ದಾಲ್ಮಿಯಾ ಅಲ್ಲದಿದ್ದರೆ ಅಖ್ತರ್ ಕ್ರಿಕೆಟ್ ಜೀವನ 2000ದಲ್ಲೇ ಅಂತ್ಯ: ಮಾಜಿ ಪಿಸಿಬಿ ಅಧ್ಯಕ್ಷ

ವಿಶ್ವದ ಅತ್ಯಂತ ವೇಗದ ಬೌಲರ್ ಎಂಬ ಖ್ಯಾತಿ ಪಾಕಿಸ್ತಾನದ ಶೋಯೆಬ್ ಅಖ್ತರ್ ಅವರದ್ದು. ಸುಮಾರು ಒಂದೂವರೆ ದಶಕಗಳ ಕಾಲ ಪಾಕ್ ಕ್ರಿಕೆಟ್‌ನಲ್ಲಿ ಅಖ್ತರ್ ಪ್ರಾಭಲ್ಯವನ್ನು ಮೆರೆದಿದ್ದಾರೆ. ತನ್ನ ಘಾತಕ ಬೌಲಿಂಗ್ ದಾಳಿಗೆ ಎದುರಾಳಿ ದಾಂಡಿಗರನ್ನು ಕಂಗೆಡಿಸಿದ್ದಾರೆ.

ಆದರೆ ಇಂತಾ ಬೌಲರ್‌ನ ಕ್ರಿಕೆಟ್ ಕೆರಿಯರ್ 2000ನೇ ಇಸವಿಯಲ್ಲಿ ಬಹುತೇಕ ಅಂತ್ಯವಾಗಬೇಕಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಆದರೆ ಇಂತಾ ಸಂದರ್ಭದಲ್ಲಿ ಅಖ್ತರ್ ಕ್ರಿಕೆಟ್ ಬದುಕಿಗೆ ನೆರವಾಗಿದ್ದು ಓರ್ವ ಭಾರತೀಯ. ಅವರು ಅಂದು ಐಸಿಸಿ ಅಧ್ಯಕ್ಷರಾಗಿದ್ದರು.

ಈ ವಿಚಾರವನ್ನು ಬಹಿರಂಗಗೊಳಿಸಿದ್ದು ಬೇರೆ ಯಾರೂ ಅಲ್ಲ, ಖುದ್ದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಂದಿನ ಅಧ್ಯಕ್ಷರೇ. ಏನದು ಒಟ್ಟಾರೆ ಪ್ರಕರಣ ಮುಂದೆ ಓದಿ

ಕುತೂಹಲಕಾರಿ ಘಟನೆ ಬಿಚ್ಚಿಟ್ಟ ತೌಕಿರ್ ಜಿಯಾ

ಕುತೂಹಲಕಾರಿ ಘಟನೆ ಬಿಚ್ಚಿಟ್ಟ ತೌಕಿರ್ ಜಿಯಾ

ಶೋಯೆಬ್ ಅಖ್ತರ್ ವೃತ್ತಿ ಬದುಕಿನ ಕುರಿತಾದ ಈ ಕುತೂಹಲಕಾರಿ ಘಟನೆಯನ್ನು ಬಿಚ್ಚಿಟ್ಟದ್ದು ಮಾಜಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ರಾಗಿದ್ದ ತೌಕಿರ್ ಜಿಯಾ. ಇವರು 1999ರಿಂದ 2003ರ ವರೆಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ನಡೆದ ಘಟನೆಯನ್ನು ಜಿಯಾ ಬಹಿರಂಗಪಡಿಸಿದ್ದಾರೆ.

ಅನುಮಾನಾಸ್ಪದ ಬೌಲಿಂಗ್ ಶೈಲಿ

ಅನುಮಾನಾಸ್ಪದ ಬೌಲಿಂಗ್ ಶೈಲಿ

ಶೋಯೆಬ್ ಅಖ್ತರ್‌ಗೆ ವೃತ್ತಿಜೀವನದಲ್ಲಿ ಕಂಟಕವಾಗಬೇಕಿದ್ದದ್ದು ಅವರ ಬೌಲಿಂಗ್ ಶೈಲಿ. ಬೌಲಿಂಗ್ ಆ್ಯಕ್ಷನ್ ಅನುಮಾನಾಸ್ಪದವಿದೆ, ಹೀಗಾಗಿ ಅವರ ಬೌಲಿಂಗ್ ಶೈಲಿಯ ಮೇಲೆ ಐಸಿಸಿ ನಿಗಾ ವಹಿಸಿದೆ ಎಂದು ಪಿಸಿಬಿಗೆ ತಿಳಿಸಿತ್ತು. ಆದರೆ ಈ ಸಂದರ್ಭದಲ್ಲಿ ಜಗಮೋಹನ್ ದಾಲ್ಮಿಯಾ ಅಖ್ತರ್ ವೃತ್ತಿ ಜೀವನಕ್ಕೆ ನೆರವಾದರು ಎಂದು ಜಿಯಾ ಹೇಳಿದ್ದಾರೆ.

ಐಸಿಸಿ ಸದಸ್ಯರು ಒತ್ತಾಯಿಸಿದರೂ ದಾಲ್ಮಿಯಾ ಬೆಂಬಲ

ಐಸಿಸಿ ಸದಸ್ಯರು ಒತ್ತಾಯಿಸಿದರೂ ದಾಲ್ಮಿಯಾ ಬೆಂಬಲ

ಆಖ್ತರ್ ಬೌಲಿಂಗ್ ಐಸಿಸಿ ನಿಯಮ ಬಾಹಿರವಾಗಿದೆ, ಅದಕ್ಕೆ ಕ್ರಮ ಕೈಗೊಳಬೇಕೆಂದು ಐಸಿಸಿಯ ಸದಸ್ಯರು ಐಸಿಸಿ ಅಧ್ಯಕ್ಷ ದಾಲ್ಮಿಯಾ ಮೇಲೆ ಒತ್ತಡವನ್ನು ಹೇರಿದ್ದರು. ಆದರೆ ದಾಲ್ಮಿಯಾ ನಮ್ಮ ಪರವಾದ ನಿಕುವನ್ನು ಹೊಂದಿದ್ದರು ಎಂದು ತೌಕಿರ್ ಜಿಯಾ ಹೇಳಿದ್ದಾರೆ.

ಅಖ್ತರ್ ತೋಳಿನಲ್ಲಿ ನ್ಯೂನ್ಯತೆ

ಅಖ್ತರ್ ತೋಳಿನಲ್ಲಿ ನ್ಯೂನ್ಯತೆ

ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರ ತೋಳಿನಲ್ಲಿ ವೈದ್ಯಕೀಯ ನ್ಯೂನ್ಯತೆ ಇತ್ತು. ಹೀಗಾಗಿ ಮೊಣಕೈ ವಿಸ್ತರಣೆಯಾಗಿತ್ತು. ಇದನ್ನು ದಾಲ್ಮಿಯಾ ಒಪ್ಪಿಕೊಂಡು ಐಸಿಸಿ ಸದಸ್ಯರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಜಿಯಾ ಹೇಳಿದ್ದಾರೆ. ಹೀಗೆ ಅಖ್ತರ್ ವೃತ್ತಿ ಜೀವನಕ್ಕೆ ದಾಲ್ಮಿಯಾ ಯಾವ ರೀತಿ ಸಹಾಯ ಮಾಡಿದರು ಎಂದು ಹೇಳಿದ್ದಾರೆ.

ಐಸಿಸಿ ಅಧ್ಯಕ್ಷರಾದ ಮೊದಲ ಭಾರತೀಯ

ಐಸಿಸಿ ಅಧ್ಯಕ್ಷರಾದ ಮೊದಲ ಭಾರತೀಯ

ಅತ್ಯುತ್ತಮ ಆಡಳಿತಗಾರ ಎಂಬ ಖ್ಯಾತಿಯನ್ನು ಗಳಿಸಿದ ಜಗಮೋಹನ್ ದಾಲ್ಮಿಯಾ 1997ರಿಂದ 2000ನೇ ಇಸವಿಯವರೆಗೆ ಐಸಿಸಿಯ ಅಧ್ಯಕ್ಷರಾಗಿದ್ದರು. ಐಸಿಸಿ ಅಧ್ಯಕ್ಷ ಹುದ್ದೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ದಾಲ್ಮಿಯಾ ಪಡೆದಿದ್ದಾರೆ. ಬಳಿಕ ದಾಲ್ಮಿಯಾ ಬಿಸಿಸಿಐ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 17, 2020, 11:46 [IST]
Other articles published on Apr 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X