ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೃಥ್ವಿ ಶಾ ಅವರನ್ನು ವೀರೇಂದ್ರ ಸೆಹ್ವಾಗ್ ಗೆ ಹೋಲಿಸಬೇಡಿ: ಸೌರವ್ ಗಂಗೂಲಿ

Don’t compare Prithvi Shaw with Virender Sehwag - Sourav Ganguly

ಕೋಲ್ಕತ್ತ, ಅಕ್ಟೋಬರ್ 5: ಆಕರ್ಷಕ ಬ್ಯಾಟಿಂಗ್ ಮೂಲಕ ಅಂತಾರಾಷ್ಟ್ರೀಯ ಚೊಚ್ಚಲ ಟೆಸ್ಟ್ ನಲ್ಲಿ ಶತಕ ಬಾರಿಸಿದ ಪೃಥ್ವಿ ಶಾ ಅವರನ್ನು ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಸೌರವ್ ಗಂಗೂಲಿ ಮೆಚ್ಚಿಕೊಂಡಿದ್ದಾರೆ. ಆದರೆ ಶಾ ಅವರನ್ನು ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಹೋಲಿಸಬಾರದು ಎಂದಿದ್ದಾರೆ.

ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಳ್ಳೋದು 'ಪೃಥ್ವಿ'ಯ ಶಕ್ತಿ: ಸಚಿನ್ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಳ್ಳೋದು 'ಪೃಥ್ವಿ'ಯ ಶಕ್ತಿ: ಸಚಿನ್

ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್-ಭಾರತ ಮೊದಲ ಟೆಸ್ಟ್ ನ ಮೊದಲ ದಿನದಾಟದಂದು (ಅಕ್ಟೋಬರ್ 4) ಮುಂಬೈಯ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಪಾದಾಟರ್ಪಣೆ ಮಾಡಿದ್ದರು. ಈ ಪಂದ್ಯದಲ್ಲೇ ಶತಕ (134 ರನ್) ಬಾರಿಸಿ ಪೃಥ್ವಿ ಕ್ರಿಕೆಟ್ ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಶತಕ ಶೂರ ಪೃಥ್ವಿ ಶಾ ಫಸ್ಟ್ 'ಶೋ' ಗೆ ಟ್ವೀಟ್ ಸಲಾಂಶತಕ ಶೂರ ಪೃಥ್ವಿ ಶಾ ಫಸ್ಟ್ 'ಶೋ' ಗೆ ಟ್ವೀಟ್ ಸಲಾಂ

ಯುವ ಆಟಗಾರ ಪೃಥ್ವಿಯ ಬಗ್ಗೆ ಗಂಗೂಲಿಗೆ ಪ್ರೀತಿ ಇದ್ದೇ ಇದೆ. ಆದರೆ ಈಗತಾನೆ ಅಂತಾರಾಷ್ಟ್ರೀಯ ಟೆಸ್ಟ್ ಗೆ ಕಾಲಿಸುತ್ತಿರುವ ಎಳೆ ಪ್ರತಿಭೆಯನ್ನು ದೈತ್ಯರ ಸಾಲಿನಲ್ಲಿರುವವರಿಗೆ ಹೋಲಿಸುವುದು ಸರಿಯಲ್ಲಿ ಎಂಬುದು ಗಂಗೂಲಿ ನಿಲುವು. ಜೊತೆಗೆ ಪೃಥ್ವಿಯನ್ನು ಯಾಕೆ ಸೆಹ್ವಾಗ್ ಗೆ ಹೋಲಿಸುವುದು ಸರಿಯಲ್ಲ ಎನ್ನುವುದಕ್ಕೆ ಗಂಗೂಲಿ ಕೊಟ್ಟ ಕೆಲ ಕಾರಣಗಳು ಕೆಳಗಿವೆ.

ಪೃಥ್ವಿ ವಿಶ್ವದಲ್ಲೆಡೆ ಆಡಲಿ

ಪೃಥ್ವಿ ವಿಶ್ವದಲ್ಲೆಡೆ ಆಡಲಿ

ಕೋಲ್ಕತ್ತಾದಲ್ಲಿ ನಡೆದ 'ಟಾಟಾ ಸ್ಟೀಲ್ 25k ಮ್ಯಾರಥಾನ್ ರನ್' ಗೆ ಚಾಲನೆ ನೀಡುತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, 'ಪೃಥ್ವಿ ಶಾ ಅವರನ್ನು ಸೆಹ್ವಾಗ್ ಹೋಲಿಸಬೇಡಿ. ಮೊದಲು ಪೃಥ್ವಿ ವಿಶ್ವದೆಲ್ಲೆಡೆ ಹೋಗಿ ಕ್ರಿಕೆಟ್ ಆಡುವಂತಾಗಲಿ, ಅಲ್ಲೆಲ್ಲಾ ಕಡೆ ಹೆಚ್ಚು ರನ್ ಗಳಿಸುವಂತಾಗಲಿ' ಎಂದರು.

ಹೋಲಿಕೆ ಸರಿಯಲ್ಲ

ಹೋಲಿಕೆ ಸರಿಯಲ್ಲ

'ಸೆಹ್ವಾಗ್ ಒಬ್ಬರು ಅದ್ಭುತ ಪ್ರತಿಭೆ. ಅವರಿಗೆ ಪೃಥ್ವಿಯನ್ನು ಹೋಲಿಸಬಾರದು. ಪೃಥ್ವಿಯನ್ನು ವಿಶ್ವದೆಲ್ಲೆಡೆ ಆಡಲು ಬಿಡಿ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಲ್ಲಿ ಪೃಥ್ವಿ ಒಳ್ಳೆಯ ರನ್ ಗಳಿಸಬಲ್ಲರೆಂದು ನನಗೆ ನಂಬಿಕೆಯಿದೆ. ಆದರೆ ಪೃಥ್ವಿಯನ್ನು ಸೆಹ್ವಾಗ್ ಗೆ ಹೋಲಿಸುವುದು ಮಾತ್ರ ಸರಿಯಲ್ಲ' ಎಂದು ದಾದಾ ತಿಳಿಸಿದರು.

ಪೃಥ್ವಿಗದು ಅವಿಸ್ಮರಣೀಯ ಕ್ಷಣ

ಪೃಥ್ವಿಗದು ಅವಿಸ್ಮರಣೀಯ ಕ್ಷಣ

'ಪಾದಾರ್ಪಣೆ ಟೆಸ್ಟ್ ನಲ್ಲಿ ಶತಕ ಸಿಡಿಸಿದ ಪೃಥ್ವಿಗದು ಒಂದು ಅಪೂರ್ವ ಕ್ಷಣವಾಗಿರಬಹುದು. ರಣಜಿ, ದುಲೀಪ್ ಟ್ರೋಫಿ ಮತ್ತು ಅಂತಾರಾಷ್ಟ್ರೀಯ ಟೆಸ್ಟ್ ಹೀಗೆ ಈ ಮೂರೂ ಚೊಚ್ಚಲ ಪಂದ್ಯದಲ್ಲೂ ಪೃಥ್ವಿ ಶತಕ ಬಾರಿಸಿದ್ದಾರೆ. ಹೀಗಾಗಿ ಪೃಥ್ವಿ ಪಾಲಿಗೆ ಇದು (ಅಕ್ಟೋಬರ್ 4) ಅವಿಸ್ಮರಣೀಯ ಕ್ಷಣ' ಎಂದು 'ಬಂಗಾಳ ಹುಲಿ' ಅಭಿಪ್ರಾಯಿಸಿದರು.

ಚೊಚ್ಚಲ ಶತಕ ಬಾರಿಸಿದ್ದ ದಾದಾ

ಚೊಚ್ಚಲ ಶತಕ ಬಾರಿಸಿದ್ದ ದಾದಾ

'ನಾನು ಚೊಚ್ಚಲ ರಣಜಿ ಟ್ರೋಫಿಯಲ್ಲಿ ಶತಕ ಬಾರಿಸಿಲ್ಲ. ಆದರೆ ಮೊದಲ ದುಲೀಪ್ ಟ್ರೋಫಿ ಮತ್ತು ಅಂತಾರಾಷ್ಟ್ರೀಯ ಮೊದಲ ಟೆಸ್ಟ್ ನಲ್ಲಿ ಶತಕ ಬಾರಿಸಿದ್ದೆ' ಎಂದು ಗಂಗೂಲಿ ಸ್ಮರಿಸಿಕೊಂಡರು. 1996ರಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಾದಾರ್ಪಣೆ ಪಂದ್ಯದಲ್ಲಿ 'ಗಾಡ್ ಆಫ್ ಆಫ್ ಸೈಡ್' ಖ್ಯಾತಿಯ ಗಂಗೂಲಿ 131 ರನ್ ಸಿಡಿಸಿದ್ದರು.

Story first published: Friday, October 5, 2018, 13:34 [IST]
Other articles published on Oct 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X