ಕಣ್ಣೀರಿನೊಂದಿಗೆ ಮೈದಾನದಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್: ವಿಡಿಯೋ

ಲಂಡನ್: ಅಮೆರಿಕಾದ ಸ್ಟಾರ್ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕಣ್ಣೀರಿನೊಂದಿಗೆ ವಿಂಬಲ್ಡನ್ ಟೆನಿಸ್ ಟೂರ್ನಿಯ ಪಂದ್ಯದಿಂದ ಹೊರ ನಡೆದಿರುವ ಘಟನೆ ನಡೆದಿದೆ. ಆಟದ ಮಧ್ಯೆ ಜಾರಿ ಬಿದ್ದು ಗಾಯಕ್ಕೀಡಾಗಿರುವ ಕಾರಣ ಸೆರೆನಾ ಅವರ 24 ಗ್ರ್ಯಾನ್‌ಸ್ಲ್ಯಾಮ್ ದಾಖಲೆಯ ಕನಸು ನನಸಾಗದೆ ಉಳಿದಿದೆ.
ಲಂಡನ್‌ನ ಆಲ್ ಇಂಗ್ಲೆಂಡ್ ಕ್ಲಬ್ ಸ್ಟೇಡಿಯಂನಲ್ಲಿ ನಡೆದ ಅಲಿಯಾಕ್ಸಂದ್ರ ಸಾಸ್ನೋವಿಚ್ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಜಾರಿ ಬಿದ್ದು ಗಾಯ ಮಾಡಿಕೊಂಡು ಕಣ್ಣೀರು ಹಾಕಿ ಕೋರ್ಟ್‌ನಿಂದ ಹೊರ ನಡೆದಿದ್ದಾರೆ. ಕೋರ್ಟ್‌ನ ಮೇಲ್ಪದರ ಹುಲ್ಲಿನಿಂದ ಆವೃತವಾಗಿರುವುದು ಜಾರಿ ಬಿದ್ದಿರುವುದಕ್ಕೆ ಕಾರಣ ಎನ್ನಲಾಗಿದೆ.
ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮಾರ್ಗರೆಟ್ ಕೋರ್ಟ್ ಹೆಸರಿನಲ್ಲಿ ಟೆನಿಸ್ ಮಹಿಳಾ ವಿಭಾಗದಲ್ಲಿ ಅತೀ ಹೆಚ್ಚು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದ ವಿಶ್ವದಾಖಲೆಯಿದೆ. ಕೋರ್ಟ್ ಒಟ್ಟಿಗೆ 24 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ. ಸೆರೆನಾ ಈಗ 23 ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದು, ಕೋರ್ಟ್ ವಿಶ್ವ ದಾಖಲೆ ಸರಿದೂಗಿಸಲು ಎದುರು ನೋಡುತ್ತಿದ್ದಾರೆ.
ಆರಂಭಿಕ ಸುತ್ತಿನ ಏಳನೇ ಗೇಮ್‌ನಲ್ಲಿ 39ರ ಹರೆಯದ ಸೆರೆನಾ ಮೈದಾನದಿಂದ ಹೊರ ನಡೆದಿದ್ದಾರೆ. ಈ ಘಟನೆ ಬಳಿಕ ಹುಲ್ಲು ಹಾಸಿನ ಮೇಲ್ಪದರದ ಕೋರ್ಟ್‌ಗಳಲ್ಲಿ ಆಡುವ ಬಗ್ಗೆ ಕೆಲ ಪ್ರಮುಖ ಆಟಗಾರರು ಭೀತಿ ತೋರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications