Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಧಿಕೃತವಾಗಿ 'ಇಂಡಿಯನ್ ಪ್ರೀಮಿಯರ್ ಲೀಗ್ 2020' ರದ್ದುಗೊಳಿಸಿದ ಬಿಸಿಸಿಐ!

BCCI officially suspends IPL 2020 till further notice

ಬೆಂಗಳೂರು, ಏಪ್ರಿಲ್ 16: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು (ಬಿಸಿಸಿಐ) ಮುಂದಿನ ಸೂಚನೆ ಬರುವವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಅನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಗುರುವಾರ (ಏಪ್ರಿಲ್ 16) ಬಿಸಿಸಿಐಯು ಐಪಿಎಲ್ ಅನ್ನು ರದ್ದುಗೊಳಿಸಿ ಅಧಿಕೃತ ಘೋಷಣೆ ಮಾಡಿದೆ.

ಐಪಿಎಲ್ 13ನೇ ಆವೃತ್ತಿ ಅಸಲಿಗೆ ಮಾರ್ಚ್ 29ರಂದು ಆರಂಭಗೊಳ್ಳಬೇಕಿತ್ತು. ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಐಪಿಎಲ್ ಆರಂಭಗೊಳ್ಳೋಕೆ 2 ವಾರ ಮೊದಲು ಕೊರೊನಾವೈರಸ್ ಸೋಂಕಿನ ಕಾರಣ ಲಾಕ್‌ಡೌನ್ ಘೋಷಣೆಯಾಗಿತ್ತು. ಆಗ ಐಪಿಎಲ್ ಅನ್ನು ಏಪ್ರಿಲ್ 15ರ ಬಳಿಕ ಮುಂದೂಡಿದ್ದ ಬಿಸಿಸಿಐ, ಇದೀಗ ಟೂರ್ನಿಯನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಿದೆ.

'ದೇಶದ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷೆಗೆ ನಮ್ಮ ಹೆಚ್ಚಿನ ಆದ್ಯತೆಯಿದೆ. ಹೀಗಾಗಿ ಬಿಸಿಸಿಐ, ಫ್ರಾಂಚೈಸಿ ಮಾಲಕರು, ಪ್ರಸಾರಕರು, ಪ್ರಾಯೋಜಕರು ಮತ್ತು ಪಾಲುದಾರರು ಸೇರಿ, ಸುರಕ್ಷತೆಯ ಸಂದರ್ಭದಲ್ಲಿ ಐಪಿಎಲ್ ಅನ್ನು ನಡೆಸುತ್ತೇವೆ ಎಂದು ಈ ಮೂಲಕ ಜನರಿಗೆ ಭರವಸೆ ನೀಡುತ್ತಿದ್ದೇವೆ,' ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾವೈರಸ್ ಸೋಂಕಿಗೆ ಸಂಬಂಧಿಸಿ ಸಂದರ್ಭಗಳನ್ನು ಪರಿಗಣನೆಗೆ ತೆಗೆದುಕೊಂಡು ಐಪಿಎಲ್ ಅನ್ನು ಯಾವಾಗ ಆರಂಭಿಸಬಹುದು ಎಂದು ಯೋಜನೆ ರೂಪಿಸಲಿದ್ದೇವೆ ಎಂದೂ ಬಿಸಿಸಿಐ ಹೇಳಿದೆ. ಟೂರ್ನಿ ನಡೆಸುವ ಬಗ್ಗೆ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಲಹೆಗಳನ್ನೂ ತೆಗೆದುಕೊಳ್ಳುವುದಾಗಿ ಇಂಡಿಯನ್ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ.

Story first published: Thursday, April 16, 2020, 18:48 [IST]
Other articles published on Apr 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+