ಇಸ್ಲಾಮಾಬಾದ್, ಸೆಪ್ಟೆಂಬರ್ 25: ನೇರಪ್ರಸಾರ ಆಗುತ್ತಿರುವುದನ್ನು ಅರಿಯದೆಯೇ ಕ್ಯಾಮೆರಾ ಮುಂದೆ ಅಸಭ್ಯವಾಗಿ ವರ್ತಿಸಿದ ಪಾಕಿಸ್ತಾನದ ಸುದ್ದಿ ವಾಹಿನಿಯೊಂದರ ನಿರೂಪಕನ ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದ ಸುದ್ದಿ ಓದುವುದಕ್ಕೂ ಮುನ್ನ ಸಹನಿರೂಪಕಿ ಜತೆ ಹರಟುತ್ತಾ ತಮಾಷೆ ಮಾಡುತ್ತಿದ್ದ ನಿರೂಪಕ, ತನ್ನ ಎರಡೂ ಕೈಗಳ ಮಧ್ಯದ ಬೆರಳುಗಳನ್ನು ಆಡಿಸುತ್ತಿದ್ದದ್ದು ನೇರಪ್ರಸಾರವಾಗಿತ್ತು.
ಏಷ್ಯಾ ಕಪ್ 2018: ಔಪಚಾರಿಕ ಪಂದ್ಯದಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ಸವಾಲು
ಪರದೆ ಮೇಲೆ ಬೇರೆ ದೃಶ್ಯಗಳು ಪ್ರಸಾರವಾಗುತ್ತಿವೆ ಎಂದು ಭಾವಿಸಿದ್ದ 'ಸಮಾ ಟಿವಿ ನ್ಯೂಸ್' ವಾಹಿನಿಯ ನಿರೂಪಕನಿಗೆ ಕ್ಯಾಮೆರಾ ರೋಲ್ ಆಗಿದ್ದೇ ತಿಳಿದಿರಲಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿರೂಪಕರಿಬ್ಬರೂ ನಗುತ್ತಿರುವುದನ್ನು ಲೇವಡಿ ಮಾಡಿ ಅನೇಕ ಮೀಮ್‌ಗಳು ಸೃಷ್ಟಿಯಾಗಿವೆ. ನಿರೂಪಕನ ವರ್ತನೆಯನ್ನು ಅನೇಕರು ಟೀಕಿಸಿದ್ದಾರೆ.
When panel producer is in so much hurry to switch!!! RIP Journalism 👇 pic.twitter.com/6NeYRwxNvB
— Syed Raza Mehdi (@SyedRezaMehdi) September 22, 2018
ಮಾಧ್ಯಮ ಕಚೇರಿಯಲ್ಲಿ ಕುಳಿತ ವ್ಯಕ್ತಿಗಳು ಹೇಗೆ ವರ್ತಿಸಬೇಕು, ಅವರ ನಡತೆ ಹೇಗಿರಬೇಕು ಎಂಬುದರ ಬಗ್ಗೆಯೂ ಚರ್ಚೆಗಳಾಗುತ್ತಿವೆ.
ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ
ಪಾಕ್-ಆಫ್ಘನ್ ಪಂದ್ಯ ವೀಕ್ಷಿಸುತ್ತಿದ್ದ ಪಾಕಿಸ್ತಾನದ ಬಾಲಕನೊಬ್ಬ ತನ್ನ ಮಧ್ಯದ ಬೆರಳುಗಳನ್ನು ತೋರಿಸುತ್ತಿದ್ದ ಚಿತ್ರ ವ್ಯಾಪಕವಾಗಿ ಪ್ರಚಾರ ಪಡೆದಿತ್ತು. ಆ ಚಿತ್ರದ ಕುರಿತು ನಿರೂಪಕ ಮಾತನಾಡುವಾಗ ತನ್ನ ಮಧ್ಯದ ಬೆರಳುಗಳನ್ನು ತೋರಿಸಿರಬಹುದು ಎನ್ನಲಾಗಿದೆ.
When you forgot you are going on air before your excitement started..anchor person caught...#SamaaTv https://t.co/nrRKVUuKlV
— Asad Aftab (@shasadaftab) September 22, 2018
ನಿಮ್ಮ ಎಕ್ಸೈಟ್‌ಮೆಂಟ್ ಶುರುವಾಗುವುದಕ್ಕೆ ಮುನ್ನ ನೇರ ಪ್ರಸಾರ ಆಗುತ್ತಿದ್ದೀರಿ ಎಂಬುದನ್ನು ಮರೆತಾಗ ಹೀಗಾಗುತ್ತದೆ ಎಂದು ಅಸದ್ ಅಫ್ತಾಬ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಏಷ್ಯಾ ಕಪ್ 2018: ಭಾರತ vs ಪಾಕಿಸ್ತಾನ ಪಂದ್ಯದ ಆಸಕ್ತಿಕರ ಅಂಕಿ ಅಂಶಗಳು
Tonight ONE can confidently claim Pakistan's future is in safe hands. #PAKvAFG pic.twitter.com/fC1PAFJ1rG
— ONE (@CallSignONE) September 21, 2018
ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸುತ್ತಿದ್ದ ಪಾಕಿಸ್ತಾನದ ಬಾಲಕನ ಚಿತ್ರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅನಾಮಧೇಯ ಖಾತೆಯೊಂದು 'ಪಾಕಿಸ್ತಾನದ ಭವಿಷ್ಯ ಸುರಕ್ಷಿತ ಕೈಗಳಲ್ಲಿ ಇರಲಿದೆ ಎಂದು ಇಂದು ರಾತ್ರಿ ಎಲ್ಲರೂ ಆತ್ಮವಿಶ್ವಾಸದಿಂದ ಹೇಳಿಕೊಳ್ಳಬಹುದು' ಎಂದು ಹೇಳಿತ್ತು.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ