ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಗುರ್ಬಜ್ ಅಬ್ಬರ; ಲಂಕಾ ನೀಡಿದ್ದ ಗುರಿಯನ್ನು ಕೇವಲ 10 ಓವರ್‌ನಲ್ಲಿ ಚಚ್ಚಿದ ಅಫ್ಘಾನಿಸ್ತಾನ

Asia Cup 2022: Afghanistan beats Sri Lanka by 8 wickets and opened account in points table

ಇಂದು ( ಆಗಸ್ಟ್ 27 ) ಯುಎಇ ನೆಲದಲ್ಲಿ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆರಂಭಗೊಂಡಿದೆ. ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ತಂಡದ ನಾಯಕ ಮೊಹಮ್ಮದ್ ನಬಿ ಫೀಲ್ಡಿಂಗ್ ಆಯ್ದುಕೊಂಡು ಮೊದಲು ಶ್ರೀಲಂಕಾ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

Asia Cup 2022: ಒಂದು ದಿನ ಮುನ್ನವೇ ಲೀಕ್ ಆಯ್ತು ಪಾಕ್ ವಿರುದ್ಧ ಆಡುವ ಭಾರತ ತಂಡದ ಆಟಗಾರರ ಪಟ್ಟಿAsia Cup 2022: ಒಂದು ದಿನ ಮುನ್ನವೇ ಲೀಕ್ ಆಯ್ತು ಪಾಕ್ ವಿರುದ್ಧ ಆಡುವ ಭಾರತ ತಂಡದ ಆಟಗಾರರ ಪಟ್ಟಿ

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 19.4 ಓವರ್‌ಗಳಲ್ಲಿ 105 ರನ್ ಕಲೆಹಾಕಿ ಆಲ್ ಔಟ್ ಆಗಿ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ 106 ರನ್‌ಗಳ ಗುರಿಯನ್ನು ನೀಡಿತ್ತು. ಅತ್ತ ಶೀಲಂಕಾ ನೀಡಿದ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಆಫ್ಘಾನಿಸ್ತಾನ 10.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್‌ ಕಲೆಹಾಕಿ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ದೊಡ್ಡ ನೆಟ್ ರನ್ ರೇಟ್ ಜತೆಗೆ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದು ಶುಭಾರಂಭ ಮಾಡಿದೆ. ಅತ್ತ ಶ್ರೀಲಂಕಾ ತಂಡ ಹೀನಾಯ ಸೋಲನ್ನು ಅನುಭವಿಸಿ ಮುಖಭಂಗಕ್ಕೊಳಗಾಗಿದೆ.

ಶ್ರೀಲಂಕಾ ಇನ್ನಿಂಗ್ಸ್

ಶ್ರೀಲಂಕಾ ಇನ್ನಿಂಗ್ಸ್

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಫಾಜಲ್ ಹಕ್ ಫಾರೂಕಿ ಎಸೆದ ಮೊದಲ ಓವರ್‌ನಲ್ಲೇ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಮೊದಲ ಓವರ್‌ನ ಐದನೇ ಎಸೆತದಲ್ಲಿ ಕುಸಲ್ ಮೆಂಡಿಸ್ 2 ರನ್ ಕಲೆಹಾಕಿ ಔಟ್ ಆದರೆ, ಆರನೇ ಎಸೆತದಲ್ಲಿ ಚರಿತ ಅಸಲಂಕಾ ಗೋಲ್ಡನ್ ಡಕೌಟ್ ಆದರು. ಇನ್ನುಳಿದಂತೆ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ 3, ಧನುಷ್ಕಾ ಗುಣತಿಲಕ 17, ಭಾನುಕ ರಾಜಪಕ್ಸೆ 38, ವನಿಂದು ಹಸರಂಗ 2, ನಾಯಕ ದಾಸುನ್ ಶನಕ ಗೋಲ್ಡನ್ ಡಕ್ ಔಟ್, ಚಾಮಿಕ ಕರುಣಾರತ್ನೆ 31, ಮಹೀಶ್ ತೀಕ್ಷಣ ಡೈಮಂಡ್ ಡಕ್ ಔಟ್, ಮತೀಶ ಪತಿರಾಣಾ 5 ರನ್ ಮತ್ತು ದಿಲ್ಶಾನ್ ಮಧುಶಂಕ ಅಜೇಯ 1 ರನ್ ಕಲೆಹಾಕಿದರು.


ಅಫ್ಘಾನಿಸ್ತಾನದ ಪರ ಫಜಲ್ ಹಕ್ ಫರೂಕಿ 3 ವಿಕೆಟ್ ಪಡೆದರೆ, ನಾಯಕ ಮೊಹಮ್ಮದ್ ನಬಿ ಹಾಗೂ ಮುಜೀಬ್ ಉರ್ ರೆಹಮಾನ್ ತಲಾ ಎರಡೆರಡು ವಿಕೆಟ್ ಪಡೆದರು ಮತ್ತು ಇನ್ನುಳಿದಂತೆ ನವೀನ್ ಉಲ್ ಹಕ್ 1 ವಿಕೆಟ್ ಕಬಳಿಸಿದರು.

ಅಫ್ಘಾನಿಸ್ತಾನ ಇನ್ನಿಂಗ್ಸ್

ಅಫ್ಘಾನಿಸ್ತಾನ ಇನ್ನಿಂಗ್ಸ್

ಲಂಕಾ ನೀಡಿದ ಈ ಗುರಿಯನ್ನು ಬೆನ್ನತ್ತಿದ ಆಫ್ಘಾನಿಸ್ತಾನ ತಂಡದ ಪರ ಹಜರತ್ಉಲ್ಲಾ ಜಝೈ ಹಾಗೂ ರಹ್ಮನುಲ್ಲ ಗುರ್ಬಜ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಈ ಇಬ್ಬರ ಅಬ್ಬರದ ಬ್ಯಾಟಿಂಗ್ ಮುಂದೆ ಮಂಕಾದ ಶ್ರೀಲಂಕಾ ಬೌಲರ್‌ಗಳು ಪವರ್ ಪ್ಲೇನಲ್ಲಿಯೇ 83 ರನ್‌ಗಳನ್ನು ಬಿಟ್ಟುಕೊಟ್ಟರು. ಹೀಗೆ ಪವರ್ ಪ್ಲೇನಲ್ಲಿ ಅಬ್ಬರಿಸಿದ ಅಫ್ಘಾನಿಸ್ತಾನ ನಂತರ ಆರಂಭಿಕರ ವಿಕೆಟ್ ಕಳೆದುಕೊಂಡು 11ನೇ ಓವರ್‌ನಲ್ಲಿ ನಿಧಾನವಾಗಿ ಜಯವನ್ನು ಸಾಧಿಸಿತು.


ಅಫ್ಘಾನಿಸ್ತಾನದ ಪರ ರಹ್ಮನುಲ್ಲ ಗುರ್ಬಜ್ 18 ಎಸೆತಗಳಲ್ಲಿ 40 ರನ್ ಬಾರಿಸಿದರೆ, ಇಬ್ರಾಹಿಂ ಜದ್ರಾನ್ 15 ರನ್ ಕಲೆಹಾಕಿದರು. ಇನ್ನುಳಿದಂತೆ ನಜಿಬುಲ್ಲಾ ಜದ್ರಾನ್ ಅಜೇಯ 2 ರನ್ ಹಾಗೂ ಹಜರತ್ಉಲ್ಲಾ ಜಝೈ ಅಜೇಯ 37 ರನ್ ಬಾರಿಸಿದರು.

ಶ್ರೀಲಂಕಾ ಪರ ವನಿಂದು ಹಸರಂಗ ಒಂದು ವಿಕೆಟ್ ಪಡೆದದ್ದು ಬಿಟ್ಟರೆ ಉಳಿದ ಯಾವುದೇ ಬೌಲರ್ ಸಹ ವಿಕೆಟ್ ಪಡೆಯಲಿಲ್ಲ.

ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯದ ಆಡುವ ಬಳಗ

ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಪಂದ್ಯದ ಆಡುವ ಬಳಗ

ಶ್ರೀಲಂಕಾ ಆಡುವ ಬಳಗ: ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೇಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮಥೀಶ ಪತಿರಾನಾ

ಬೆಂಚ್: ಧನಂಜಯ ಡಿ ಸಿಲ್ವಾಂದರ್, ಡಿ ಸಿಲ್ವಾಂದರ್, ಡಿ ಸಿಲ್ವಾಂದರ್, ಡಿ. ಅಶೇನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ

ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (wk), ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (c), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಝೈ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಖಿ

ಬೆಂಚ್ : ನೊಹ್ಮದ್, ಶಿಹ್ಮದ್ ನೊಹ್ಮದ್, ಶಿಹ್ಮತ್ವಾ, ಅಫ್ಸರ್ ಝಜೈ, ಫರೀದ್ ಅಹ್ಮದ್ ಮಲಿಕ್, ಉಸ್ಮಾನ್ ಘನಿ

Story first published: Saturday, August 27, 2022, 22:48 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X