ಫ್ರೆಂಚ್ ಓಪನ್: ಸೆಮಿಫೈನಲ್‌ನಲ್ಲಿ ಜೊಕೋವಿಕ್ ಮತ್ತು ರಾಫೆಲ್ ನಡಾಲ್ ಮುಖಾಮುಖಿ

ಪ್ಯಾರಿಸ್: ಪ್ಯಾರಿಸ್‌ನಲ್ಲಿ ಬುಧವಾರ ನಡೆದ ಫ್ರೆಂಚ್ ಓಪನ್ 2021 ಪಂದ್ಯಾವಳಿಯ ಪುರುಷರ ಸಿಂಗಲ್ಸ್ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ನೊವಾಕ್ ಜೊಕೊವಿಕ್ ಇಟಲಿಯ ಮ್ಯಾಟ್ಟೋ ಬೆರೆಟ್ಟಿನಿಯನ್ನು ಮಣಿಸಿದರು.

ಈತನ ರೀತಿಯ ಉತ್ಸಾಹಿ ಕ್ರಿಕೆಟಿಗ ಮತ್ತೊಬ್ಬನಿಲ್ಲ; ಭಾರತೀಯನನ್ನು ಕೊಂಡಾಡಿದ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ

ಈ ಮೂಲಕ ವಿಶ್ವದ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ತನ್ನ 40ನೇ ಗ್ರ್ಯಾಂಡ್‌ಸ್ಲಾಂ ತಲುಪಿದರು. ಸೆಮಿಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ರಾಫೆಲ್ ನಡಾಲ್ ಜೊತೆ ಮುಖಾಮುಖಿಯಾಗಲಿದ್ದು, ಇದು ಈ ಇಬ್ಬರ ನಡುವಿನ 58ನೇ ಮುಖಾಮುಖಿಯಾಗಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‌ ರೋಹಿತ್ ಶರ್ಮಾಗೆ ದೊಡ್ಡ ಸವಾಲಾಗಲಿದೆ: ಯುವರಾಜ್ ಸಿಂಗ್

ಬುಧವಾರ ನಡೆದ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಇಟಲಿಯ ಮ್ಯಾಟ್ಟೋ ಬೆರೆಟ್ಟಿನಿಯನ್ನು 6-3, 6-2, 6-7 (5/7) ರಿಂದ ಮಣಿಸುವುದರ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು. ಕಳೆದ ಮೇ 17ರಂದು ರೋಮ್‌ನಲ್ಲಿ ನಡೆದಿದ್ದ ಇಟಾಲಿಯನ್ ಓಪನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಮುಖಾಮುಖಿಯಾಗಿದ್ದರು. ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ನೊವಾಕ್ ಜೊಕೊವಿಕ್‌ಗೆ ಸೋಲುಣಿಸಿದ್ದರು.

For Quick Alerts
ALLOW NOTIFICATIONS
For Daily Alerts
Story first published: Thursday, June 10, 2021, 12:21 [IST]
Other articles published on Jun 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X