ಟೋಕಿಯೋ ಒಲಿಂಪಿಕ್ಸ್: 4ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಾನಿಯಾ ಮಿರ್ಜಾ

ಭಾರತದ ಟೆನಿಸ್‌ನ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ನಾಲ್ಕನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಒಲಿಂಪಿಕ್ಸ್ ತನ್ನ ಕನಸಾಗಿತ್ತು ಎಂಬುದನ್ನು 34ರ ಹರೆಯದ ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಮೂಲಕ ಸಾನಿಯಾ ಮಿರ್ಜಾ ಭಾರತದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಲಿದ್ದಾರೆ. ನಾಲ್ಕು ಒಲಿಂಪಿಕ್ಸ್ ಟೂರ್ನಿಗಳಲ್ಲಿ ಭಾಗಿಯಾದ ಭಾರತದ ಪ್ರಥಮ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಸಾನಿಯಾ ಪಾತ್ರರಾಗಲಿದ್ದಾರೆ.

2018ರಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ಮತ್ತೆ ಅಂಗಳಕ್ಕಿಳಿದು ಗೆಲುವಿನ ಮೂಲಕ ಪುನರಾಗಮನ ಮಾಡಿದ್ದರು ಸಾನಿಯಾ ಮಿರ್ಜಾ. ಹೋಬಾರ್ಟ್ ಇಂಟರ್‌ನ್ಯಾಶನಲ್ ಡಬ್ಲ್ಯುಟಿಎ ಇವೆಂಟ್‌ನಲ್ಲಿ ಸಾನಿಯಾ ಗೆಲುವು ಸಾಧಿಸಿದ್ದರು.

ಒಲಿಂಪಿಕ್ಸ್: ಹೆಚ್ಚಾಗುತ್ತಿದೆ ಕೋವಿಡ್ ಆತಂಕ, ತರಬೇತಿ ಆರಂಭಿಸಿದ ಭಾರತೀಯ ಅಥ್ಲೀಟ್‌ಗಳುಒಲಿಂಪಿಕ್ಸ್: ಹೆಚ್ಚಾಗುತ್ತಿದೆ ಕೋವಿಡ್ ಆತಂಕ, ತರಬೇತಿ ಆರಂಭಿಸಿದ ಭಾರತೀಯ ಅಥ್ಲೀಟ್‌ಗಳು

"ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಯಾವುದೇ ಕ್ರೀಡಾಪಟುವಿನ ಬಹುದೊಡ್ಡ ಕನಸಾಗಿರುತ್ತದೆ. ನಾಲ್ಕು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರುವುದು ನಿಜಕ್ಕೂ ಅತ್ಯಂತ ವಿಶೇಷವಾಗಿದೆ ಹಾಗೂ ಇದು ನನ್ನ ವೃತ್ತಿ ಜೀವನದ ಆರಂಭದಲ್ಲಿ ಕೇವಲ ಕನಸಾಗಿತ್ತು. ಇದು ನಿಜಕ್ಕೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ" ಎಂದು ಸಾನಿಯಾ ಮಿರ್ಜಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆಗೆ ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ ಮಿರ್ಜಾ ಚೊಚ್ಚಲ ಪದಕದ ಸಾಧನೆಯಿಂದ ಸ್ವಲ್ಪದರಲ್ಲಿ ಎಡವಿದ್ದರು. ಕಂಚು ಗೆಲ್ಲುವ ಅವಕಾಶವನ್ನು ಸಾನಿಯಾ ಮಿರ್ಜಾ ಜೋಡಿ ಅಂದು ಕಳೆದುಕೊಂಡಿತ್ತು. ಆ ಸಂದರ್ಭದಲ್ಲಿ ಮತ್ತೊಂದು ಒಲಿಂಪಿಕ್ಸ್‌ನಲ್ಲಿ ನಾನು ಭಾಗವಹಿಸಲಿದ್ದೇನೆ ಎಂದು ಯಾರಾದರೂ ಹೇಳಿದ್ದರೆ ಸ್ವತಃ ನಾನೇ ನಗುತ್ತಿದ್ದೆ ಎಂದು ಸಾನಿಯಾ ಮಿರ್ಜಾ ಹೇಳಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 20, 2021, 13:42 [IST]
Other articles published on Jul 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X