ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs PAK: ಪಂದ್ಯಕ್ಕೂ ಮುನ್ನ 150 ಸಿಕ್ಸರ್ ಎಂದು ಎಚ್ಚರಿಕೆ ನೀಡಿದ್ದ ಪಾಕ್ ಕ್ರಿಕೆಟಿಗ ಗಳಿಸಿದ್ದೆಷ್ಟು ರನ್?

Asia Cup 2022: Asif ali failed to kept his words of hitting 4 to 5 sixers against India

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ವೀಕ್ಷಣೆ ಮಾಡುವಷ್ಟು ಕ್ರೇಜ್ ಇದೆ. ಅದೇ ರೀತಿ ನಿನ್ನೆಯಷ್ಟೇ ( ಆಗಸ್ಟ್ 28 ) ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿ ಕೂಡ ದೊಡ್ಡ ಮಟ್ಟದ ಕ್ರೇಜ್ ಹೊಂದಿತ್ತು. ಐಸಿಸಿ ವಿಶ್ವಕಪ್ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾದ ಈ ಪಂದ್ಯದ ಬಗ್ಗೆ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಪಂದ್ಯದಲ್ಲಿ ಕಣಕ್ಕಿಳಿಯುವ ಆಟಗಾರರು ಪಂದ್ಯದ ಕುರಿತಾಗಿ ಹಲವಾರು ಅಭಿಪ್ರಾಯಗಳನ್ನು ತಿಳಿಸಿದ್ದರು.

IND vs PAK: ಭಾರತ ಚೆನ್ನಾಗಿ ಆಡಲಿಲ್ಲ ಲಕ್‌ನಿಂದ ಗೆದ್ದಿತಷ್ಟೇ; ಪಾಕ್ ಪತ್ರಕರ್ತನ ಅಹಂಕಾರ!IND vs PAK: ಭಾರತ ಚೆನ್ನಾಗಿ ಆಡಲಿಲ್ಲ ಲಕ್‌ನಿಂದ ಗೆದ್ದಿತಷ್ಟೇ; ಪಾಕ್ ಪತ್ರಕರ್ತನ ಅಹಂಕಾರ!

ಅದೇ ರೀತಿ ಪಾಕಿಸ್ತಾನದ ಸ್ಫೋಟಕ ಆಟಗಾರ ಆಸಿಫ್ ಅಲಿ ಕೂಡ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯ ಕುರಿತು ಮಾತನಾಡಿ ಪಂದ್ಯದಲ್ಲಿ ಏನಿಲ್ಲವೆಂದರೂ ನಾಲ್ಕೈದು ಸಿಕ್ಸರ್ ಬಾರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅಭ್ಯಾಸದ ವೇಳೆ ತಾನು ಪ್ರತಿದಿನವೂ 100ರಿಂದ 150 ಸಿಕ್ಸರ್ ಬಾರಿಸುತ್ತಿದ್ದು, ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಏನಿಲ್ಲವೆಂದರೂ ನಾಲ್ಕೈದು ಸಿಕ್ಸರ್ ಬಾರಿಸುವುದು ಖಚಿತ ಎಂದು ಹೇಳಿಕೆ ನೀಡಿ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದ್ದರು.

Asia Cup 2022: ಪಾಕ್ ವಿರುದ್ಧ ಕಳಪೆ ಆಟ ಆಡಿ ಮಕಾಡೆ ಮಲಗಿದ ಭಾರತದ ಮೂವರು ಆಟಗಾರರಿವರು!Asia Cup 2022: ಪಾಕ್ ವಿರುದ್ಧ ಕಳಪೆ ಆಟ ಆಡಿ ಮಕಾಡೆ ಮಲಗಿದ ಭಾರತದ ಮೂವರು ಆಟಗಾರರಿವರು!

ಆಸಿಫ್ ಅಲಿ ನೀಡಿದ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಹಾಗೂ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಕೆಲವರು ಆಸಿಫ್ ಅಲಿ ಭಾರತದ ವಿರುದ್ಧ ಖಚಿತವಾಗಿ ಅಬ್ಬರಿಸುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಹಾಗೂ ಇನ್ನೂ ಕೆಲವರು ಕೇವಲ 1 ಸಿಕ್ಸ್ ಸಿಡಿಸಲಿ ಸಾಕು ಎಂದು ಆಸಿಫ್ ಅಲಿ ಅವರ ಕಾಲನ್ನು ಎಳೆದಿದ್ದರು. ಹೀಗೆ ಪಂದ್ಯಕ್ಕೂ ಮುನ್ನ ಚರ್ಚೆಗೆ ಗ್ರಾಸವಾಗಿದ್ದ ಆಸಿಫ್ ಅಲಿ ತಾವು ನೀಡಿದ ಹೇಳಿಕೆಯಂತೆ ಪಂದ್ಯದಲ್ಲಿ ಅಬ್ಬರಿಸಿದ್ರಾ ಅಥವಾ ವಿಫಲರಾದ್ರಾ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಪಂದ್ಯದಲ್ಲಿ ಮಕಾಡೆ ಮಲಗಿದ ಅಸಿಫ್ ಅಲಿ

ಪಂದ್ಯದಲ್ಲಿ ಮಕಾಡೆ ಮಲಗಿದ ಅಸಿಫ್ ಅಲಿ

ಪಂದ್ಯದಲ್ಲಿ ನಾಲ್ಕೈದು ಸಿಕ್ಸರ್ ಬಾರಿಸುವುದು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದ ಆಸಿಫ್ ಅಲಿ ಮೊದಲೇ ವೇಗವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನದ ಪರ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದು 7 ಎಸೆತಗಳಲ್ಲಿ ಕೇವಲ 9 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಗೆ ಕ್ಯಾಚ್ ನೀಡಿದ ಆಸಿಫ್ ಅಲಿ ಯಾವುದೇ ಬೌಂಡರಿ ಬಾರಿಸದೇ ವಿಫಲರಾದರು. ಈ ಮೂಲಕ ಪಂದ್ಯಕ್ಕೂ ಮುನ್ನ ದೊಡ್ಡ ಹೇಳಿಕೆಯನ್ನು ನೀಡಿ ಚರ್ಚೆಗೊಳಗಾಗಿದ್ದ ಆಸಿಫ್ ಅಲಿ ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೇ ಮಕಾಡೆ ಮಲಗಿದ್ದಾರೆ.

ಅಸಿಫ್ ಅಲಿ ಟಿ ಟ್ವೆಂಟಿ ಅಂಕಿ ಅಂಶ

ಅಸಿಫ್ ಅಲಿ ಟಿ ಟ್ವೆಂಟಿ ಅಂಕಿ ಅಂಶ

ಇನ್ನು 36 ಅಂತಾರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಅಸಿಫ್ ಅಲಿ ಒಟ್ಟಾರೆ 332 ಎಸೆತಗಳನ್ನು ಎದುರಿಸಿ 444 ರನ್ ಬಾರಿಸಿದ್ದಾರೆ. ಟಿ ಟ್ವೆಂಟಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಿಫ್ ಅಲಿ ಗರಿಷ್ಠ ಅಜೇಯ 41 ರನ್ ಕಲೆ ಹಾಕಿದ್ದಾರೆ.

ಆಸಿಫ್ ಅಲಿಗೆ ಇನ್ನೂ ಇದೆ ಅವಕಾಶ

ಆಸಿಫ್ ಅಲಿಗೆ ಇನ್ನೂ ಇದೆ ಅವಕಾಶ

ಇನ್ನು ಆಸಿಫ್ ಅಲಿ ತಾವು ನೀಡಿರುವ ಹೇಳಿಕೆಯನ್ನು ನಿಜ ಮಾಡಿಕೊಳ್ಳಲು ಇನ್ನೂ ಅವಕಾಶವಿದೆ. ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿಹಾಂಗ್‌ಕಾಂಗ್ ವಿರುದ್ಧ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಟಾಪ್ ಎರಡನೇ ಸ್ಥಾನ ಪಡೆದುಕೊಂಡರೆ ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದೆ. ಈ ಮೂಲಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಂದು ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಆ ಪಂದ್ಯದಲ್ಲಿ ಆಸಿಫ್ ಅಲಿ ತಾವು ನೀಡಿದ್ದ ಹೇಳಿಕೆಯ ಪ್ರಕಾರ ಸಿಕ್ಸರ್ ಬಾರಿಸುವ ಅವಕಾಶ ಒದಗಿ ಬರಲಿದೆ.

Story first published: Tuesday, August 30, 2022, 10:08 [IST]
Other articles published on Aug 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X