ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pak vs Eng: ಸೋಲಿನ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ, ಎರಡನೇ ಟೆಸ್ಟ್‌ನಿಂದ ಪ್ರಮುಖ ಬೌಲರ್ ಹೊರಕ್ಕೆ

Another Big Blow For Pakistan After Lost 1st Test, Haris Rauf Ruled Out Of The 2nd Test

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್ ಹ್ಯಾರಿಸ್ ರೌಫ್ ಗಾಯದ ಸಮಸ್ಯೆಯಿಂದ 2ನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ.

ಮೂಲಗಳ ಪ್ರಕಾರ ಹ್ಯಾರಿಸ್ ರೌಫ್ ಮೂರನೇ ಟೆಸ್ಟ್ ಪಂದ್ಯವನ್ನು ಆಡುವುದು ಅನುಮಾನ ಎನ್ನಲಾಗಿದೆ. ಸರಣಿಯಲ್ಲಿ ಈಗಾಗಲೇ ಒಂದು ಪಂದ್ಯವನ್ನು ಸೋಲುವ ಮೂಲಕ 0-1 ಹಿನ್ನೆಡೆ ಅನುಭವಿಸಿರುವ ಪಾಕಿಸ್ತಾನಕ್ಕೆ ಇದು ಮತ್ತೊಂದು ಸಮಸ್ಯೆಯಾಗಿದೆ.

ಬಲಗಾಲಿನ ಗಾಯಕ್ಕೆ ತುತ್ತಾಗಿರುವ ಕಾರಣ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಪಾಕಿಸ್ತಾನ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಡಿಸೆಂಬರ್ 9ರಂದು ಮುಲ್ತಾನ್‌ನಲ್ಲಿ ಆರಂಭವಾಗಲಿದೆ. ಸರಣಿಯ ಮೊದಲನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಅವರು ಪದಾರ್ಪಣೆ ಮಾಡಿದ್ದರು.

IPL 2023: ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದಾದ ಪ್ರಮುಖ ಆಟಗಾರರು ಇವರುIPL 2023: ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದಾದ ಪ್ರಮುಖ ಆಟಗಾರರು ಇವರು

ಪದಾರ್ಪಣೆ ಮಾಡಿದ ಮೊದಲ ದಿನವೇ ಅವರು ಫೀಲ್ಡಿಂಗ್ ಮಾಡುವ ಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗಾಗಲೇ ಡಿಸೆಂಬರ್ 4 ರಂದು, ಎಂಆರ್ ಐ (MRI) ಸ್ಕ್ಯಾನ್ ಫಲಿತಾಂಶದ ನಂತರ ವೇಗಿ ಟೆಸ್ಟ್‌ನ ಉಳಿದ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ಮಾಹಿತಿ ನೀಡಿದೆ. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 13 ಓವರ್‌ಗಳನ್ನು ಬೌಲ್ ಮಾಡಿದರು, ಝಾಕ್ ಕ್ರಾಲಿ ವಿಕೆಟ್ ಪಡೆದಿದ್ದರು.

ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿದ್ದ ರೌಫ್

ಗಾಯದ ನಡುವೆಯೂ ಬ್ಯಾಟಿಂಗ್ ಮಾಡಿದ್ದ ರೌಫ್

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ವೇಳೆ ಬೌಲಿಂಗ್ ಮಾಡಿದ್ದ ರೌಫ್, ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ರೌಫ್ 32 ಎಸೆತಗಳಲ್ಲಿ 12 ರನ್ ಗಳಿಸಿದ್ದರು. ಪಾಕ್‌ನ ಎರಡನೇ ಇನ್ನಿಂಗ್ಸ್‌ ವೇಳೆ ಗಾಯದ ಸಮಸ್ಯೆಯಿದ್ದರೂ ಬ್ಯಾಟಿಂಗ್ ಮಾಡಲು ಬಂದ ರೌಫ್ ಎದುರಿಸಿದ ಎರಡನೇ ಎಸೆತದಲ್ಲಿಯೇ ಎಲ್‌ಬಿಡಬ್ಲ್ಯೂಗೆ ಬಲಿಯಾದರು.

ಏಕದಿನ ಮತ್ತು ಟಿ20 ಮಾದರಿಯಲ್ಲಿ ಪಾಕಿಸ್ತಾನದ ಪ್ರಮುಖ ಬೌಲರ್ ಆಗಿರುವ ರೌಫ್, ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಗಾಯಗೊಂಡಿರುವುದರಿಂದ ನಿರಾಸೆ ಅನುಭವಿಸಿದ್ದಾರೆ.

IND vs BAN: ರೋಹಿತ್ ಶರ್ಮಾ ನಾಯಕತ್ವಕ್ಕೆ ರೇಟಿಂಗ್ ನೀಡಿದ ಯುವರಾಜ್ ಸಿಂಗ್

ಬದಲೀ ಆಟಗಾರನ ಹೆಸರಿಸುವ ಸಾಧ್ಯತೆ

ಬದಲೀ ಆಟಗಾರನ ಹೆಸರಿಸುವ ಸಾಧ್ಯತೆ

ಗಾಯಗೊಂಡು ಎರಡನೇ ಟೆಸ್ಟ್‌ನಿಂದ ಹೊರಬಿದ್ದಿರುವ ಹ್ಯಾರಿಸ್ ರೌಪ್‌ಗೆ ಬದಲೀ ಆಟಗಾರನನ್ನು ಪಾಕಿಸ್ತಾನ ಹೆಸರಿಸಲಿದೆ. ಶಾಹೀನ್ ಅಫ್ರಿದಿ ಈಗಾಗಲೇ ಗಾಯದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ 2022 ಫೈನಲ್‌ನಲ್ಲಿ ಮೊಣಕಾಲಿನ ಗಾಯ ಹೆಚ್ಚಾದ ಕಾರಣ ಮೂರು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ಈಗ ಹ್ಯಾರಿಸ್ ರೌಫ್ ಕೂಡ ಗಾಯಕ್ಕೆ ತುತ್ತಾಗಿರುವುದರಿಂದ ಪಿಸಿಬಿಗೆ ತಲೆನೋವಾಗಿ ಪರಿಣಮಿಸಿದೆ. ರೌಫ್ ಬದಲಿಗೆ ಆಡುವ ಬಳಗದಲ್ಲಿ ಮೊಹಮ್ಮದ್ ವಾಸಿಂ ಜೂನಿಯರ್ ಪ್ರಸ್ತುತ ತಂಡದಲ್ಲಿ ಏಕೈಕ ಆಯ್ಕೆಯಾಗಿದ್ದಾರೆ.

ಯಾರಿಗೆ ಸಿಗುತ್ತೆ ಅವಕಾಶ?

ಯಾರಿಗೆ ಸಿಗುತ್ತೆ ಅವಕಾಶ?

ಚೊಚ್ಚಲ ಪಂದ್ಯವನ್ನು ಆಡಿರುವ ಮೊಹಮ್ಮದ್ ಅಲಿ ಎರಡನೇ ಟೆಸ್ಟ್‌ನಲ್ಲಿ ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ನಿರೀಕ್ಷೆ ಇದೆ. ರೌಫ್ ಬದಲಿಗೆ ಮೊಹಮ್ಮದ್ ವಾಸಿಂ ಜೂನಿಯರ್ ಆಯ್ಕೆಯಾಗುವ ಸಾಧ್ಯತೆ ಇದೆ.

ತಂಡದಲ್ಲಿ ಫಹೀಮ್ ಅಶ್ರಫ್ ಕೂಡ ಇದ್ದಾರೆ, ಆದರೆ ಅಶ್ರಫ್ ಬೌಲಿಂಗ್ ಆಯ್ಕೆ ಎನ್ನುವುದಕ್ಕಿಂತ ಆಲ್‌ರೌಂಡರ್ ಎಂದು ಪರಿಗಣಿಸಬಹುದು. ಮೊಹಮ್ಮದ್ ಅಬ್ಬಾಸ್ ಮತ್ತು ಹಸನ್ ಅಲಿ ಅನುಭವಿ ಬೌಲರ್ ಆಗಿದ್ದು, ಉಳಿದ ಟೆಸ್ಟ್ ಪಂದ್ಯಗಳಿಗೆ ಇವರಲ್ಲಿ ಒಬ್ಬರನ್ನು ಕೂಡ ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಇದೆ.

Story first published: Tuesday, December 6, 2022, 11:45 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X