಅನ್ನು ಟೆನಿಸ್ ನೆಟ್‌ನ ಕಂಬಕ್ಕೆ ಹೊಡೆದು ಮುರಿದು ಹಾಕಿದ್ದಾರೆ. ಕನಿಷ್ಠ ಕಂಚಿನ ಪದಕವನ್ನಾದರೂ ಗೆಲ್ಲಬೇಕೆಂದು ಕಾದಿದ್ದ ಜೊಕೋವಿಕ್‌ಗೆ ಈ ಸೋಲು ತೀರಾ ಬೇಸರ ಮೂಡಿಸಿದೆ. ಜೊಕೋವಿಕ್ ನಡೆಗೆ ಟೆನಿಸ್ ಪ್ರೇಮಿಗಳ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ (ವಿಡಿಯೋ ಕೆಳಗಿದೆ).

ಗೋಲ್ಡನ್‌ ಗ್ರ್ಯಾಂಡ್‌ಸ್ಲ್ಯಾಮ್ ಕನಸು ಭಗ್ನ

ಗೋಲ್ಡನ್‌ ಗ್ರ್ಯಾಂಡ್‌ಸ್ಲ್ಯಾಮ್ ಕನಸು ಭಗ್ನ

ನೊವಾಕ್ ಜೊಕೋವಿಕ್ ಈಗಾಗಲೇ ಈ ವರ್ಷ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜೊಕೋವಿಕ್ ಏನಾದರೂ ಚಿನ್ನ ಗೆದ್ದಿದ್ದರೆ, ಈ ವರ್ಷ ಜೊಕೋವಿಕ್ ಪಾಲಿಗೆ ಗೋಲ್ಡನ್ ಗ್ರ್ಯಾಂಡ್‌ ಸ್ಲ್ಯಾಮ್ ಅನ್ನಿಸಿಕೊಳ್ಳುತ್ತಿತ್ತು. ಆದರೆ ಚಿನ್ನದ ಪದಕ ಬಿಡಿ, ಕಂಚಿನ ಪದಕವೂ ಇಲ್ಲದೆ ಜೊಕೋವಿಕ್ ಬರಿಗೈಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರ ನಡೆಯುವಂತಾಗಿದೆ. ಮಿಶ್ರ ಡಬಲ್ಸ್‌ನಲ್ಲಿ ಜೊಕೋವಿಕ್ ಮತ್ತವರ ಜೊತೆಗಾತಿ ನೀನಾ ಸ್ಟೊಜನೊವಿಕ್ ಕಂಚಿನ ಪದಕದ ಪಂದ್ಯದಲ್ಲಿ ಆಡುವುದರಲ್ಲಿದ್ದರು. ಆದರೆ ಆಸ್ಟ್ರೇಲಿಯಾದ ಜೋಡಿಯಾದ ಆಶ್ಲೇ ಬಾರ್ಟಿ ಮತ್ತು ಜಾನ್ ಪೀರ್ಸ್ ವಿರುದ್ಧದ ಪಂದ್ಯದಿಂದ ಜೊಕೋವಿಕ್ ಮತ್ತು ಸ್ಟೊಜನೊವಿಕ್ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಯಾವ ಕಾರಣಕ್ಕಾಗಿ ಹಿಂದೆ ಸರಿದಿದ್ದುಅನ್ನೋದು ಇನ್ನೂ ತಿಳಿದು ಬಂದಿಲ್ಲ.

ಭಾರೀ ಕಾಳಗದಲ್ಲಿ ಜೊಕೋವಿಕ್‌ಗೆ ಸೋಲು

ಭಾರೀ ಕಾಳಗದಲ್ಲಿ ಜೊಕೋವಿಕ್‌ಗೆ ಸೋಲು

ಶನಿವಾರ ನಡೆದ ಪುರುಷರ ಸಿಂಗಲ್ಸ್ ಕಂಚಿನ ಪದಕದ ಪಂದ್ಯದಲ್ಲಿ ನೊವಾಕ್ ಜೊಕೋವಿಕ್ ಅವರು ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಎದುರು ಜೊಕೋವಿಕ್ 6-4, 6-7 (6/8), 6-3ರ ಸೋಲನುಭವಿಸಿದ್ದಾರೆ. ಈ ಪಂದ್ಯದಲ್ಲಿ ಗೆದ್ದಿದ್ದರೆ ಜೊಕೋವಿಕ್ ಕಂಚಿನ ಪದಕಕ್ಕಾದರೂ ತೃಪ್ತಿ ಪಡಬಹುದಿತ್ತು. ಆದರೆ ಪಂದ್ಯ ಸೋತಿದ್ದರಿಂದ ಭಾರೀ ನಿರಾಶೆಗೀಡಾದ ಜೊಕೋವಿಕ್ ತನ್ನ ಸಿಟ್ಟನ್ನು ರ್‍ಯಾಕೆಟ್‌ನ ಮೇಲೆ ತೋರಿಸಿಕೊಂಡರು. ಜೊಕೋವಿಕ್ ನಡೆಗೆ ಪಂದ್ಯ ವೀಕ್ಷಿಸುತ್ತಿದ್ದವರು ಮತ್ತು ನೆಟ್ ಪಕ್ಕದಲ್ಲಿ ಕುಳಿತಿದ್ದ ಬಾಲ್ ಬಾಯ್ಸ್ ಕೂಡ ಒಮ್ಮೆ ಹೌಹಾರಿದ್ದು ಕಂಡುಬಂತು. ಮಿಶ್ರ ಡಬಲ್ಸ್‌ನಲ್ಲಿ ವಿಶ್ವ ನಂ.1 ಆಟಗಾರ ನೊವಾಕ್ ಜೊಕೋವಿಕ್‌ಗೆ ಪದಕ ಗೆಲ್ಲಲು ಅವಕಾಶವಿತ್ತು. ಅದರೆ ಆ ಪಂದ್ಯದಿಂದ ಜೊಕೋವಿಕ್ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ಹೀನಾಯಕ ಸೋಲು ಇದೇ ಮೊದಲು

ವಿಶ್ವದಲ್ಲಿ 20 ಗ್ರ್ಯಾಂಡ್‌ಸ್ಲ್ಯಾಮ್‌ಗಳ ದಾಖಲೆಯಿರುವುದು ಸರ್ಬಿಯಾದ ನೊವಾಕ್ ಜೊಕೋವಿಕ್, ಸ್ಪೇನ್‌ನ ರಾಫೆಲ್ ನಡಾಲ್ ಮತ್ತು ಸ್ವಟ್ಜರ್ಲ್ಯಾಂಡ್‌ನ ರೋಜರ್ ಫೆಡರರ್ ಹೆಸರಿನಲ್ಲಿ ಮಾತ್ರ. ಈ ಅಪರೂಪದ ದಾಖಲೆಯಿರುವ ಜೊಕೋವಿಕ್ ದೀರ್ಘ ಕಾಲ ಟೆನಿಸ್ ಸಿಂಗಲ್ಸ್‌ನಲ್ಲಿ ಬೆನ್ನು ಬೆನ್ನಿಗೆ ಎರಡೆರಡು ಪಂದ್ಯಗಳನ್ನು ಸೋತಿದ್ದೇ ಇಲ್ಲ. 2019ರ ಎಟಿಪಿ ಟೂರ್ ಫೈನಲ್‌ನಲ್ಲಿ ಜೊಕೋವಿಕ್, ಆಸ್ಟ್ರಿಯನ್ ಆಟಗಾರ ಡೊಮಿನಿಕ್ ಥೀಮ್ ಮತ್ತು ರೋಜರ್ ಫೆಡರರ್ ವಿರುದ್ಧ ಸೋತಿದ್ದೇ ಕೊನೆ. ಇಲ್ಲೀವರೆಗೂ ಜೊಕೋವಿಕ್ ಜೊತೆ ಜೊತೆಗೆ ಎರಡು ಪಂದ್ಯಗಳನ್ನು ಸೋತಿದ್ದಿಲ್ಲ. ಆದರೆ ಈ ಬಾರಿ ನೊವಾಕ್‌ಗೆ ಜಾಗತಿಕ ಕ್ರೀಡೆಯಲ್ಲೇ ಮುಖಭಂಗವಾಗಿದೆ.

Story first published: Saturday, July 31, 2021, 17:48 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X