ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನ ಈ ಪ್ರಮುಖ ನಿಯಮವನ್ನು ಬದಲಾಯಿಸಲು ಒತ್ತಾಯಿಸಿದ ಆಕಾಶ ಚೋಪ್ರ

Aakash Chopra said From next year BCCI should consider allowing 5 Foreign players per team

ವಿಶ್ವದ ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಟೂರ್ನಿಯಾದ ಐಪಿಎಲ್ ಪ್ರತಿ ವರ್ಷವೂ ತನ್ನ ರೋಚಕತೆಯನ್ನು ಹೆಚ್ಚುಗೊಳಿಸುತ್ತಾ ಸಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಕೆಲ ಬದಲಾವಣೆಗಳನ್ನು ಕೂಡ ಮಾಡಿಕೊಳ್ಳುತ್ತಾ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡುತ್ತಿದೆ. ಈಗ ಈ ಐಪಿಎಲ್ ಟೂರ್ನಿಯಲ್ಲಿ ಒಂದು ಪ್ರಮುಖ ನಿಯಮವನ್ನು ಮುಂದಿನ ಆವೃತ್ತಿಯಿಂದ ಬದಲಾವಣೆ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ ಒತ್ತಾಯಿಸಿದ್ದಾರೆ.

ವಿಶ್ವದಲ್ಲಿ ಕ್ರಿಕೆಟ್ ಆಡುವ ಬಹುತೇಕ ರಾಷ್ಟ್ರಗಳ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಪ್ರಖ್ಯಾತ ಆಟಗಾರರ ಪಾಲ್ಗೊಳ್ಳುವಿಕೆಯಿಂದಾಗಿ ಆಟದ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಆದರೆ ತಂಡದ ಆಡುವ ಬಳಗದಲ್ಲಿ ನಾಲ್ಕು ಮಂದಿ ವಿದೇಶಿ ಆಟಗಾರರು ಮಾತ್ರವೇ ಇರವೇಕೆಂಬ ನಿಯಮ ಈಗ ಐಪಿಎಲ್‌ನಲ್ಲಿದೆ. ಇದರಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಆಕಾಶ್ ಚೋಪ್ರ ಒತ್ತಾಯಸಿದ್ದಾರೆ.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ಸದ್ಯ ಕಾಮೆಂಟೇಟರ್ ಆಗಿ ಖ್ಯಾತರಾಗಿರುವ ಆಕಾಶ್ ಚೋಪ್ರ ಐಪಿಎಲ್ ಬಗ್ಗೆ ವಿಶ್ಲೇಷಣೆ ಮಾಡುತ್ತಾ "ಸದ್ಯ ಐಪಿಎಲ್ ಟೂರ್ನಿ ಕೇವಲ ನಾಲ್ಕು ತಂಡಗಳಿಂದ ಆಳಲ್ಪಡುತ್ತಿದೆ. ಉಳಿದ ತಂಡಗಳು ಪರದಾಟ ನಡೆಸುತ್ತಿವೆ. ಮುಂದಿನ ಆವೃತ್ತಿಗೆ ಮತ್ತೆರಡು ತಂಡಗಳು ಸೇರ್ಪಡೆಯಾದರೆ ಇಡೀ ಟೂರ್ನಿಯ ಗುಣಮಟ್ಟಕ್ಕೆ ಏಟು ಬೀಳುತ್ತದೆ" ಎಂದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಚೋಪ್ರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದೇಶಿ ಆಟಗಾರರ ಹೆಚ್ಚಳಕ್ಕೆ ಒತ್ತಾಯ

ವಿದೇಶಿ ಆಟಗಾರರ ಹೆಚ್ಚಳಕ್ಕೆ ಒತ್ತಾಯ

"ಇದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಯಾಕೆಂದರೆ ಚೆನ್ನೈ, ಮುಂಬೈ, ಡೆಲ್ಲಿ ಮತ್ತು ಈಗ ಆರ್‌ಸಿಬಿ ತಂಡಗಳು ಕಾಗದದಲ್ಲಿ ಅತ್ಯಂತ ಬಲಿಷ್ಠ ತಂಡಗಳಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಯಾವಾಗಲೂ ಅಗ್ರ ತಂಡಗಳಾಗಿ ಉಳಿದುಕೊಳ್ಳುತ್ತವೆ. ಉಳಿದ ತಂಡಗಳು ನಿರಂತರವಾಗಿ ಪರದಾಡುತ್ತವೆ. ಇಲ್ಲಿ ಆಟಗಾರರ ಆಯ್ಕೆಯಲ್ಲಿ ಮಾತ್ರ ಸಮಸ್ಯೆಯಿರಬಹುದು. ಇಂತಾ ಸಂದರ್ಭದಲ್ಲಿ ಕೇವಲ ನಾಲ್ಕು ವಿದೇಶಿ ಆಟಗಾರರು ಹಾಗೂ ಏಳು ಭಾರತೀಯ ಆಟಗಾರರಿಂದಾಗಿ ಆಟದ ಗುಣಮಟ್ಟವನ್ನು ಹೆಚ್ಚಿನ ಕಾಲ ಕಾಪಾಡುವುದು ಅಸಾಧ್ಯ. ಅದರಲ್ಲೂ ಈಗ ಹತ್ತು ತಂಡಗಳು ಆಡಲಿರುವ ಸಂದರ್ಭದಲ್ಲಿ ಇದರ ಪರಿಸ್ಥಿತಿ ಹೇಗಾಗಬೇಡ?" ಎಂದಿದ್ದಾರೆ ಆಕಾಶ್ ಚೋಪ್ರ. ಈ ಮೂಲಕ ವಿದೇಶಿ ಆಟಗಾರರ ಸಂಖ್ಯೆಯಲ್ಲಿ ಹೆಚ್ಚಳ ಮಾಡಬೇಕಾಗುವುದು ಅಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಆಕಾಶ್ ಚೋಪ್ರ.

ಐದು ವಿದೇಶಿ ಆಟಗಾರರಿಗೆ ಅವಕಾಶಕ್ಕೆ ಚೋಪ್ರ ಮನವಿ

ಐದು ವಿದೇಶಿ ಆಟಗಾರರಿಗೆ ಅವಕಾಶಕ್ಕೆ ಚೋಪ್ರ ಮನವಿ

ಈ ಸಂದರ್ಭದಲ್ಲಿ ಆಕಾಶ್ ಚೋಪ್ರ ಈ ಎಲ್ಲಾ ಕಾರಣಗಳಿಂದಾಗಿ ಐಪಿಎಲ್‌ನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಐವರು ವಿದೇಶಿ ಆಟಗಾರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ. "ಪ್ರತಿ ತಂಡವೂ ಐವರಿ ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯುವ ಬಗ್ಗೆ ಬಿಸಿಸಿಐ ಗಂಭೀರವಾಗಿ ಚಿಂತನೆ ನಡೆಸಬೇಕು. ಈ ಕಾರಣದಿಂದಾಗಿ ಪ್ರತಿ ತಂಡವೂ 10-11ರಷ್ಟು ವಿದೇಶಿ ಆಟಗಾರರನ್ನು ಹೊಂದಲು ಅವಕಾಶ ನೀಡುತ್ತದೆ. ಯಾವೆಲ್ಲಾ ತಂಡ ಐವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯಲು ಬಯಸುತ್ತದೋ ಅವರು ಆಡಲಿ. ಇಲ್ಲವಾದರೆ ಯಾವುದೇ ಸಮಸ್ಯೆಯಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಪ್ರಸಕ್ತ ವಿದೇಶಿ ಆಟಗಾರರ ನಿಯಮ ಹೀಗಿದೆ

ಪ್ರಸಕ್ತ ವಿದೇಶಿ ಆಟಗಾರರ ನಿಯಮ ಹೀಗಿದೆ

ಸದ್ಯ ಐಪಿಎಲ್‌ನಲ್ಲಿ ನಾಲ್ಕು ವಿದೇಶಿ ಆಟಗಾರರು ಮಾತ್ರವೇ ಆಡುವ ಬಳಗದಲ್ಲಿರಲು ಅವಕಾಶವಿದೆ. ಆದರೆ ಕೆಲ ತಂಡಗಳು ನಾಲ್ಕರ ಬದಲಿಗೆ ಕೇವಲ ಮೂರು ವಿದೇಶಿ ಆಟಗಾರರೊಂದಿಗೆ ಮಾತ್ರವೇ ಕಣಕ್ಕಿಳಿಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಡೆಲ್ಲಿ ಇಂತಾ ಪ್ರಯೋಗವನ್ನು ಹೆಚ್ಚಾಗಿ ಮಾಡುತ್ತಿದೆ. ಇನ್ನು ಸಂಪೂರ್ಣ ಸ್ಕ್ವಾಡ್‌ನಲ್ಲಿ 8 ವಿದೇಶಿ ಆಟಗಾರರನ್ನು ಹೊಂದಲು ಎಲ್ಲಾ ತಂಡಗಳಿಗೂ ಅವಕಾಶವಿದೆ.

Maxwell ಔಟ್ ಆದ ರೀತಿ ಅಭಿಮಾನಿಗಳಿಗೆ ಬೇಸರ ತಂದಿದೆ | Oneindia Kannada
ಮುಂದಿನ ಆವೃತ್ತಿಯಲ್ಲಿ ಬದಲಾವಣೆ

ಮುಂದಿನ ಆವೃತ್ತಿಯಲ್ಲಿ ಬದಲಾವಣೆ

ಇನ್ನು ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ಮತ್ತೆರಡು ತಂಡಗಳು ಸೇರ್ಒಡೆಯಾಗುವುದು ಖಚಿತವಾಗಿದೆ. ಹೀಗಾಗಿ ಟೂರ್ನಿಯ ಮಾದರಿಯಲ್ಲಿಯೂ ಬದಲಾವಣೆಯಾಗಲಿದೆ. ಮುಂದಿನ ಆವೃತ್ತಿಗೆ ಮೆಗಾ ಆಕ್ಷನ್ ಕೂಡ ನಡೆಯಲಿದ್ದು ಎಲ್ಲಾ ತಂಡಗಳು ತಮ್ಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿದೆ. ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಒಟ್ಟು 74 ಪಂದ್ಯಗಳು ನಡೆಯಲಿದೆ.

Story first published: Wednesday, October 6, 2021, 15:46 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X