ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Ban 1st ODI : ಸೋಲಿಗೆ ಕಾರಣ ಇದೇ ಎಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ

Ind vs Ban: Skipper Rohit Sharma Reveals The Reason Behind Team India Lost

ಢಾಕಾದ ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತ ತಂಡದ ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿದೆ. 10ನೇ ವಿಕೆಟ್‌ಗೆ 52 ರನ್‌ಗಳ ವಿಶ್ವದಾಖಲೆಯ ಜೊತೆಯಾಟ ಆಡುವ ಮೂಲಕ ಮೆಹಿದಿ ಹಸನ್ ಮತ್ತು ಮುಸ್ತಾಫಿಜುರ್ ರೆಹಮಾನ್ ರೋಚಕ ಗೆಲುವಿಗೆ ಕಾರಣವಾದರು.

ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಭಾರತ ತಂಡದ ಸೋಲಿಗೆ ಬ್ಯಾಟಿಂಗ್ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PKL 2022: ಯುಪಿ ಯೋಧಾಸ್ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು ಗೂಳಿಗಳುPKL 2022: ಯುಪಿ ಯೋಧಾಸ್ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು ಗೂಳಿಗಳು

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಆಲೌಟಾಯಿತು. ಈ ಸ್ಕೋರ್ ತುಂಬಾ ಕಡಿಮೆಯಾಗಿತ್ತು ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಆದರೂ ನಾವು ಸುಲಭವಾಗಿ ಸೋಲಲಿಲ್ಲ, ಕೊನೆಯವರೆಗೂ ಹೋರಾಡಿದೆವು. ಬಾಂಗ್ಲಾದೇಶ ತಂಡವನ್ನು ಕೊನೆಯವರೆಗೂ ಒತ್ತಡದಲ್ಲಿ ಇರಿಸಿದೆವು. ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿದೆವು ಎಂದು ಅವರು ಹೇಳಿದರು. ಆದರೂ, ಮೆಹಿದಿ ಹಸನ್ ಮೀರಜ್ ಒತ್ತಡದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

50 ಓವರ್ ಪೂರ್ತಿ ಬ್ಯಾಟಿಂಗ್ ಮಾಡಬೇಕು

50 ಓವರ್ ಪೂರ್ತಿ ಬ್ಯಾಟಿಂಗ್ ಮಾಡಬೇಕು

ಭಾರತ ತಂಡದ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿರುವ ರೋಹಿತ್ ಶರ್ಮಾ, "ಭಾರತ ತಂಡ 50 ಓವರ್ ಪೂರ್ತಿಯಾಗಿ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ, ನಮಗೆ ಅದನ್ನು ಮಾಡಲಾಗಲಿಲ್ಲ. 186 ರನ್‌ಗಳಿಗೆ ಆಲೌಟ್ ಆಯಿತು. ನಾವು ಕೊನೆಯವರೆಗೂ ಬ್ಯಾಟಿಂಗ್ ಮಾಡಿದ್ದರೆ, ಇನ್ನೂ ಕೆಲವು ರನ್ ಗಳಿಸುತ್ತಿದ್ದೆವು" ಇದು ನಮಗೆ ಸಾಕಷ್ಟು ಸಹಕಾರಿಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

"ಬಾಂಗ್ಲಾದೇಶದಂತಹ ತಂಡಕ್ಕೆ ಅವರ ತವರಿನಲ್ಲಿ ಇದು ಉತ್ತಮವಾದ ಸ್ಕೋರ್ ಆಗಿರಲಿಲ್ಲ. ನಾವು ಇನ್ನೂ 30-40 ರನ್ ಹೆಚ್ಚಿಗೆ ಗಳಿಸಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗಿರುತ್ತಿತ್ತು. ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಇನ್ನೂ ಕೆಲವು ರನ್ ಗಳಿಸಿದ್ದರೆ ಉತ್ತಮವಾಗಿರುತ್ತಿದ್ದು, ಆದರೆ, ನಾವು ಬೇಗನೆ ವಿಕೆಟ್ ಕಳೆದುಕೊಂಡ ಕಾರಣ ಒತ್ತಡದಲ್ಲಿ ಆಡಿದರು" ಎಂದು ಹೇಳಿದ್ದಾರೆ.

ಅಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಹೀರೋ ಆಗಿದ್ದ ಕೆಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ವಿಲನ್!

 ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡಬೇಕು

ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡಬೇಕು

ಬಾಂಗ್ಲಾದೇಶದ ಬೌಲರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದು, ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಐದು ವಿಕೆಟ್ ಕಬಳಿಸಿದರೆ ಮತ್ತು ಎಬಾಡೋಟ್ ಹೊಸೈನ್ ನಾಲ್ಕು ವಿಕೆಟ್ ಪಡೆದರು.

"ಪಿಚ್ ಸ್ವಲ್ಪ ಸವಾಲಾಗಿತ್ತು, ಬೆಸ ಚೆಂಡು ತಿರುಗುತ್ತಿತ್ತು. ಹೇಗೆ ಆಡಬೇಕೆಂದು ನೀವು ಅರ್ಥಮಾಡಿಕೊಳ್ಳಬೇಕು. ಇದರಲ್ಲಿ ಯಾವುದೇ ಕ್ಷಮೆ ಸಿಗುವುದಿಲ್ಲ. ಈ ಪರಿಸ್ಥಿತಿಯಲ್ಲಿ ಬಾಂಗ್ಲಾ ಸ್ಪಿನ್ನರ್‌ಗಳ ವಿರುದ್ಧ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ನಾವು ತಿಳಿಯಬೇಕಾಗಿದೆ" ಎಂದು ರೋಹಿತ್ ಶರ್ಮಾ ಹೇಳಿದರು.

ಬಾಂಗ್ಲಾದೇಶ ಆಟಕ್ಕೆ ರೋಹಿತ್ ಮೆಚ್ಚುಗೆ

ಬಾಂಗ್ಲಾದೇಶ ಆಟಕ್ಕೆ ರೋಹಿತ್ ಮೆಚ್ಚುಗೆ

ಭಾರತೀಯ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶದ ಪ್ರದರ್ಶನವನ್ನು ಹೊಗಳಿದರು. ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ನಂತರ 9 ವಿಕೆಟ್‌ ಕಳೆದುಕೊಂಡರೂ 187 ರನ್‌ಗಳ ಗುರಿಯನ್ನು ಬೆನ್ನಟ್ಟಲು ಒತ್ತಡವನ್ನು ನಿಭಾಯಿಸಿದರು.

"ಇಂತಹ ಪರಿಸ್ಥಿತಿಗಳಲ್ಲಿ ಅವರು ಆಡಿದ್ದಾರೆ. ಒತ್ತಡವನ್ನು ನಿಭಾಯಿಸುವ ಬಗ್ಗೆ ಕಲಿಯಬೇಕು. ಒತ್ತಡದ ಸಂದರ್ಭದಲ್ಲಿ ಉತ್ತಮವಾಗಿ ಆಡಿದರೆ ಅದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮುಂದಿನ ಪಂದ್ಯಗಳಲ್ಲಿ ನಾವು ಹಲವು ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ" ಎಂದು ಹೇಳಿದರು.

2015 ರಿಂದ ಏಳು ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮೊದಲ ಸೋಲನ್ನು ಅನುಭವಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 0-1 ಹಿನ್ನಡೆಯಲ್ಲಿದೆ. ಭಾರತ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕೆಂದರೆ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಲೇಕಾದ ಒತ್ತಡಕ್ಕೆ ಸಿಲುಕಿದೆ.

Story first published: Sunday, December 4, 2022, 23:45 [IST]
Other articles published on Dec 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X