ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!

Asia Cup 2022: KL Rahul and Rohit Sharma are in competition for unwanted record of most ducks in t20

ಸದ್ಯ ಯುಎಇ ನೆಲದಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ನಿರತವಾಗಿದೆ. ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆಲುವನ್ನು ಸಾಧಿಸುವುದರ ಮೂಲಕ ಕಳೆದ ವರ್ಷ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೋಲಿನ ಪ್ರತೀಕಾರವನ್ನು ತೀರಿಸಿಕೊಂಡು, ಹಾಂಗ್‌ಕಾಂಗ್ ವಿರುದ್ಧವೂ ಗೆದ್ದು ಸೂಪರ್‌ 4 ಸುತ್ತಿಗೆ ಅರ್ಹತ ಪಡೆದುಕೊಂಡಿದೆ.

T20 World Cup 2022 : ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್; ಯಾರಿಗೆಲ್ಲಾ ಸ್ಥಾನ?T20 World Cup 2022 : ಟಿ20 ವಿಶ್ವಕಪ್‌ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್; ಯಾರಿಗೆಲ್ಲಾ ಸ್ಥಾನ?

ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯುತ್ತಿರುವ ಕಾರಣ ಈ ಏಷ್ಯಾ ಕಪ್‌ ಟೂರ್ನಿ ಟೀಮ್ ಇಂಡಿಯಾಗೆ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಿಕೊಳ್ಳಲು ಸಿಕ್ಕಿರುವ ಬೃಹತ್ ವೇದಿಕೆ ಎಂದೇ ಹೇಳಬಹುದು. ಇನ್ನು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿರುವ ಅನುಭವಿ ಆಟಗಾರರಿಗೆ ಈ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಆಡುವ ಅವಕಾಶ ಲಭಿಸಿದ್ದು, ಗಾಯದ ಸಮಸ್ಯೆಯಿಂದಾಗಿ ಹೊರಗುಳಿದು ಹಲವಾರು ಪಂದ್ಯಗಳಿಗೆ ಅಲಭ್ಯರಾಗಿದ್ದ ಕೆಎಲ್ ರಾಹುಲ್ ಅವರಿಗೂ ಸಹ ಅವಕಾಶ ಲಭಿಸಿದೆ.

Asia Cup 2022: ಭಾರತದ ಆರಂಭಿಕ ಜೋಡಿ ಬಗ್ಗೆ ರಾಬಿನ್ ಉತ್ತಪ್ಪ ದೊಡ್ಡ ಹೇಳಿಕೆAsia Cup 2022: ಭಾರತದ ಆರಂಭಿಕ ಜೋಡಿ ಬಗ್ಗೆ ರಾಬಿನ್ ಉತ್ತಪ್ಪ ದೊಡ್ಡ ಹೇಳಿಕೆ

ಇನ್ನು ಸಿಕ್ಕ ಅವಕಾಶವನ್ನು ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ ಅದ್ಭುತ ಆಲ್ ರೌಂಡರ್ ಪ್ರದರ್ಶನ ನೀಡುವ ಮೂಲಕ ಸದುಪಯೋಗ ಪಡಿಸಿಕೊಂಡರೆ, ಕೆಎಲ್ ರಾಹುಲ್ ಮಾತ್ರ ಪಾಕ್ ವಿರುದ್ಧದ ಪಂದ್ಯದಲ್ಲಿ ನಸೀಮ್ ಶಾ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗುವುದರ ಮೂಲಕ ಗೋಲ್ಡನ್ ಡಕ್ ಔಟ್ ಆದರು. ಈ ಮೂಲಕ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಆರಂಭಿಕನಾಗಿ ಐದನೇ ಬಾರಿಗೆ ಡಕ್ ಔಟ್ ಆಗಿ ಅತಿಹೆಚ್ಚು ಬಾರಿ ಡಕ್ ಔಟ್ ಆದ ಕೆಟ್ಟ ದಾಖಲೆಯಲ್ಲಿ ರೋಹಿತ್ ಶರ್ಮಾ ಅವರಿಗೆ ಪೈಪೋಟಿ ನೀಡುವತ್ತ ಹೆಜ್ಜೆ ಇಟ್ಟಿದ್ದಾರೆ.

ಅತಿ ಹೆಚ್ಚು ಬಾರಿ ಡಕ್ ಔಟ್ ಆಗಿರುವ ಭಾರತೀಯ ಆರಂಭಿಕರು

ಅತಿ ಹೆಚ್ಚು ಬಾರಿ ಡಕ್ ಔಟ್ ಆಗಿರುವ ಭಾರತೀಯ ಆರಂಭಿಕರು

ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆಗಿರುವ ಭಾರತೀಯ ಟಾಪ್ 2 ಆರಂಭಿಕರು:

ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದು 6 ಬಾರಿ ಡಕ್ ಔಟ್ ಆಗುವುದರ ಮೂಲಕ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಭಾರತೀಯ ಆರಂಭಿಕ ಎನಿಸಿಕೊಂಡಿದ್ದಾರೆ.

ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕನಾಗಿ ಕಣಕ್ಕಿಳಿದು 5 ಬಾರಿ ಶೂನ್ಯ ಸುತ್ತಿರುವ ಕೆ ಎಲ್ ರಾಹುಲ್ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ನಂತರ ದ್ವಿತೀಯ ಸ್ಥಾನದಲ್ಲಿದ್ದಾರೆ.

ಧವನ್, ರಹಾನೆ, ಗಂಭೀರ್ 2 ಬಾರಿ

ಧವನ್, ರಹಾನೆ, ಗಂಭೀರ್ 2 ಬಾರಿ

ಇನ್ನು ಈ ಕೆಟ್ಟ ದಾಖಲೆಯಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಟಾಪ್ 2 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ನಂತರದ ಸ್ಥಾನದಲ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದು 2 ಬಾರಿ ಡಕ್ ಔಟ್ ಆಗಿರುವ ಗೌತಮ್ ಗಂಭೀರ್, ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್ ಇದ್ದಾರೆ.

ಒತ್ತಡದಲ್ಲಿರುವ ರೋಹಿತ್ ಗೆ ಉತ್ತಮವಾಗಿ ಆಡಲು ಸಾಧ್ಯವಾಗುತ್ತಿಲ್ಲ | *Cricket | OneIndia Kannada
ಒಟ್ಟಾರೆ ಡಕ್ ಔಟ್‌ನಲ್ಲೂ ರೋಹಿತ್ ಟಾಪ್

ಒಟ್ಟಾರೆ ಡಕ್ ಔಟ್‌ನಲ್ಲೂ ರೋಹಿತ್ ಟಾಪ್

ಇನ್ನು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಆರಂಭಿಕನಾಗಿ 6 ಬಾರಿ ಡಕ್ ಔಟ್ ಆಗಿ ಅತಿಹೆಚ್ಚು ಬಾರಿ ಟಿ ಟ್ವೆಂಟಿ ಡಕ್ ಔಟ್ ಆದ ಭಾರತೀಯ ಆರಂಭಿಕ ಎನಿಸಿಕೊಂಡಿರುವುದು ಮಾತ್ರವಲ್ಲದೇ, ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಕ್ರಮಾಂಕವೂ ಸೇರಿದಂತೆ ಅತಿ ಹೆಚ್ಚು ಬಾರಿ ಡಕ್ ಔಟ್ ಆಗಿರುವ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಒಟ್ಟು 8 ಬಾರಿ ಶೂನ್ಯ ಸುತ್ತಿದ್ದಾರೆ.

Story first published: Friday, September 2, 2022, 16:41 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X