ಕೆಕೆಆರ್‌ ಐಪಿಎಲ್ ಪ್ಲೇ-ಆಫ್ಸ್‌ಗೆ ಪ್ರವೇಶಿಸುವ ವಿಶ್ವಾಸವಿದೆ: ದಿನೇಶ್ ಕಾರ್ತಿಕ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿನ್ನು ಪ್ಲೇ ಆಫ್ಸ್‌ಗೆ ಪ್ರವೇಶಿಸೋದು ಬಲು ಕಷ್ಟ ಸಾಧ್ಯ. ಆದರೆ ಕೆಕೆಆರ್ ಪ್ಲೇ ಆಫ್ಸ್‌ಗೆ ಪ್ರವೇಶಿಸುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಕೆಕೆಆರ್ ಮಾಜಿ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಸದ್ಯದ ಅಂಕಪಟ್ಟಿಯಲ್ಲಿ ಕೆಕೆಆರ್ 7ನೇ ಸ್ಥಾನದಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ ಕೆಕೆಆರ್ 2 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್ ಕಲೆ ಹಾಕಿದೆ.

ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಬದಲು ರಾಜಸ್ಥಾನ್‌ಗೆ ಬಲಿಷ್ಠ ಆಟಗಾರರು ಎಂಟ್ರಿ!ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಬದಲು ರಾಜಸ್ಥಾನ್‌ಗೆ ಬಲಿಷ್ಠ ಆಟಗಾರರು ಎಂಟ್ರಿ!

ಭಾರತದಲ್ಲಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿದ್ದ ಐಪಿಎಲ್ 14ನೇ ಆವೃತ್ತಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಯಲ್ಲಿ ನಡೆಯಲಿದೆ. ಭಾರತದಲ್ಲಿ ಕೋವಿಡ್-19 ಭೀತಿ ಹೆಚ್ಚಾಗಿದ್ದರಿಂದ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. ಆ ಉಳಿದ ಪಂದ್ಯಗಳೆಲ್ಲ ಯುಎಇಯಲ್ಲಿ ನಡೆಯಲಿದೆ.

"ನಾವು ಪ್ಲೇ ಆಫ್ಸ್‌ಗೆ ಪ್ರವೇಸಿಸಬೇಕಾದರೆ ಉಳಿದಿರುವ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆಲ್ಲಬೇಕು. ನಾವು ಅಷ್ಟು ಮಾಡಿದರೆ ಸಾಕು ಪ್ಲೇ ಆಫ್ಸ್‌ಗೆ ಪ್ರವೇಶಿಸಬಹುದು. ನಾವೊಂದು ತಂಡವಾಗಿ ಆ ಆರು ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ. ಒಂದು ಪಂದ್ಯ ಬೇಕಾದರೆ ಸೋತರೂ ಪರವಾಗಿಲ್ಲ. ಆದರೆ ಉಳಿದ ಆರು ಪಂದ್ಯಗಳನ್ನಂತೂ ಗೆಲ್ಲಲೇಬೇಕು," ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!ಟಿ20 ವಿಶ್ವಕಪ್‌ ಮಿಸ್ ಮಾಡಿಕೊಳ್ಳಲಿದ್ದಾರಾ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್?!

ಇಯಾನ್ ಮಾರ್ಗನ್ ಮುಂದಾಳತ್ವದ ಕೆಕೆಆರ್ ಸೆಪ್ಟೆಂಬರ್‌ 20ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ದ್ವಿತೀಯ ಹಂತದ ಟೂರ್ನಿಯ ಮೊದಲ ಪಂದ್ಯ ಆಡಲಿದೆ. "ಕಳೆದ ವರ್ಷ ನಾವು ಒಂದಿಷ್ಟು ಪಂದ್ಯಗಳನ್ನು ಗೆದ್ದು ಸ್ವಲ್ಪದರಲ್ಲಿ ಪ್ಲೇ ಆಫ್ಸ್ ಅವಕಾಶ ಕಳೆದುಕೊಂಡಿದ್ದೆವು. ಈ ಬಾರಿಯೂ ಗೆಲ್ಲುವ ಅವಕಾಶ ಇನ್ನೂ ಇದೆ ಎಂದು ನಾವು ಭಾವಿಸುತ್ತಿದ್ದೇವೆ,' ಎಂದು ಡಿಕೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ICC ವರ್ಲ್ಡ್ ಕಪ್ ಗೆ ,ಪಾಕ್ ತಂಡ ರೆಡಿ!! | Oneindia Kannada

27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್‌ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

For Quick Alerts
ALLOW NOTIFICATIONS
For Daily Alerts
Story first published: Tuesday, September 7, 2021, 21:37 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X