IND Vs BAN : ಇದಕ್ಕೆ ಅವರೇ ಉತ್ತರ ನೀಡಬೇಕು! ಭಾರತ ತಂಡದ ಫೀಲ್ಡಿಂಗ್ ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ

ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸುವ ಮೂಲಕ ಸರಣಿಯಲ್ಲಿ ಹಿನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿ 186 ರನ್‌ಗಳಿಗೆ ಆಲೌಟ್ ಆದ ಟೀಂ ಇಂಡಿಯಾ, ನಂತರ ಈ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳಲು ಉತ್ತಮವಾಗಿಯೇ ಬೌಲಿಂಗ್ ಮಾಡಿತು.

136 ರನ್ ಆಗುವಷ್ಟರಲ್ಲಿ ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, 10ನೇ ವಿಕೆಟ್‌ಗೆ 52 ರನ್‌ಗಳ ದಾಖಲೆಯ ಜೊತೆಯಾಟ ಆಡುವ ಮೂಲಕ ಮೆಹಿದಿ ಹಸನ್ ಮೀರಜ್ ಮತ್ತು ಮುಸ್ತಾಫಿಜುರ್ ರೆಹಮಾನ್ ಬಾಂಗ್ಲಾದೇಶಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

FIFA World Cup: ಸೆನೆಗಲ್ ವಿರುದ್ಧ ಸುಲಭ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್FIFA World Cup: ಸೆನೆಗಲ್ ವಿರುದ್ಧ ಸುಲಭ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್

ವಾಷಿಂಗ್ಟನ್ ಸುಂದರ್ ಮತ್ತು ಕೆಎಲ್ ರಾಹುಲ್ ಫೀಲ್ಡಿಂಗ್‌ ವೇಳೆ ಮಾಡಿದ ಪ್ರಮಾದ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು. ಬಾಂಗ್ಲಾದೇಶ 150 ರನ್ ಗಳಿಸಿದ್ದಾಗ ಮೆಹಿದಿ ಹಸನ್ ಮೀರಜ್ ನೀಡಿದ ಸುಲಭದ ಕ್ಯಾಚ್‌ ಅನ್ನು ಕೆಎಲ್‌ ರಾಹುಲ್ ಕೈ ಬಿಟ್ಟರು. ವಾಷಿಂಗ್ಟನ್ ಸುಂದರ್ ಕೂಡ ಮೆಹಿದಿ ಹಸನ್ ನೀಡಿದ ಕ್ಯಾಚ್‌ ಹಿಡಿಯುವ ಅವಕಾಶ ಇದ್ದರೂ ಬಾಲ್‌ ಹಿಡಿಯುವ ಪ್ರಯತ್ನವನ್ನೇ ಮಾಡಲಿಲ್ಲ.

ಫೀಲ್ಡಿಂಗ್ ಪ್ರಮಾದದ ಬಗ್ಗೆ ದಿನೇಶ್ ಕಾರ್ತಿಕ್ ಅಚ್ಚರಿ

ಫೀಲ್ಡಿಂಗ್ ಪ್ರಮಾದದ ಬಗ್ಗೆ ದಿನೇಶ್ ಕಾರ್ತಿಕ್ ಅಚ್ಚರಿ

ಭಾರತದ ಫೀಲ್ಡಿಂಗ್ ಬಗ್ಗೆ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯುವ ಅವಕಾಶ ಇದ್ದರೂ ಆ ಪ್ರಯತ್ನವನ್ನೇ ಮಾಡದ ಬಗ್ಗೆ ಅಚ್ಚರಿಗೊಂಡಿದ್ದಾರೆ. ಅವರು ಯಾಕೆ ಮಾಡಿದರು ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕೆಎಲ್ ರಾಹುಲ್‌ ಕ್ಯಾಚ್‌ ಹಿಡಿಯುವ ಪ್ರಯತ್ನವನ್ನು ಮಾಡಿದರು, ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯುವ ಪ್ರಯತ್ನವನನ್ನೇ ಮಾಡಲಿಲ್ಲ, ಆತ ಯಾಕೆ ಹಾಗೆ ಮಾಡಿದ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

Ind vs Ban 1st ODI : ಸೋಲಿಗೆ ಕಾರಣ ಇದೇ ಎಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ

ಎಲ್ಲಾ ಪ್ರಶ್ನೆಗಳಿಗೂ ಆತನೇ ಉತ್ತರಿಸಬೇಕು

ಎಲ್ಲಾ ಪ್ರಶ್ನೆಗಳಿಗೂ ಆತನೇ ಉತ್ತರಿಸಬೇಕು

ಯಾವ ಕಾರಣಕ್ಕಾಗಿ ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯಲು ಕೂಡ ಪ್ರಯತ್ನಿಸಲಿಲ್ಲ ಎನ್ನುವ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಹಲವು ಸಾಧ್ಯತೆಗಳ ಬಗ್ಗೆ ಮಾತನಾಡಿದ್ದಾರೆ. ಲೈಟಿಂಗ್ ಕಾರಣದಿಂದ ಆತನಿ ಬಾಲ್ ಕಾಣಲಿಲ್ಲವಾ? ಕ್ಯಾಚ್ ಹಿಡಿಯಲು ಸಾಧ್ಯವಿಲ್ಲ ಎನ್ನುವ ಲೆಕ್ಕಾಚಾರ ಇತ್ತಾ ಅಥವಾ ಒತ್ತಡದಿಂದ ಈ ರೀತಿ ಮಾಡಿದರಾ ಎನ್ನುವ ಬಗ್ಗೆ ಸ್ವತಃ ವಾಷಿಂಗ್ಟನ್ ಸುಂದರ್ ಉತ್ತರಿಸಬೇಕು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಒಟ್ಟಾರೆ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತ ದೇಶದ ಫೀಲ್ಡಿಂಗ್ ಉತ್ತಮವಾಗಿರಲಿಲ್ಲ ಎಂದು ಒಪ್ಪಿಕೊಂಡರು. ಒಂದು ಕಡೆ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಮೂಲಕ ತಂಡದ ಫೀಲ್ಡಿಂಗ್‌ನಲ್ಲಿ ಮಿಂಚು ಹರಿಸಿದರೆ, ಮತ್ತೊಂದೆಡೆ ಕಳಪೆ ಫೀಲ್ಡಿಂಗ್ ಮೂಲಕ ಗೆಲ್ಲುವ ಪಂದ್ಯದಲ್ಲಿ ಸೋಲು ಕಂಡಿತು.

ವಾಷಿಂಗ್ಟನ್ ವಿರುದ್ಧ ಕೆರಳಿದ ರೋಹಿತ್ ಶರ್ಮಾ

ವಾಷಿಂಗ್ಟನ್ ವಿರುದ್ಧ ಕೆರಳಿದ ರೋಹಿತ್ ಶರ್ಮಾ

ಮೆಹಿದಿ ಹಸನ್ ಮಿರಾಜ್ ಎರಡು ಬಾರಿ ಜೀವದಾನ ಪಡೆದದ್ದು ನೋಡಿ ರೋಹಿತ್ ಶರ್ಮಾ ಕೆಂಡಾಮಂಡಲವಾದರು. ಅದರಲ್ಲೂ ವಾಷಿಂಗ್ಟನ್ ಸುಂದರ್ ಕ್ಯಾಚ್ ಹಿಡಿಯಲು ಪ್ರಯತ್ನವನ್ನೇ ಪಡದಿರುವುದನ್ನು ನೋಡಿ ತಮ್ಮ ತಾಳ್ಮೆ ಕಳೆದುಕೊಂಡರು. ಮೈದಾನದಲ್ಲೇ ರೋಹಿತ್ ಶರ್ಮಾ ಸಹ ಆಟಗಾರನ ವಿರುದ್ಧ ಕಿಡಿ ಕಾರಿದರು.

ಮೊದಲು ಕೆಎಲ್ ರಾಹುಲ್ ಸುಲಭವಾದ ಕ್ಯಾಚ್ ಕೈ ಚೆಲ್ಲಿದರೆ ನಂತರ ವಾಷಿಂಗ್ಟನ್ ಸುಂದರ್ ಅದೇ ತಪ್ಪು ಮಾಡಿದರು. ಎರಡು ಬಾರಿ ಜೀವದಾನ ಪಡೆದ ಮೆಹಿದಿ ಹಸನ್ ಮೀರಜ್ ನಂತರ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಕ್ಯಾಚ್ ಬಿಟ್ಟಿದ್ದೇ ಸೋಲಿಗೆ ಕಾರಣ ಎಂದ ಕೆಎಲ್ ರಾಹುಲ್

ಕ್ಯಾಚ್ ಬಿಟ್ಟಿದ್ದೇ ಸೋಲಿಗೆ ಕಾರಣ ಎಂದ ಕೆಎಲ್ ರಾಹುಲ್

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಲ್ ರಾಹುಲ್, ಎರಡು ಕ್ಯಾಚ್ ಕೈ ಚೆಲ್ಲಿದ್ದು ತಂಡದ ಸೋಲಿಗೆ ಕಾರಣವಾಯಿತು ಎಂದು ಒಪ್ಪಿಕೊಂಡರು.

"ಇದು ಕ್ರಿಕೆಟ್, ಇಲ್ಲಿ ಅನಿರೀಕ್ಷಿತವಾದುದನ್ನು ನಾವು ನಿರೀಕ್ಷಿಸಬಹುದು. ಕ್ರಿಕೆಟ್ ಆಡುವವರೆಗೆ ಈ ರೀತಿಯ ವಿಷಯಗಳು ಸಂಭವಿಸುತ್ತಲೇ ಇರುತ್ತವೆ. ಬಾಂಗ್ಲಾದೇಶ ಕೊನೆಯವರೆಗೂ ಉತ್ತಮವಾಗಿ ಹೋರಾಟ ನೀಡಿತು. ಮೆಹಿದಿ ಹಸನ್ ನೀಡಿದ ಎರಡು ಅವಕಾಶಗಳನ್ನು ನಾವು ಕೈ ಚೆಲ್ಲಿದೆವು, ಅವರು ಅದರ ಲಾಭ ಪಡೆದುಕೊಂಡರು" ಎಂದು ಕೆಎಲ್ ರಾಹುಲ್ ಹೇಳಿದರು.

ಸರಣಿಯಲ್ಲಿ 0-1 ಹಿನ್ನಡೆ ಸಾಧಿಸಿರುವ ಭಾರತ ಬುಧವಾರ ಎರಡನೇ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಸರಣಿ ಜೀವಂತವಾಗಿರಲಿದೆ.

For Quick Alerts
ALLOW NOTIFICATIONS
For Daily Alerts
Story first published: Monday, December 5, 2022, 10:31 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X