ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

AUS vs SA: 100ನೇ ಟೆಸ್ಟ್‌ನಲ್ಲಿ ಶತಕದೊಂದಿಗೆ ಸಚಿನ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ವಾರ್ನರ್

AUS vs SA: David Warner Equals Sachin Tendulkars All-time Record With Century In 100th Test

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮಂಗಳವಾರ ಸುಮಾರು ಮೂರು ವರ್ಷಗಳ ಕಾಲದ ಟೆಸ್ಟ್ ಶತಕದ ಬರವನ್ನು ಕೊನೆಗೊಳಿಸಿದರು. ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಟದ ಸುದೀರ್ಘ ಸ್ವರೂಪದಲ್ಲಿ ತಮ್ಮ 100ನೇ ಪಂದ್ಯದಲ್ಲಿ ಐತಿಹಾಸಿಕ ದ್ವಿಶತಕವನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯಾ ಮತ್ತು ವಿಶ್ವದಾದ್ಯಂತ ಅವರನ್ನು ಆರಾಧಿಸುವ ಲಕ್ಷಾಂತರ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗುವಂತೆ, ಡೇವಿಡ್ ವಾರ್ನರ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 2020ರ ನಂತರ ಮೊದಲ ಬಾರಿಗೆ ವೈಟ್ ಜೆರ್ಸಿಯಲ್ಲಿ ಬ್ಯಾಟ್ ಮೇಲಕ್ಕೆತ್ತಿದರು.

Suryakumar Yadav: ಕೊಹ್ಲಿ, ರೋಹಿತ್ ಜೊತೆಗಿನ ಬಾಂಧವ್ಯ ತೆರೆದಿಟ್ಟ ಸೂರ್ಯಕುಮಾರ್ ಯಾದವ್Suryakumar Yadav: ಕೊಹ್ಲಿ, ರೋಹಿತ್ ಜೊತೆಗಿನ ಬಾಂಧವ್ಯ ತೆರೆದಿಟ್ಟ ಸೂರ್ಯಕುಮಾರ್ ಯಾದವ್

ಇದಕ್ಕೂ ಮೊದಲು ಡೇವಿಡ್ ವಾರ್ನರ್ ಅವರ ಹಿಂದಿನ ಶತಕವು ಜನವರಿ 3, 2020ರಂದು ನ್ಯೂಜಿಲೆಂಡ್ ವಿರುದ್ಧ ಅಜೇಯ 111 ರನ್ ಬಾರಿಸಿದಾಗ ಬಂದಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 200 ರನ್ ಗಳಿಸಿ ಗಾಯದಿಂದ ರಿಟೈರ್ಡ್ ಹರ್ಟ್‌ನಿಂದ ಮೈದಾನದಿಂದ ಹೊರನಡೆದರು.

ಅದರ ನಂತರ, ಅವರು ಮುಂದಿನ ಎರಡು ವರ್ಷಗಳ ಕಾಲ ಬ್ಯಾಟಿಂಗ್ ಸ್ಥಿರತೆಗಾಗಿ ಹೋರಾಡಬೇಕಾಯಿತು. ಡೇವಿಡ್ ವಾರ್ನರ್ 2021ರಲ್ಲಿ ಐದು ಟೆಸ್ಟ್‌ಗಳ ಎಂಟು ಇನ್ನಿಂಗ್ಸ್‌ಗಳಲ್ಲಿ 38.37ರ ಸರಾಸರಿಯಲ್ಲಿ ಎರಡು ಅರ್ಧ ಶತಕಗಳು ಮತ್ತು 95 ರನ್‌ಗಳ ಅತ್ಯುತ್ತಮ ಸ್ಕೋರ್‌ನೊಂದಿಗೆ 307 ರನ್ ಗಳಿಸಿದ್ದರು.

100ನೇ ಪಂದ್ಯದಲ್ಲಿ ದ್ವಿಶತಕ

100ನೇ ಪಂದ್ಯದಲ್ಲಿ ದ್ವಿಶತಕ

ಡೇವಿಡ್ ವಾರ್ನರ್ ಅವರ 2022ರ ಅಂಕಿ-ಸಂಖ್ಯೆಗಳು ಇನ್ನಷ್ಟು ಕಳಪೆಯಾಗಿವೆ. ಈ ಎಂಸಿಜಿ ಟೆಸ್ಟ್‌ಗೆ ಮೊದಲು ಡೇವಿಡ್ ವಾರ್ನರ್ ಆಡಿದ 10 ಟೆಸ್ಟ್‌ಗಳಲ್ಲಿ 20.61ರ ಕಳಪೆ ಸರಾಸರಿಯಲ್ಲಿ ಎರಡು ಅರ್ಧ ಶತಕಗಳೊಂದಿಗೆ ಕೇವಲ 371 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾದ ಅಪಾಯಕಾರಿ ಬೌಲರ್ ಕಗಿಸೊ ರಬಾಡ ಎಸೆದ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 45ನೇ ಓವರ್‌ನ ಮೊದಲ ಎಸೆತದಲ್ಲಿ ಡೇವಿಡ್ ವಾರ್ನರ್ ಫೈನ್ ಲೆಗ್‌ನಲ್ಲಿ ಬೌಂಡರಿ ಬಾರಿಸಿದರು.

ಸುಮಾರು ಮೂರು ವರ್ಷಗಳ ನಂತರ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ಅಂಕಿಗಳ ರನ್ ಬಾರಿಸಿದರು. ಟೆಸ್ಟ್ ಕ್ರಿಕೆಟ್‌ನ ಅವರ 100ನೇ ಪಂದ್ಯದಲ್ಲಿ ದ್ವಿಶತಕದ ಮೂಲಕ ಶತಕದ ಬರವನ್ನು ಮುರಿಯಲು ನಿಜಕ್ಕೂ ವಿಶೇಷ ದಿನವಾಗಿತ್ತು.

100ನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 10ನೇ ಬ್ಯಾಟ್ಸ್‌ಮನ್

100ನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 10ನೇ ಬ್ಯಾಟ್ಸ್‌ಮನ್

ಇದರೊಂದಿಗೆ ಡೇವಿಡ್ ವಾರ್ನರ್ ತಮ್ಮ 100ನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ 10ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇತರ ಬ್ಯಾಟ್ಸ್‌ಮನ್‌ಗಳೆಂದರೆ ಕಾಲಿನ್ ಕೌಡ್ರೆ (ಇಂಗ್ಲೆಂಡ್), ಜಾವೇದ್ ಮಿಯಾಂದಾದ್ (ಪಾಕಿಸ್ತಾನ), ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್), ಅಲೆಕ್ ಸ್ಟೀವರ್ಟ್ (ಇಂಗ್ಲೆಂಡ್), ಇಂಜಮಾಮ್-ಉಲ್-ಹಕ್ (ಪಾಕಿಸ್ತಾನ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ), ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ), ಜೋ ರೂಟ್ (ಇಂಗ್ಲೆಂಡ್).

2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರಿಕಿ ಪಾಂಟಿಂಗ್ ಅವಳಿ ಶತಕಗಳನ್ನು (120 ಮತ್ತು ಅಜೇಯ 143 ರನ್) ಬಾರಿಸಿದ ನಂತರ ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಆಸ್ಟ್ರೇಲಿಯಾದ ಕ್ರಿಕೆಟಿಗ ಆಗಿದ್ದಾರೆ.

ಸಕ್ರಿಯ ಆಟಗಾರರ ಪೈಕಿ ವಿರಾಟ್ ಕೊಹ್ಲಿ 72 ಶತಕಗಳೊಂದಿಗೆ ಅಗ್ರಸ್ಥಾನ

ಸಕ್ರಿಯ ಆಟಗಾರರ ಪೈಕಿ ವಿರಾಟ್ ಕೊಹ್ಲಿ 72 ಶತಕಗಳೊಂದಿಗೆ ಅಗ್ರಸ್ಥಾನ

ಡೇವಿಡ್ ವಾರ್ನರ್ ಸಕ್ರಿಯ ಆಟಗಾರರ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಗಳಲ್ಲಿ ಎರಡನೇ ಅತಿ ಹೆಚ್ಚು ಮೊತ್ತವನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 72 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಡೇವಿಡ್ ವಾರ್ನರ್ 45 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ನ ಜೋ ರೂಟ್ 44 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಮತ್ತು ಸ್ಟೀವ್ ಸ್ಮಿತ್ ತಲಾ 41 ಶತಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಸಮಬಲ ಹೊಂದಿದ್ದಾರೆ.

45 ಶತಕಗಳನ್ನು ಆರಂಭಿಕರಾಗಿ ಗಳಿಸಿರುವ ಸಚಿನ್ ತೆಂಡೂಲ್ಕರ್

45 ಶತಕಗಳನ್ನು ಆರಂಭಿಕರಾಗಿ ಗಳಿಸಿರುವ ಸಚಿನ್ ತೆಂಡೂಲ್ಕರ್

ಡೇವಿಡ್ ವಾರ್ನರ್ ಅವರು ಒಟ್ಟು 45 ಶತಕಗಳೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅತ್ಯಧಿಕ ಶತಕಗಳನ್ನು ದಾಖಲಿಸಿದ್ದಾರೆ. ವಾರ್ನರ್ ಏಕದಿನ ಪಂದ್ಯಗಳಲ್ಲಿ 20 ಮತ್ತು ದೀರ್ಘ ಸ್ವರೂಪದಲ್ಲಿ 25 ಶತಕಗಳನ್ನು ಹೊಂದಿದ್ದಾರೆ. ಇದೇ ವೇಳೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 45 ಶತಕಗಳೊಂದಿಗೆ ಸಮಬಲ ಸಾಧಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ತಮ್ಮ 100 ಶತಕಗಳಲ್ಲಿ 45 ಶತಕಗಳನ್ನು ಆರಂಭಿಕರಾಗಿ ಗಳಿಸಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಕೂಡ ಆರಂಭಿಕರಾಗಿ ಗಳಿಸಿದ ಎಲ್ಲಾ 42 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದರು.

ಎರಡನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗೆ 386 ರನ್

ಎರಡನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗೆ 386 ರನ್

ಇನ್ನು ಬಾಕ್ಸಿಂಗ್ ಡೇ ಪಂದ್ಯವನ್ನು ನೋಡುವುದಾದರೆ, ಆಸ್ಟ್ರೇಲಿಯದ ಮೊದಲ ಇನ್ನಿಂಗ್ಸ್ ಪ್ರಸ್ತುತ ಪ್ರಗತಿಯಲ್ಲಿದ್ದು, ಎರಡನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗೆ 386 ರನ್ ಗಳಿಸಿದೆ.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 189 ರನ್‌ಗಳಿಗೆ ಆಲೌಟ್ ಆಗಿತ್ತು. ದಕ್ಷಿಣ ಆಫ್ರಿಕಾ 67/5ಕ್ಕೆ ಕುಸಿದ ನಂತರ ವಿಕೆಟ್ ಕೀಪರ್-ಬ್ಯಾಟರ್ ಕೈಲ್ ವೆರ್ರೆನ್ (52) ಮತ್ತು ಮಾರ್ಕೊ ಜಾನ್ಸೆನ್ (59) 112 ರನ್ ಜೊತೆಯಾಟ ನಡೆಸಿ ಕೊನೆಯಲ್ಲಿ ತಂಡದ ಮೊತ್ತ ಏರಿಸಿದ್ದರು.

ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬೌಲಿಂಗ್‌ನಲ್ಲಿ 27 ರನ್‌ಗೆ 5 ವಿಕೆಟ್ ಬಾಚಿದರು. ಇದು ಅವರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಐದು ವಿಕೆಟ್‌ ಸಾಧನೆಯಾಗಿದೆ. ಮಿಚೆಲ್ ಸ್ಟಾರ್ಕ್ ಎರಡು ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ ಮತ್ತು ನಾಥನ್ ಲಿಯಾನ್ ತಲಾ ಒಂದು ವಿಕೆಟ್ ಪಡೆದರು.

Story first published: Tuesday, December 27, 2022, 15:26 [IST]
Other articles published on Dec 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X