ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಏಕದಿನ ವಿಶ್ವಕಪ್ ಪ್ರದರ್ಶನ ಟಿ20 ತಂಡದಿಂದ ಹೊರ ಬೀಳಲು ಕಾರಣವಾಯಿತು"

Dinesh Karthik says why he is dropped from Indian t20 team
ಏಕದಿನ ವಿಶ್ವಕಪ್ ನಲ್ಲಿ ಮಾಡಿದ ತಪ್ಪಿನಿಂದಾಗಿ ಹೀಗೆಲ್ಲಾ ಆಯ್ತು

ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಸದ್ಯ ಟೀಮ್ ಇಂಡಿಯಾ ತಂಡದಲ್ಲಿ ಸ್ಥಾನವನ್ನು ಪಡೆಯಲು ವಿಫಲರಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮುಂದಿನ 2021ರ ಟಿ20 ವಿಶ್ವಕಪ್ ಅಥವಾ 2022ರಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ತಾನು ಇನ್ನು ಕೂಡ ಚುಟುಕು ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಮರ್ಥನಾಗಿದ್ದೇನೆ ಎಂಬ ವಿಶ್ವಾಸವನ್ನು ದಿನೇಶ್ ಕಾರ್ತಿಕ್ ವ್ಯಕ್ತಪಡಿಸಿದ್ದಾರೆ. ಜೊತೆಗೆ ಏಕದಿನ ಮಾದರಿಯಲ್ಲಿ ನೀಡಿದ ಕೆಟ್ಟ ಪ್ರದರ್ಶನದ ಕಾರಣಕ್ಕೆ ಚುಟುಕು ಮಾದರಿಯಲ್ಲಿ ತಂಡದಿಂದ ಕೈಬಿಡುವುದು ಅಸಾಧ್ಯ ಎಂಬ ಮಾತನ್ನು ಕೂಡ ಹೇಳಿದ್ದಾರೆ. 2019ರ ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ತಾನು ಟಿ20 ತಂಡದಿಂದ ಹೊರಬೀಳಲು ಕಾರಣವಾಯಿತು ಎಂಬ ಅಭಿಪ್ರಾಯವನ್ನು ದಿನೇಶ್ ಕಾರ್ತಿಕ್ ವ್ಯಕ್ತಪಡಿಸಿದ್ದಾರೆ.

ಎಂಎಸ್ ಧೋನಿ ಹುಟ್ಟುಹಬ್ಬ: ಮಾಹಿ ಕ್ರಿಕೆಟ್ ಜೀವನದ ಐದು ಸ್ಮರಣೀಯ ಇನ್ನಿಂಗ್ಸ್‌ಗಳ ಮೆಲುಕುಎಂಎಸ್ ಧೋನಿ ಹುಟ್ಟುಹಬ್ಬ: ಮಾಹಿ ಕ್ರಿಕೆಟ್ ಜೀವನದ ಐದು ಸ್ಮರಣೀಯ ಇನ್ನಿಂಗ್ಸ್‌ಗಳ ಮೆಲುಕು

"ನಾನು ಎಷ್ಟು ಕಾಲ ಫಿಟ್ ಆಗಿರುತ್ತೀಬೋ ಅಷ್ಟು ಕಾಲ ಕ್ರಿಕೆಟ್ ಆಡಲು ಬಯಸುತ್ತೇನೆ. ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ಎರಡು ಟಿ20 ವಿಶ್ವಕಪ್‌ಗಳಲ್ಲಿ ಕನಿಷ್ಟ ಒಂದರಲ್ಲಿ ಆಡುವುದನ್ನು ನಾನು ಬಯಸುತ್ತೇನೆ. ಒಂದು ದುಬೈನಲ್ಲಿ ನಡೆದರೆ ಮತ್ತೊಂದು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ವಿಫಲವಾಗಿ ತಂಡದಿಂದ ಹೊರಬೀಳುವ ಸಮಯದವರೆಗೂ ಭಾರತೀಯ ಟಿ20 ತಂಡದಲ್ಲಿ ನಾನು ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ" ಎಂದು ದಿನೇಶ್ ಕಾರ್ತಿಕ್ ಗೌರವ್ ಕಪೂರ್ ನಡೆಸಿಕೊಡುವ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

"ನಾನು ಇನ್ನು ಕೂಡ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರವಾಗಿ ಆಡುತ್ತಿದ್ದೇನೆ. ಭಾರತ ತಂಡಕ್ಕೆ ಈಗ ಶುದ್ಧ ಮಧ್ಯಮ ಕ್ರಮಾಂಕದ ಆಟಗಾರನ ಅಗತ್ಯವಿದೆ. ಭಾರತ ತಂಡ ಈಗ ಮಧ್ಯಮ ಕ್ರಮಾಂಕವನ್ನು ಪ್ರತಿನಿಧಿಸುವ ಅಗ್ರ ಕ್ರಮಾಂಕದ ಆಟಗಾರರನ್ನು ಹೊಂದಿದೆ. ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯಾರೂ ಇಲ್ಲ. ಅವರೆಲ್ಲರೂ ತಮ್ಮ ಫ್ರಾಂಚೈಸಿಗಳಿಗೆ ಆರಂಭೀಕ ಸ್ಥಾನದಿಂದ ಮೂರನೇ ಕ್ರಮಾಂಕದಲ್ಲಿ ಆಡಲು ಇಳಿಯುತ್ತಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ರಿಷಭ್ ಪಂತ್ ಮಾತ್ರ ಇದಕ್ಕೆ ಹೊರತಾಗಿದ್ದಾರೆ" ಎಂದು ದಿನೇಶ್ ಕಾರ್ತಿಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Thursday, July 8, 2021, 19:13 [IST]
Other articles published on Jul 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X