ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರಿನಲ್ಲಿ ' ಭಾರತದಲ್ಲಿ ಮಹಿಳಾ ಕ್ರಿಕೆಟ್ ಇತಿಹಾಸ' ಪುಸ್ತಕ ಬಿಡುಗಡೆ

ಬೆಂಗಳೂರು,ಡಿಸೆಂಬರ್ 20: ಬೆಂಗಳೂರಿನ ಚಾನ್ಸೆರಿಯಲ್ಲಿ ಸಿದ್ಧಾಂತ ಪಟ್ನಾಯಕ್ ಹಾಗೂ ಕಾರುಣ್ಯ ಕೇಶವ್ ಅವರು ತಮ್ಮ 'ಫೈರ್ ಬರ್ನ್ಸ್ ಬ್ಲೂ: ಎ ಹಿಸ್ಟರಿ ಆಫ್ ವುಮೆನ್ ಕ್ರಿಕೆಟ್ ಇನ್ ಇಂಡಿಯಾ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.

ಮಾಜಿ ಕ್ಯಾಪ್ಟನ್ ಮಮತಾ ಮೆಬೆನ್ ಹಾಗೂ, 1997/98 ವುಮೆನ್ ಕ್ರಿಕೆಟ್ ವರ್ಲ್ಡ್ ಕಪ್, ಇಂಡಿಯಾ ಟೀಮ್ ನ ಮಾಜಿ ಕ್ಯಾಪ್ಟನ್ ಪ್ರಮೀಳಾ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಾಗೂ ಪ್ರಸಿದ್ಧ ಕ್ರೀಡಾ ಪತ್ರಕರ್ತ ಸುರೇಶ್ ಮೆನನ್ ಅವರು ಚರ್ಚಾ ಕಾರ್ಯಕ್ರಮ ನಡೆಸಿದರು.

ಇನ್ನು ಈ ಪುಸ್ತಕದ ಕುರಿತು ಮಾತನಾಡಿದ ಕಾರುಣ್ಯ ಕೇಶವ 'ಮಹಿಳಾ ಕ್ರಿಕೆಟ್ ಪಯಣವು ಹಲವಾರು ನಟರನ್ನು ಹೊಂದಿದೆ. ಭಾವೋದ್ರೇಕದೊಂದಿಗೆ ಆಡಿದವರು ಹಾಗೂ ಸ್ವಲ್ಪ ವಿಭಿನ್ನ ಬಗೆಯಲ್ಲಿ ಆಡಿದವರ ಸ್ಫೂರ್ತಿದಾಯಕ ಹಾಗೂ ಆಶ್ಚರ್ಯಕರವಾದ ಕಥೆಗಳ ಕುರಿತ ವಿಷಯ ಈ ಪುಸ್ತಕದಲ್ಲಿದೆ' ಎಂದು ತಿಳಿಸಿದರು.

ಮಹಿಳಾ ಕ್ರಿಕೆಟ್ ತಂಡದ ಸಂಖ್ಯೆಯ ಕುರಿತು ಸಿದ್ಧಾಂತ

ಮಹಿಳಾ ಕ್ರಿಕೆಟ್ ತಂಡದ ಸಂಖ್ಯೆಯ ಕುರಿತು ಸಿದ್ಧಾಂತ

ಮಹಿಳಾ ಕ್ರಿಕೆಟ್ ತಂಡದ ಸಂಖ್ಯೆಯ ಕುರಿತು ಸಿದ್ಧಾಂತ ಪಟ್ನಾಯಕ್ ಹೇಳಿರುವುದು ಹೀಗೆ,'ಈಗ ಹೋಲಿಸಿದರೆ ಆರಂಭದ ದಿನಗಳಲ್ಲಿ ಈ ಆಟ ಕಡಿಮೆ ಸಂಖ್ಯೆಯಲ್ಲಿತ್ತು. ಆದರೆ ಕಾಲಾವಧಿಯ ನಂತರ ಈಗ ಅತ್ಯುತ್ತಮವಾದ ಮೂವರು ವ್ಯಕ್ತಿಗಳನ್ನು ಭಾರತದ ತಂಡ ಹೊಂದಿದೆ. ಉತ್ತಮ ಬೌಲಿಂಗ್ ಹಾಗೂ ಇಂಡಿಯಾದ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಿಥಾಲಿ ರಾಜ್ ಹಾಗೂ ಅತೀ ಹೆಚ್ಚು ವಿಕೆಟ್ ಗಳಿಸಿದ ಝಲನ್ ಗೋಸ್ವಾಮಿ ಇವರ ಅತ್ಯುತ್ತಮವಾದ ಸಾಧನೆ ದೇಶವೇ ಹೆಮ್ಮೆ ಪಡುವಂತದ್ದು.

ಮಹಿಳಾ ಕ್ರಿಕೆಟ್ ತಂಡದ ಬಗ್ಗೆ ಚರ್ಚೆ

ಮಹಿಳಾ ಕ್ರಿಕೆಟ್ ತಂಡದ ಬಗ್ಗೆ ಚರ್ಚೆ

ಚರ್ಚಾ ಕಾರ್ಯಕ್ರಮದಲ್ಲಿ ಸಿದ್ದಾಂತ ಪಟ್ನಾಯಕ್ ಅವರು ಪ್ರಮೀಳಾ ಭಟ್ ನಾಯಕತ್ವದಲ್ಲಿ ಆರಂಭಿಕ ದಿನಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹೇಗಿತ್ತು ಎಂಬುದರ ಕುರಿತು ಸಂಭಾಷಣೆ ನಡೆಸಿದರು. ಹಾಗೇ ಕಾರುಣ್ಯ ಕೇಶವ್ ಅವರು 70ರ ದಶಕದಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಹೇಗಲ್ಲಾ ಬದಲಾವಣೆಗೊಂಡಿತು ಎಂಬ ದೃಷ್ಟಿಕೋಶನದ ಕುರಿತು ಬೆಳಕು ಚೆಲ್ಲಿದರು.

ಮಾಜಿ ನಾಯಕಿ ಮಮತಾ ಮಬೆನ್ ಮಾತನಾಡಿ

ಮಾಜಿ ನಾಯಕಿ ಮಮತಾ ಮಬೆನ್ ಮಾತನಾಡಿ

ಇಂಡಿಯನ್ ವುಮೆನ್ಸ್ ಕ್ರಿಕೆಟ್ ಜರ್ನಿ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಮಮತಾ ಮಬೆನ್ ‘ಇದೊಂದು ಮಹಿಳಾ ಕ್ರಿಕೆಟ್ ಗೆ ಮಹತ್ವದ ಸಂದರ್ಭವಾಗಿದೆ. ಈ ಪ್ರಯಾಣದಲ್ಲಿ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತಸವಾಗಿದೆ' ಎಂದು ಹೇಳಿದರು.

ಇನ್ನು ಭಾರತದಲ್ಲಿ ಮಹಿಳಾ ಕ್ರಿಕೆಟ್ ನ ಆರಂಭಿಕ ದಿನಗಳ ಕುರಿತು ಮಾತನಾಡಿದ ಪ್ರಮೀಳಾ ಭಟ್ ‘ಮಹಿಳಾ ಕ್ರಿಕೆಟ್ ಬಗ್ಗೆ ‘ದಿನ ಪತ್ರಿಕೆಯ ಒಂದು ಮೂಲೆಯಲ್ಲಿ ಎರಡು ಸಾಲಿನ ಸುದ್ದಿಯಿಂದ ಈಗ ಒಂದು ಪುಸ್ತಕದವರೆಗೆ ಮಹಿಳಾ ಕ್ರಿಕೆಟ್ ಬೆಳೆದು ಬಂದು ನಿಂತಿದೆ' ಎಂದು ಹೆಮ್ಮೆ ಪಟ್ಟುಕೊಂಡರು.

ಇದೊಂದು ಐತಿಹಾಸಿಕ ಸಂಕಲನ

ಇದೊಂದು ಐತಿಹಾಸಿಕ ಸಂಕಲನ

ದಿ ಫೈರ್ ಬರ್ನ್ಸ್ ಬ್ಲೂ ಭಾರತದಲ್ಲಿ ಮಹಿಳಾ ಕ್ರಿಕೆಟ್ ನ ಕುರಿತ ಇತಿಹಾಸದ ಒಂದು ಸಂಕಲನವಾಗಿದೆ. ಮಹಿಳಾ ಕ್ರಿಕೆಟ್ ನ ಇತಿಹಾಸವನ್ನು ಇದರಲ್ಲಿ ತೆರೆದಿಡಲಾಗಿದೆ. ಇದು ಮಹಿಳಾ ಕ್ರಿಕೆಟ್ ನ ಡಯಾನಾ ಎಡ್ಲ್ಜಿ ಹಾಗೂ ಶಾಂತ ರಂಗಸ್ವಾಮಿಯಿಂದ ಹಿಡಿದದು ಈಗಿನ ಮಿಥಾಲಿ ರಾಜ್, ಹರ್ಮನ್ ಪ್ರೀತ್ ಕೌರ್ ಕುರಿತು ತಿಳಿಸುತ್ತದೆ.

ಅಮೆಜಾನ್ ನಲ್ಲಿ ಪುಸ್ತಕ ಲಭ್ಯ

ಅಮೆಜಾನ್ ನಲ್ಲಿ ಪುಸ್ತಕ ಲಭ್ಯ

ಹಾಗೇ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಯಾವ ರೀತಿಯ ಸಂಕಷ್ಟಗಳನ್ನು ಎದುರಿಸಿತು ಎಂಬುದರ ಬಗ್ಗೆ ಮಾಹಿತಿ ನೀಡುತ್ತದೆ. ಆಡಳಿತಾತ್ಮಕ ಬೆಂಬಲಗಳ ಅನುಪಸ್ಥಿತಿ ಹಾಗೂ ನಿಧಿಯ ಸಮಸ್ಯೆ ಗಳ ಕುರಿತು ಮಾಹಿತಿ ನೀಡುತ್ತದೆ. ಇಷ್ಟೆಲ್ಲಾ ಸಂಕಷ್ಟದ ನಡುವೆಯೂ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬೆಳೆದು ನಿಂತ ಪರಿಯನ್ನು ತಿಳಿಸುತ್ತದೆ.ಬುಕ್ ಸ್ಟೋರ್ಸ್ ಹಾಗೂ ಅಮೆಜಾನ್.ಇನ್ ನಲ್ಲಿ ಈ ಪುಸ್ತಕ ಲಭ್ಯವಿದೆ.

Story first published: Thursday, December 20, 2018, 18:13 [IST]
Other articles published on Dec 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X