Ind vs Pak: ಭಾರತ-ಪಾಕಿಸ್ತಾನ ಮುಖಾಮುಖಿಯ ಕಳೆದ 5 ಪಂದ್ಯಗಳ ಫಲಿತಾಂಶ

ಏಷ್ಯಾಕಪ್ 2022ರ ಟೂರ್ನಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನ ಭಾನುವಾರ ಆರಂಭಿಸಲಿದೆ. ಸೂಪರ್ ಸಂಡೇ ಫೈಟ್ ಎಂದೇ ಕರೆಸಿಕೊಂಡಿರುವ ಭಾರತ-ಪಾಕಿಸ್ತಾನ ಮುಖಾಮುಖಿ ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಸುಮಾರು ಒಂದು ವರ್ಷದ ಬಳಿಕ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಬೇರೆ ಯಾವುದೇ ದ್ವಿಪಕ್ಷೀಯ ಸರಣಿಯನ್ನ ಆಡದ ಉಭಯ ತಂಡಗಳು ಐಸಿಸಿ ವಿಶ್ವಕಪ್ ಹಾಗೂ ಏಷ್ಯಾಕಪ್‌ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. ಹೀಗಾಗಿ ಆಗಸ್ಟ್ 28ರಂದು ಭಾನುವಾರ ನಡೆಯಲಿರುವ ಪಂದ್ಯವು ಹೈವೋಲ್ಟೇಜ್‌ಗೆ ಕಾರಣವಾಗಿದೆ. ಈ ಪಂದ್ಯಕ್ಕೂ ಮುನ್ನ ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಫಲಿತಾಂಶ ಏನಾಗಿತ್ತು ಎಂಬುದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿ

2021 ಐಸಿಸಿ ಟಿ20 ವಿಶ್ವಕಪ್

2021 ಐಸಿಸಿ ಟಿ20 ವಿಶ್ವಕಪ್

24 ಅಕ್ಟೋಬರ್ 2021 ರಂದು ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. 2021 ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಭಾರತದ ಪರ ಅಂದಿನ ನಾಯಕ ವಿರಾಟ್ ಕೊಹ್ಲಿ ಮಾತ್ರ ಸರಿಯಾದ ರನ್ ಗಳಿಸಿದ್ದರು. ಅವರು 59 ರನ್ ಗಳಿಸಿದರು, ಕೊಹ್ಲಿ ಅಲ್ಲದೆ ರಿಷಬ್ ಪಂತ್ ಅವರ ಇನ್ನಿಂಗ್ಸ್ (39) ರನ್‌ ಭಾರತಕ್ಕೆ ಕೊಂಚ ಆಧಾರವಾಯಿತು. ಭಾರತ 7 ವಿಕೆಟ್ ನಷ್ಟಕ್ಕೆ 151ರನ್ ಕಲೆಹಾಕಿತು. ಪಾಕ್ ಪರ ಶಾಹೀನ್ ಶಾ ಆಫ್ರಿದಿ ಮೂರು ವಿಕೆಟ್ ಪಡೆದರು.

ಟೀಂ ಇಂಡಿಯಾ ನೀಡಿದ್ದ 152 ರನ್ ಗುರಿಯನ್ನ ಸುಲಭವಾಗಿ ಬೆನ್ನತ್ತಿದ ಪಾಕಿಸ್ತಾನ ಒಂದೂ ವಿಕೆಟ್ ಕಳೆದುಕೊಳ್ಳಲಿಲ್ಲ. ಬಾಬರ್ ಅಜಮ್ ಅಜೇಯ 68 ಮತ್ತು ಮೊಹಮ್ಮದ್ ರಿಜ್ವಾನ್ ಅಜೇಯ 79 ರನ್ ಗಳಿಸಿದರು.

2019 ಐಸಿಸಿ ವಿಶ್ವಕಪ್

2019 ಐಸಿಸಿ ವಿಶ್ವಕಪ್

ಐಸಿಸಿ ವಿಶ್ವಕಪ್ 2019 ರಲ್ಲಿ ಭಾರತವು ಪಾಕಿಸ್ತಾನವನ್ನು 89 ರನ್‌ಗಳಿಂದ ಸೋಲಿಸಿತು. ಭಾರತದ 336/5 ಗೆ ಉತ್ತರವಾಗಿ ಪಾಕಿಸ್ತಾನದ ಇನ್ನಿಂಗ್ಸ್ 212/6 ಕ್ಕೆ ಕೊನೆಗೊಂಡಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 140 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 77 ರನ್ ಗಳಿಸಿದರು. ಕೆಎಲ್ ರಾಹುಲ್ ಬ್ಯಾಟ್‌ನಿಂದ 57 ರನ್‌ಗಳು ಬಂದವು. ಪಾಕ್ ಪರ ಮೊಹಮ್ಮದ್ ಅಮೀರ್ ಮೂರು ವಿಕೆಟ್ ಪಡೆದರು.

ಪಾಕಿಸ್ತಾನ ಪರ ಫಖರ್ ಜಮಾನ್ 62 ರನ್, ಬಾಬರ್ ಅಜಮ್ 48 ರನ್, ಇಮಾದ್ ವಾಸಿಂ 46 ರನ್ ಗಳಿಸಿದರು. ಭಾರತದ ಪರ ವಿಜಯ್ ಶಂಕರ್, ಕುಲ್‌ದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.

ಪಾಕಿಸ್ತಾನಿ ವರದಿಗಾರನ ಪ್ರಶ್ನೆಗೆ ಸಖತ್ ಉತ್ತರ ನೀಡಿದ ರೋಹಿತ್ ಶರ್ಮಾ: ವೀಡಿಯೋ ವೈರಲ್

2018ರ ಏಷ್ಯಾ ಕಪ್‌ ಸೂಪರ್ 4 ಹಂತ

2018ರ ಏಷ್ಯಾ ಕಪ್‌ ಸೂಪರ್ 4 ಹಂತ

ಸೂಪರ್ ಫೋರ್ 2018 ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಇನ್ನಿಂಗ್ಸ್ 237/7ಕ್ಕೆ ಕೊನೆಗೊಂಡಿತು. ಪಾಕಿಸ್ತಾನ ಪರ ಶೋಯೆಬ್ ಮಲಿಕ್ 78 ರನ್ ಗಳಿಸಿದರು. ಸರ್ಫರಾಜ್ ಅಹ್ಮದ್ 44 ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರು.

ಭಾರತ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ಇಬ್ಬರು ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಶತಕ ಬಾರಿಸಿದರು. ರೋಹಿತ್ 111 ರನ್ ಗಳಿಸಿ ಅಜೇಯರಾಗುಳಿದರು. ಶಿಖರ್ ಧವನ್ 114 ರನ್ ಗಳಿಸಿ ರನೌಟ್ ಆದರು.

ಭಾರತದಲ್ಲಿ 2027ರವರೆಗೆ ಐಸಿಸಿ ಈವೆಂಟ್‌ಗಳ ಪ್ರಸಾರದ ಹಕ್ಕು ಪಡೆದ ಡಿಸ್ನಿ ಹಾಟ್‌ಸ್ಟಾರ್‌

2018ರ ಏಷ್ಯಾ ಕಪ್‌ ಗ್ರೂಪ್ ಪಂದ್ಯ

2018ರ ಏಷ್ಯಾ ಕಪ್‌ ಗ್ರೂಪ್ ಪಂದ್ಯ

ಸೂಪರ್ ಫೋರ್‌ಗೆ ಪ್ರವೇಶಿಸುವ ಮೊದಲು ಪಾಕಿಸ್ತಾನವು ಗ್ರೂಪ್‌ ಸ್ಟೇಜ್‌ನಲ್ಲಿ ಭಾರತವನ್ನು ಎದುರಿಸಿತು. ಆ ಪಂದ್ಯವನ್ನೂ ಭಾರತ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಇನ್ನಿಂಗ್ಸ್ 162 ರನ್‌ಗಳಿಗೆ ಕೊನೆಗೊಂಡಿತು. ಬಾಬರ್ ಅಜಮ್ 47 ರನ್ ಮತ್ತು ಶೋಯೆಬ್ ಮಲಿಕ್ 43 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ ಮತ್ತು ಕೇದಾರ್ ಯಾದವ್ ತಲಾ ಮೂರು ವಿಕೆಟ್ ಪಡೆದರು. ಇದಕ್ಕೆ ಉತ್ತರವಾಗಿ ಭಾರತ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ರೋಹಿತ್ ಶರ್ಮಾ 52 ರನ್ ಮತ್ತು ಶಿಖರ್ ಧವನ್ 46 ರನ್ ಗಳಿಸಿದರು.

2017 ರ ಚಾಂಪಿಯನ್ಸ್ ಟ್ರೋಫಿ

2017 ರ ಚಾಂಪಿಯನ್ಸ್ ಟ್ರೋಫಿ

2017 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತವನ್ನು ಪಾಕಿಸ್ತಾನವು ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಸರ್ಫ್ರಾಜ್ ಅಹ್ಮದ್ ನಾಯಕತ್ವದ ಪಾಕ್ 338/4 ಸ್ಕೋರ್ ಮಾಡಿತು. ಈ ಪಂದ್ಯದಲ್ಲಿ ಫಖರ್ ಜಮಾನ್ 114 ರನ್ ಗಳಿಸಿದ್ದರು. ಅಜರ್ ಅಲಿ 59 ರನ್, ಮೊಹಮ್ಮದ್ ಹಫೀಜ್ 57 ರನ್ ಗಳಿಸಿದರು.

ಈ ಬೃಹತ್ ಗುರಿಯನ್ನ ಬೆನ್ನತ್ತಿದ ಭಾರತದ ಇನ್ನಿಂಗ್ಸ್ 158 ರನ್‌ಗಳಿಗೆ ಕೊನೆಗೊಂಡಿತು. ಹಾರ್ದಿಕ್ ಪಾಂಡ್ಯ (76) ಏಕಾಂಗಿ ಹೋರಾಟ ನಡೆಸಲು ಪ್ರಯತ್ನಿಸಿದರು. ಮೊಹಮ್ಮದ್ ಅಮೀರ್ ಮತ್ತು ಹಸನ್ ಅಲಿ ತಲಾ ಮೂರು ವಿಕೆಟ್ ಪಡೆದರು. ಶಹದಾಬ್ ಖಾನ್ ಎರಡು ವಿಕೆಟ್ ಪಡೆದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 28, 2022, 15:10 [IST]
Other articles published on Aug 28, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X