ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಭಾರತವನ್ನು ಮುನ್ನಡೆಸಿರುವ ಒಟ್ಟು 8 ನಾಯಕರಲ್ಲಿ ಕಪ್ ಗೆಲ್ಲಿಸಲಾಗದೇ ಸೋತವರು!

Asia Cup 2022: List of Indian captains who won Asia Cups and who lost Asia Cups

ಇದೇ ತಿಂಗಳ 27ರಿಂದ ಪ್ತತಿಷ್ಠಿತ ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದ್ದು, ಬಿಸಿಸಿಐ ಆಗಸ್ಟ್ 8ರ ಸೋಮವಾರದಂದು ಟೂರ್ನಿಗಾಗಿ ಹದಿನೈದು ಆಟಗಾರರ ತಂಡವನ್ನು ಪ್ರಕಟಿಸಿದೆ. ಕಳೆದ ಬಾರಿ ವಿರಾಟ್ ಕೊಹ್ಲಿ ಅಲಭ್ಯತೆಯ ಕಾರಣ 2018ರ ಏಷ್ಯಾಕಪ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಈ ಬಾರಿ ಟೀಮ್ ಇಂಡಿಯಾದ ಪೂರ್ಣಾವಧಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ಎರಡನೇ ಬಾರಿಗೆ ತಂಡವನ್ನು ಏಷ್ಯಾಕಪ್ ಟೂರ್ನಿಯಲ್ಲಿ ಮುನ್ನಡೆಸಲಿದ್ದಾರೆ.

BAN vs ZIM: ಒಂದೇ ಪಂದ್ಯದಲ್ಲಿ ಒಟ್ಟು 5 ಬ್ಯಾಟ್ಸ್‌ಮನ್ ಡಕ್ ಔಟ್; ವೈಟ್‌ವಾಷ್‌ನಿಂದ ಪಾರಾದ ಬಾಂಗ್ಲಾBAN vs ZIM: ಒಂದೇ ಪಂದ್ಯದಲ್ಲಿ ಒಟ್ಟು 5 ಬ್ಯಾಟ್ಸ್‌ಮನ್ ಡಕ್ ಔಟ್; ವೈಟ್‌ವಾಷ್‌ನಿಂದ ಪಾರಾದ ಬಾಂಗ್ಲಾ

ಇನ್ನು 2018ರ ಏಷ್ಯಾಕಪ್ ಟೂರ್ನಿಯವರೆಗೂ ಒಟ್ಟು 13 ಏಷ್ಯಾಕಪ್ ಆವೃತ್ತಿಗಳು ನಡೆದಿದ್ದು ಒಟ್ಟು 7 ಬಾರಿ ಟೀಮ್ ಇಂಡಿಯಾ ಟ್ರೋಫಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿದ್ದು, ತಂಡವನ್ನು ಇಲ್ಲಿಯವರೆಗೂ ಒಟ್ಟು ಎಂಟು ನಾಯಕರು ಮುನ್ನಡೆಸಿದ್ದು, ಈ ಪೈಕಿ ಐವರು ನಾಯಕರು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರೆ, ಉಳಿದ ಮೂವರು ನಾಯಕರು ತಂಡವನ್ನು ಏಷ್ಯಾಕಪ್‌ನಲ್ಲಿ ಚಾಂಪಿಯನ್ ಮಾಡುವಲ್ಲಿ ವಿಫಲರಾಗಿದ್ದಾರೆ.

ಮಹಾರಾಜ ಟ್ರೋಫಿ: ಅಜೇಯ 91 ರನ್ ಸಿಡಿಸಿದ ಕರುಣ್ ನಾಯರ್; ಹುಬ್ಬಳ್ಳಿಗೆ ಸೋಲುಣಿಸಿದ ಮೈಸೂರು!ಮಹಾರಾಜ ಟ್ರೋಫಿ: ಅಜೇಯ 91 ರನ್ ಸಿಡಿಸಿದ ಕರುಣ್ ನಾಯರ್; ಹುಬ್ಬಳ್ಳಿಗೆ ಸೋಲುಣಿಸಿದ ಮೈಸೂರು!

ಹೀಗೆ ಟೀಮ್ ಇಂಡಿಯಾವನ್ನು ಏಷ್ಯಾಕಪ್ ಇತಿಹಾಸದಲ್ಲಿ ಯಾವ ಯಾವ ಆಟಗಾರರು ನಾಯಕನಾಗಿ ಮುನ್ನಡೆಸಿದ್ದಾರೆ, ಈ ಪೈಕಿ ಯಾರು ಎಷ್ಟು ಬಾರಿ ಟ್ರೋಫಿ ಗೆಲ್ಲಿಸಿದ್ದಾರೆ ಹಾಗೂ ಒಮ್ಮೆಯೂ ಟ್ರೋಫಿಯನ್ನು ಗೆಲ್ಲಿಸಲಾಗದ ನಾಯಕರು ಯಾರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಏಷ್ಯಾಕಪ್‌ನಲ್ಲಿ ಭಾರತವನ್ನು ಇಲ್ಲಿಯವರೆಗೂ ಮುನ್ನಡೆಸಿದ ನಾಯಕರು ಮತ್ತು ಫಲಿತಾಂಶ

ಏಷ್ಯಾಕಪ್‌ನಲ್ಲಿ ಭಾರತವನ್ನು ಇಲ್ಲಿಯವರೆಗೂ ಮುನ್ನಡೆಸಿದ ನಾಯಕರು ಮತ್ತು ಫಲಿತಾಂಶ

1984ರಲ್ಲಿ ಆರಂಭವಾದ ಏಷ್ಯಾಕಪ್ 2018ರವರೆಗೂ ಒಟ್ಟು 13 ಬಾರಿ ನಡೆದಿದ್ದು, ಈ ಎಲ್ಲಾ ಆವೃತ್ತಿಗಳ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದು ಯಾರು ಹಾಗೂ ಆ ಆವೃತ್ತಿಗಳ ಫಲಿತಾಂಶದ ಪಟ್ಟಿ:

1984ರಲ್ಲಿ ಭಾರತವನ್ನು ಸುನಿಲ್ ಗವಾಸ್ಕರ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾಗ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

1988ರಲ್ಲಿ ವೆಂಗ್‌ಸರ್ಕಾರ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾಗ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

1991 - ಅಜರುದ್ದೀನ್ ನಾಕಯನಾಗಿ ತಂಡವನ್ನು ಮುನ್ನಡೆಸಿದ್ದಾಗ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

1995 - ಅಜರುದ್ದೀನ್ ನಾಕಯನಾಗಿ ತಂಡವನ್ನು ಮುನ್ನಡೆಸಿದ್ದಾಗ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

1997ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಹಾಗೂ ಈ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.

2000ದಲ್ಲಿ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು. ಈ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.

2004ರಲ್ಲಿ ಸೌರವ್ ಗಂಗೂಲಿ ಎರಡನೇ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾಗ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಅನುಭವಿಸಿ ರನ್ನರ್ ಅಪ್ ಆಗಿತ್ತು.

2008ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.

2010ರಲ್ಲಿ ಎರಡನೇ ಬಾರಿಗೆ ಎಂಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ಚಾಂಪಿಯನ್ ಆಗಿತ್ತು.

2012ರಲ್ಲಿ ಮೂರನೇ ಬಾರಿಗೆ ಎಂ ಎಸ್ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ ಫೈನಲ್ ಪ್ರವೇಶಿಸದೇ ಸೋತಿತ್ತು.

2014ರಲ್ಲಿ ಎಂಎಸ್ ಧೋನಿ ಅಲಭ್ಯತೆಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ಭಾರತ ಫೈನಲ್ ಪ್ರವೇಶಿಸದೇ ಸೋಲನ್ನುಂಡಿತ್ತು.

2016ರಲ್ಲಿ ಎಂಎಸ್ ಧೋನಿ ನಾಯಕತ್ವದಡಿಯಲ್ಲಿ ನಾಲ್ಕನೇ ಬಾರಿಗೆ ಕಣಕ್ಕಿಳಿದಿದ್ದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

2018ರಲ್ಲಿ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಕಣಕ್ಕಿಳಿದಿದ್ದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಒಮ್ಮೆಯೂ ಟ್ರೋಫಿ ಗೆಲ್ಲದ ಮೂವರು ನಾಯಕರು

ಒಮ್ಮೆಯೂ ಟ್ರೋಫಿ ಗೆಲ್ಲದ ಮೂವರು ನಾಯಕರು

ಟೀಮ್ ಇಂಡಿಯಾವನ್ನು ಏಷ್ಯಾಕಪ್ ಟೂರ್ನಿಗಳಲ್ಲಿ ನಾಯಕನಾಗಿ ಮುನ್ನಡೆಸಿ ಗೆಲುವು ಸಾಧಿಸುವಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ಈ ಮೂವರು ವಿಫಲರಾಗಿದ್ದಾರೆ. ಅದರಲ್ಲಿಯೂ ಸೌರವ್ ಗಂಗೂಲಿ ಎರಡು ಬಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿ ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಅತಿಹೆಚ್ಚು ಬಾರಿ ತಂಡ ಮುನ್ನಡೆಸಿದ್ದು ಧೋನಿ

ಅತಿಹೆಚ್ಚು ಬಾರಿ ತಂಡ ಮುನ್ನಡೆಸಿದ್ದು ಧೋನಿ

ಎಂಎಸ್ ಧೋನಿ ಟೀಮ್ ಇಂಡಿಯಾವನ್ನು ಒಟ್ಟು 4 ಏಷ್ಯಾಕಪ್ ಟೂರ್ನಿಗಳಲ್ಲಿ ನಾಯಕನಾಗಿ ಮುನ್ನಡೆಸಿದ್ದು, ಅತಿಹೆಚ್ಚು ಬಾರಿ ಏಷ್ಯಾಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ತಂಡವನ್ನು ಮುನ್ನಡೆಸಿದ ನಾಯಕ ಎನಿಸಿಕೊಂಡಿದ್ದಾರೆ. ಉಳಿದ ನಾಯಕರು ಗರಿಷ್ಠವೆಂದರೆ ಎರಡು ಬಾರಿ ಮಾತ್ರ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

Story first published: Thursday, August 11, 2022, 10:25 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X