ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಐಸಿಸಿ ಕ್ಯಾಲೆಂಡರ್‌ನಲ್ಲಿ ಐಪಿಎಲ್‌ಗೆ 10 ವಾರ ಮೀಸಲು; ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

10 Week Reserve For IPL On Next ICC Calendar Says BCCI Secretary Jay Shah

ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ವಾರಗಳ ವಿಸ್ತೃತ ವಿಂಡೋವನ್ನು ಹೊಂದಿದ್ದು, ವಿಶ್ವದ ಎಲ್ಲಾ ಅಗ್ರ ಕ್ರಿಕೆಟಿಗರು ಜನಪ್ರಿಯ ಟ್ವೆಂಟಿ 20 ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ ಎಂದು ಭಾರತೀಯ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

IRE vs IND 2nd ಟಿ20: ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್ ನೀಡಿದ್ದೇಕೆ ಎಂದು ವಿವರಿಸಿದ ಪಾಂಡ್ಯ!IRE vs IND 2nd ಟಿ20: ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್ ನೀಡಿದ್ದೇಕೆ ಎಂದು ವಿವರಿಸಿದ ಪಾಂಡ್ಯ!

10-ತಂಡಗಳ ಸ್ಪರ್ಧೆಗೆ ಹೆಚ್ಚಿನ ಫ್ರಾಂಚೈಸಿಗಳನ್ನು ಸೇರಿಸುವ ಯಾವುದೇ ತಕ್ಷಣದ ಯೋಜನೆಗಳಿಲ್ಲ ಮತ್ತು ಭವಿಷ್ಯದ ಯಾವುದೇ ಸೇರ್ಪಡೆಗಳು ಐಪಿಎಲ್‌ನ ಗುಣಮಟ್ಟವನ್ನು ದುರ್ಬಲಗೊಳಿಸಬಾರದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ರಾಯಿಟರ್ಸ್‌ಗೆ ಹೇಳಿದ್ದಾರೆ.

ಐಪಿಎಲ್‌ಗೆ ವಿಶೇಷ ವಿಂಡೋವನ್ನು ಹೊಂದಲು ಚರ್ಚೆ

ಐಪಿಎಲ್‌ಗೆ ವಿಶೇಷ ವಿಂಡೋವನ್ನು ಹೊಂದಲು ಚರ್ಚೆ

"ನಾವು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಮತ್ತು ಹಲವಾರು ಇತರ ಕ್ರಿಕೆಟ್ ಮಂಡಳಿಗಳೊಂದಿಗೆ ಐಪಿಎಲ್‌ಗೆ ವಿಶೇಷ ವಿಂಡೋವನ್ನು ಹೊಂದಲು ಚರ್ಚೆ ನಡೆಸುತ್ತಿದ್ದೇವೆ," ಎಂದು ಜಯ್ ಶಾ ಹೇಳಿದ್ದು, "ಮುಂದಿನ ಐಸಿಸಿ ಎಫ್‌ಟಿಪಿ (ಫ್ಯೂಚರ್ ಟೂರ್ಸ್ ಪ್ರೋಗ್ರಾಂ) ಕ್ಯಾಲೆಂಡರ್‌ನಲ್ಲಿ ಎರಡೂವರೆ ತಿಂಗಳ ಅವಧಿ ಇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದರಿಂದ ಎಲ್ಲಾ ಉನ್ನತ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಬಹುದು," ಎಂದರು.

"ಈ ಐಪಿಎಲ್ ಪಂದ್ಯಾವಳಿಯು ಎಲ್ಲರಿಗೂ ಪ್ರಯೋಜನಕಾರಿಯಾಗಿರುವುದರಿಂದ, ನಾವು ಐಸಿಸಿ ಮತ್ತು ಇತರ ಸದಸ್ಯ ಮಂಡಳಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ," ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿಸಿದರು.

74 ಪಂದ್ಯಗಳಿಂದ 2027ರಲ್ಲಿ 94ಕ್ಕೆ ಏರಿಕೆ

74 ಪಂದ್ಯಗಳಿಂದ 2027ರಲ್ಲಿ 94ಕ್ಕೆ ಏರಿಕೆ

ಐಪಿಎಲ್ ಪ್ರಸ್ತುತ ಎರಡು ತಿಂಗಳ ಕಾಲ (8 ವಾರ) ಆಡಲಾಗುತ್ತದೆ. ಈ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪರಿಣಾಮಕಾರಿಯಾಗಿ ಸ್ಥಗಿತಗೊಳ್ಳುತ್ತದೆ. ಐಪಿಎಲ್ ಲೀಗ್ ಪ್ರಸ್ತುತ ಪ್ರತಿ ಕ್ರೀಡಾ ಋತುವಿನ 74 ಪಂದ್ಯಗಳಿಂದ 2027ರಲ್ಲಿ 94ಕ್ಕೆ ಏರಿಕೆಯಗುತ್ತದೆ. ICC ಆಡಳಿತ ಮಂಡಳಿ ಮುಂದಿನ ತಿಂಗಳು 2024-2031 FTP (ಫ್ಯೂಚರ್ ಟೂರ್ಸ್ ಪ್ರೋಗ್ರಾಂ) ಕ್ಯಾಲೆಂಡರ್ ಅನ್ನು ಚರ್ಚಿಸುವ ಸಾಧ್ಯತೆಯಿದೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ, ಮುಂದಿನ ಐದು ವರ್ಷಗಳ ಟ್ವೆಂಟಿ 20 ಲೀಗ್‌ನ ಮಾಧ್ಯಮ ಹಕ್ಕುಗಳ ಮಾರಾಟದಿಂದ ಈ ತಿಂಗಳ ಆರಂಭದಲ್ಲಿ 6.2 ಶತಕೋಟಿ ಡಾಲರ್‌ನಿಂದ ತಮ್ಮ ಬೊಕ್ಕಸವನ್ನು ಹೆಚ್ಚಿಸಿದೆ. ಈ ವರ್ಷದ ಐಪಿಎಲ್ ಎರಡು ಹೊಸ ಫ್ರಾಂಚೈಸಿಗಳನ್ನು ಒಳಗೊಂಡಿತ್ತು ಮತ್ತು ಅವುಗಳಲ್ಲಿ ಒಂದಾದ ಗುಜರಾತ್ ಟೈಟನ್ಸ್ ತಂಡ, ಮೇ 29ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ 1,00,000 ಅಭಿಮಾನಿಗಳ ಸಮ್ಮುಖದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತು.

ಸದ್ಯಕ್ಕೆ 10 ತಂಡಗಳ ಲೀಗ್ ಆಗಿ ಉಳಿಯುತ್ತದೆ

ಸದ್ಯಕ್ಕೆ 10 ತಂಡಗಳ ಲೀಗ್ ಆಗಿ ಉಳಿಯುತ್ತದೆ

ಗುಜರಾತ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಲೀಗ್‌ಗೆ ಸೇರಲು ಒಟ್ಟು 1.7 ಶತಕೋಟಿ ಡಾಲರ್ ಪಾವತಿಸಿವೆ. ಇದು ಸದ್ಯಕ್ಕೆ 10 ತಂಡಗಳ ವ್ಯವಹಾರವಾಗಿ ಉಳಿಯುತ್ತದೆ ಎಂದು ಜಯ್ ಶಾ ಹೇಳಿದರು.

"ಐಪಿಎಲ್ ಅನ್ನು ಮತ್ತಷ್ಟು ವಿಸ್ತರಿಸುವುದು, ಪ್ರತಿಭೆಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಟ್ಯಾಲೆಂಟ್ ಪೂಲ್ ಅನ್ನು ವಿಸ್ತರಿಸುವುದು, ತಳಹದಿಯನ್ನು ಬಲಪಡಿಸುವುದು, ಸರಿಯಾದ ಮೂಲಸೌಕರ್ಯವನ್ನು ನಿರ್ಮಿಸುವುದು ಮತ್ತು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ,'' ಎಂದು ಅವರು ಅಭಿಪ್ರಾಯಪಟ್ಟರು.

ಉಮ್ರಾನ್ ಮಲ್ಲಿಕ್ ಗೆ ಕೊನೆ ಓವರನ್ನ ಕೊಡದೇ ಇದ್ದಿದ್ರೆ ಟೀಮ್ ಇಂಡಿಯಾ ಸೋಲ್ತಿತ್ತಾ?| OneIndia Kannada
ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬದ್ಧವಾಗಿದೆ

ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬದ್ಧವಾಗಿದೆ

ಐಪಿಎಲ್ ವಿಂಡೋವನ್ನು ವಿಸ್ತರಿಸುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತು ಭಾರತದ ಬದ್ಧತೆಗೆ ಅಡ್ಡಿಯಾಗುತ್ತದೆ ಎಂಬ ಸಲಹೆಗಳನ್ನು ಜಯ್ ಶಾ ತಳ್ಳಿಹಾಕಿದರು. "ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬದ್ಧವಾಗಿದೆ ಮತ್ತು ಇದು ಕೇವಲ ಭಾರತ ವಿರುದ್ಧ ಇಂಗ್ಲೆಂಡ್ ಅಥವಾ ಭಾರತ ವಿರುದ್ಧ ಆಸ್ಟ್ರೇಲಿಯಾದಂತಹ ನೇರ ಸರಣಿಯಲ್ಲ," ಎಂದು ಜಯ್ ಶಾ ತಿಳಿಸಿದರು.

"ನಾವು ಸಮಗ್ರ ಕ್ಯಾಲೆಂಡರ್ ಅನ್ನು ವಿನ್ಯಾಸಗೊಳಿಸಲು ಬಯಸುತ್ತೇವೆ, ಅಲ್ಲಿ ನಾವು ಸ್ಥಿರ ಮತ್ತು ನಿಯಮಿತ ದ್ವಿಪಕ್ಷೀಯ ಪ್ರವಾಸಗಳೊಂದಿಗೆ ರಾಷ್ಟ್ರಗಳನ್ನು ಸಂಯೋಜಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ,"ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

Story first published: Wednesday, June 29, 2022, 17:13 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X