ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್‌ಬ್ಯಾಷ್‌ನಲ್ಲಿ ಆಡಿದ್ದು ಆಂಗ್ಲರಿಗೆ ಅನುಕೂಲವಾಯಿತು, ಬಿಸಿಸಿಐ ಈ ಬಗ್ಗೆ ಯೋಚಿಸಲಿ ಎಂದ ದ್ರಾವಿಡ್

Big Bash League Helps English Players In T20 World Cup 2022: Rahul Dravid

ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಆಡಿದ ಅನುಭವ ಇಂಗ್ಲೆಂಡ್‌ನ ಆಟಗಾರರಿಗೆ ನೆರವಾಯಿತು ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಆಡಿದ ಅನುಭವ ಹೊಂದಿರುವುದು ಅವರು ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಅನುಕೂಲವಾಯಿತು ಎಂದು ಹೇಳಿದ್ದಾರೆ. ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಸಿಡ್ನಿ ಥಂಡರ್‌ ಪರವಾಗಿ ಬಹಳಷ್ಟು ಪಂದ್ಯಗಳನ್ನು ಆಡಿರುವ ಅಲೆಕ್ಸ್ ಹೇಲ್ಸ್‌ಗೆ ಆಸ್ಟ್ರೇಲಿಯಾ ಪಿಚ್‌ಗಳ ಬಗ್ಗೆ ಸಾಕಷ್ಟು ಅರಿವಿದೆ.

ಈ ಬಗ್ಗೆ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, "ಇಂಗ್ಲೆಂಡ್‌ನ ಬಹಳಷ್ಟು ಆಟಗಾರರು ಬಂದು ಇಲ್ಲಿ ಆಡಿದ್ದಾರೆ. ಈ ಪಂದ್ಯಾವಳಿಯವಲ್ಲಿ ಅವರಿಗೆ ಇದು ಹೇಗೆ ಅನುಕೂಲವಾಗಿದೆ ಎನ್ನುವುದನ್ನು ನಾವು ನೋಡಬಹುದು" ಎಂದು ಅವರು ಹೇಳಿದರು.

ಜೋಸ್ ಬಟ್ಲರ್ ಕೂಡ ಥಂಡರ್ಸ್ ಪರ ಆಡಿದ್ದಾರೆ ಮತ್ತು ಇಂಗ್ಲೆಂಡ್ ಆರಂಭಿಕರಿಬ್ಬರೂ ಇಲ್ಲಿನ ಈ ಮೈದಾನದಲ್ಲಿ ಸ್ಥಳೀಯ ತಂಡ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಆಡಿರುವ ಅನುಭವ ಹೊಂದಿದ್ದಾರೆ.

ನೀವು ಗೆದ್ದಾಗ ಸಂಭ್ರಮಿಸಿದ್ದೇವೆ, ಸೋಲಿನಲ್ಲೂ ಜೊತೆ ನಿಲ್ಲುತ್ತೇವೆ: ಭಾರತ ತಂಡಕ್ಕೆ ಸಚಿನ್ ಬೆಂಬಲನೀವು ಗೆದ್ದಾಗ ಸಂಭ್ರಮಿಸಿದ್ದೇವೆ, ಸೋಲಿನಲ್ಲೂ ಜೊತೆ ನಿಲ್ಲುತ್ತೇವೆ: ಭಾರತ ತಂಡಕ್ಕೆ ಸಚಿನ್ ಬೆಂಬಲ

ಬಿಸಿಸಿಐ ಯಾವುದೇ ಭಾರತೀಯ ಕ್ರಿಕೆಟಿಗನಿಗೆ ಸಾಗರೋತ್ತರ ಟಿ20 ಲೀಗ್‌ಗಳಲ್ಲಿ ಆಡಲು ಅವಕಾಶ ನೀಡುವುದಿಲ್ಲ. "ಇದು ನಮಗೆ ದೊಡ್ಡ ಸವಾಲಾಗಿದೆ. ಭಾರತೀಯ ಕ್ರಿಕೆಟಿಗರು ಈ ಲೀಗ್‌ಗಳಲ್ಲಿ ಆಡುವ ಅವಕಾಶ ಇಲ್ಲ. ಆದರೆ, ಬಿಸಿಸಿಐ ಈ ಬಗ್ಗೆ ನಿರ್ಧಾರ ಮಾಡಬೇಕು" ಎಂದು ಹೇಳಿದರು.

Big Bash League Helps English Players In T20 World Cup 2022: Rahul Dravid

ಟೆಸ್ಟ್ ಕ್ರಿಕೆಟ್‌ ಮೇಲೆ ಪರಿಣಾಮ ಬೀರುವ ಆತಂಕ

ಬಿಬಿಎಲ್‌ ಅನ್ನು ಭಾರತದಲ್ಲಿ ರಣಜಿ ಟ್ರೋಫಿಯ ನಡೆಯುವ ಸಮಯದಲ್ಲಿ ಆಯೋಜಿಸಲಾಗುತ್ತದೆ. ಯಾವುದೇ ಭಾರತೀಯ ಯುವಕರಿಗೆ ಇಲ್ಲಿ ಆಡಲು ಅವಕಾಶ ಸಿಗುವುದಿಲ್ಲ. ಈ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಿದರೆ, ನಮಗೆ ದೇಶೀಯ ಕ್ರಿಕೆಟ್ ಇರುವುದಿಲ್ಲ ಎಂದು ಅವರು ಹೇಳಿದರು.

"ಬಹಳಷ್ಟು ಜನ ಈ ನಗ್ಗೆ ಮಾತನಾಡುತ್ತಾರೆ ಎಂದು ನನಗೆ ತಿಳಿದಿದೆ. ಭಾರತೀಯ ಕ್ರಿಕೆಟ್ ಎದುರಿಸುವ ಸವಾಲುಗಳನ್ನು ನಾವು ಅರ್ಥಮಾಡಿಕೊಳ್ಳಬೇಕು.ಇತರ ಲೀಗ್‌ಗಳಲ್ಲಿ ಆಡಲು ಭಾರತದ ಆಟಗಾರರಿಗೆ ಅವಕಾಶ ನೀಡಿದರೆ, ಟೆಸ್ಟ್ ಕ್ರಿಕೆಟ್ ಮೇಲೆ ಪರಿಣಾಮ ಬೀರುತ್ತದೆ. ವೆಸ್ಟ್ ಇಂಡೀಸ್ ಈಗ ಯಾವ ಪರಿಸ್ಥಿತಿಯಲ್ಲಿದೆ ಎನ್ನುವುದನ್ನು ನೋಡುತ್ತಿದ್ದೇವೆ" ಎಂದು ಹೇಳಿದರು.

"ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಿದರೆ ಖಂಡಿತವಾಗಿಯೂ ನಮ್ಮ ರಣಜಿ ಟ್ರೋಫಿಯ ಮೇಲೆ ಪರಿಣಾಮ ಬೀರುತ್ತದೆ; ಟೆಸ್ಟ್ ಕ್ರಿಕೆಟ್ ಮೇಲೆ ಪರಿಣಾಮ ಬೀರುತ್ತದೆ. ಟೆಸ್ಟ್ ಆಡುವ ಭಾರತೀಯ ಹುಡುಗರು ಬಹಳ ಮುಖ್ಯ" ಎಂದು ಹೇಳಿದರು.

Story first published: Friday, November 11, 2022, 2:30 [IST]
Other articles published on Nov 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X