ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯ ರದ್ದು; 2023ರ ಏಕದಿನ ವಿಶ್ವಕಪ್ ಸ್ಥಾನ ಭದ್ರಪಡಿಸಿಕೊಂಡ ಅಫ್ಘಾನ್

Afghanistan Has Secured Spot In The 2023 ODI World Cup After 2nd ODI Against Sri Lanka Abandoned

ಆತಿಥೇಯ ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆಯಬೇಕಿದ್ದ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಅಫ್ಘಾನಿಸ್ತಾನ ತಂಡವು ವಿಶ್ವಕಪ್ ಸೂಪರ್ ಲೀಗ್ ಸ್ಟ್ಯಾಂಡಿಂಗ್‌ನಲ್ಲಿ ಐದು ಹೆಚ್ಚುವರಿ ಅಂಕಗಳನ್ನು ಪಡೆಯಿತು. ಹೀಗಾಗಿ ಪ್ರಸ್ತುತ ವರ್ಷದ ಕ್ರಿಕೆಟ್ ಚಕ್ರದಲ್ಲಿ ಅವರು ಒಟ್ಟು 115 ಅಂಕಗಳನ್ನು ಗಳಿಸಿದಂತಾಗಿದೆ.

Vijay Hazare Trophy: ಯುಪಿ ವಿರುದ್ಧ ದ್ವಿಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಮುರಿದ 5 ದಾಖಲೆಗಳ ಪಟ್ಟಿVijay Hazare Trophy: ಯುಪಿ ವಿರುದ್ಧ ದ್ವಿಶತಕ ಬಾರಿಸಿ ರುತುರಾಜ್ ಗಾಯಕ್ವಾಡ್ ಮುರಿದ 5 ದಾಖಲೆಗಳ ಪಟ್ಟಿ

ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಸುರಕ್ಷಿತವಾಗಿದ್ದು, ಸೂಪರ್ ಲೀಗ್‌ನ ಕೊನೆಯಲ್ಲಿ ಅಗ್ರ ಎಂಟು ತಂಡಗಳು ಸುಲಭವಾಗಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸುತ್ತವೆ. ಅಫ್ಘಾನಿಸ್ತಾನಕ್ಕೆ ಐದು ಪಾಯಿಂಟ್‌ಗಳು ಉತ್ತಮ ಫಲಿತಾಂಶವಾಗಿದ್ದರೂ, ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಪರದಾಡುತ್ತಿರುವ ಶ್ರೀಲಂಕಾ ವಿರುದ್ಧ ಕಾರಣ ಅದು ಸವಾಲಾಗಿತ್ತು.

Afghanistan Has Secured Spot In The 2023 ODI World Cup After 2nd ODI Against Sri Lanka Abandoned


ಇನ್ನು ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ಕೇವಲ 67 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ ಮತ್ತು ಅಗ್ರ ಎಂಟರೊಳಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದ್ದು, ಈ ಅವಧಿಯಲ್ಲಿ ಅವರಿಗೆ ಕೇವಲ ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ.

ಬುಧವಾರ ಪಲ್ಲೆಕೆಲೆಯಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸುವ ಮೂಲಕ ಶ್ರೀಲಂಕಾ ಮೌಲ್ಯಯುತ 10 ಅಂಕಗಳನ್ನು ಗಳಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಳ್ಳಲು ಎದುರು ನೋಡುತ್ತಿದೆ.

Story first published: Monday, November 28, 2022, 19:33 [IST]
Other articles published on Nov 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X