ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಐಪಿಎಲ್‌ನಲ್ಲಿ ಕ್ಯಾಮರೂನ್ ಗ್ರೀನ್ ಆಡುವುದು ಡೌಟ್; ಆಸೀಸ್ ಕೋಚ್ ಹೇಳಿದ್ದೇನು?

Doubt For Cameron Green To Play In IPL 2023; What Did the Australia Head Coach Say?

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕ್ಯಾಮರೂನ್ ಗ್ರೀನ್ ಅವರು ಆಡುವುದು ಇನ್ನೂ ಅನುಮಾನವೆನಿಸಿದೆ.

ಕೊಚ್ಚಿಯಲ್ಲಿ ಡಿಸೆಂಬರ್ 23ರಂದು ನಡೆಯುವ ಐಪಿಎಲ್ ಮಿನಿ ಹರಾಜಿನಲ್ಲಿ ಹೆಸರು ನೋಂದಾಯಿಸಿದ್ದರೂ, ಆಡುವ ವಿಷಯ ಬಂದಾಗ ಕ್ಯಾಮರೂನ್ ಗ್ರೀನ್ ಹಿಂದೆ ಸರಿಯುವ ಸಾಧ್ಯತೆ ಇದೆ.

IND vs BAN: ಮೊದಲ ಏಕದಿನ ಪಂದ್ಯ ಸೋಲಲು ಭಾರತದ ಈ 3 ತಪ್ಪುಗಳೇ ಕಾರಣIND vs BAN: ಮೊದಲ ಏಕದಿನ ಪಂದ್ಯ ಸೋಲಲು ಭಾರತದ ಈ 3 ತಪ್ಪುಗಳೇ ಕಾರಣ

ಕ್ಯಾಮರೂನ್ ಗ್ರೀನ್ ಅವರ ಕೆಲಸದ ಹೊರೆಯ ಬಗ್ಗೆ ಸ್ವತಃ ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಕಳವಳ ವ್ಯಕ್ತಪಡಿಸಿದ್ದು, ಶ್ರೀಮಂತ ಟಿ20 ಪಂದ್ಯಾವಳಿಯಲ್ಲಿ ಆಸೀಸ್‌ನ ಆಲ್‌ರೌಂಡರ್ ಭಾಗವಹಿಸುವ ನಿರ್ಧಾರವನ್ನು ಟೂರ್ನಿಯ ಮುಂಚೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಐಪಿಎಲ್ ಫ್ರಾಂಚೈಸಿಗಳಿಂದ ಭಾರಿ ಬೇಡಿಕೆ

ಐಪಿಎಲ್ ಫ್ರಾಂಚೈಸಿಗಳಿಂದ ಭಾರಿ ಬೇಡಿಕೆ

23 ವರ್ಷ ವಯಸ್ಸಿನ ಆಸ್ಟ್ರೇಲಿಯಾದ ಎಲ್ಲ ಮಾದರಿಯ ಸ್ಫೋಟಕ ಬ್ಯಾಟರ್ ಕ್ಯಾಮರೂನ್ ಗ್ರೀನ್ ಈ ತಿಂಗಳ ಮಿನಿ ಹರಾಜಿನಲ್ಲಿ ಐಪಿಎಲ್ ಫ್ರಾಂಚೈಸಿಗಳಿಂದ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

"ಮುಂದಿನ 12 ತಿಂಗಳ ಕ್ರಿಕೆಟ್‌ನಲ್ಲಿ ಕ್ಯಾಮರೂನ್ ಗ್ರೀನ್ ಅವರ ಬಿಡುವಿಲ್ಲದ ಕ್ರಿಕೆಟ್ ಕಳವಳಕಾರಿಯೇ? ಎಂಬ ಪ್ರಶ್ನೆಗೆ, ಇದು ಪ್ರತಿಯೊಬ್ಬ ಆಟಗಾರನಿಗೂ ಕಳವಳಕಾರಿ ಎಂದು ನಾನು ಭಾವಿಸುತ್ತೇನೆ," ಎಂದು ಆಸೀಸ್ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಕ್ಯಾಮರೂನ್ ಗ್ರೀನ್ ಆಡುವ ನಿರ್ಧಾರವನ್ನು ಈಗಲೇ ತೆಗೆದುಕೊಳ್ಳುವುದಿಲ್ಲ

ಕ್ಯಾಮರೂನ್ ಗ್ರೀನ್ ಆಡುವ ನಿರ್ಧಾರವನ್ನು ಈಗಲೇ ತೆಗೆದುಕೊಳ್ಳುವುದಿಲ್ಲ

"ನಾವು ಆಟಗಾರರ ಕೆಲಸದ ಹೊರೆ ಬಗ್ಗೆ ಹಲವಾರು ಬಾರಿ ಮಾತನಾಡಿದ್ದೇವೆ. ಮಾರ್ಚ್ ಅಂತ್ಯದ ವೇಳೆಗೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕ್ಯಾಮರೂನ್ ಗ್ರೀನ್ ಐಪಿಎಲ್‌ಗಿಂತ ಮೊದಲು ಸಾಕಷ್ಟು ಕ್ರಿಕೆಟ್‌ ಸರಣಿಗಳನ್ನು ಆಡಬೇಕಿದೆ ಮತ್ತು ಅವರು ಆಡುವ ನಿರ್ಧಾರವನ್ನು ಈಗಲೇ ತೆಗೆದುಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ," ಎಂದು ಹೇಳಿದರು.

"ಒಂಬತ್ತು ಟೆಸ್ಟ್ ಪಂದ್ಯಗಳು ಮತ್ತು ಭಾರತ ಪ್ರವಾಸದಲ್ಲಿ ವೈಟ್‌ಬಾಲ್ ಕ್ರಿಕೆಟ್‌ ಸಹ ಆಡುವ ಹಿನ್ನೆಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಅವರ ದೇಹವು ಏನು ಅನುಭವಿಸುತ್ತದೆ ಎಂದು ನಿಮಗೆ ತಿಳಿದಿಲ್ಲ," ಎಂದು ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿದರು.

ಫೆಬ್ರವರಿ-ಮಾರ್ಚ್‌ ವೇಳೆ ಭಾರತದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ಜೂನ್-ಜುಲೈನಲ್ಲಿ ಇಂಗ್ಲೆಂಡ್‌ ನೆಲದಲ್ಲಿ ಆಶಸ್ ಟೆಸ್ಟ್ ಸರಣಿಯ ನಡುವೆ 2023ರ ಐಪಿಎಲ್ ಟೂರ್ನಿ ನಡೆಯಲಿದೆ.

ಕ್ಯಾಮರೂನ್ ಗ್ರೀನ್‌ಗೆ ಎಚ್ಚರಿಕೆ ನೀಡಿರುವ ಡೇವಿಡ್ ವಾರ್ನರ್

ಕ್ಯಾಮರೂನ್ ಗ್ರೀನ್‌ಗೆ ಎಚ್ಚರಿಕೆ ನೀಡಿರುವ ಡೇವಿಡ್ ವಾರ್ನರ್

ಇದೇ ವೇಳೆ ಆಸ್ಟ್ರೇಲಿಯಾದ ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ತನ್ನ ಕೆಲಸದ ಹೊರೆಯನ್ನು ನಿರ್ವಹಿಸುವ ಸವಾಲಿನ ಬಗ್ಗೆ ಈಗಾಗಲೇ ಕ್ಯಾಮರೂನ್ ಗ್ರೀನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಆಸ್ಟ್ರೇಲಿಯ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯಿಂದಾಗಿ ಮುಂದಿನ ವರ್ಷದ ಐಪಿಎಲ್‌ನಿಂದ ಈಗಾಗಲೇ ಹೊರಗುಳಿದಿದ್ದಾರೆ.

"ಕ್ಯಾಮರೂನ್ ಗ್ರೀನ್‌ ಅವರು ಹೆಚ್ಚಿನ ಪ್ರಮಾಣದ ಓವರ್‌ಗಳನ್ನು ಬೌಲ್ ಮಾಡಬೇಕೆಂದು ನಾವು ಬಯಸುತ್ತಿಲ್ಲ. ಆದರೆ ಅವರು ಅಗ್ರ 6ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಅವರು ಬ್ಯಾಟರ್ ಆಗಿ ಉತ್ತಮ ಲಯದಲ್ಲಿದ್ದಾರೆ," ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅಭಿಪ್ರಾಯಪಟ್ಟರು.

Story first published: Monday, December 5, 2022, 16:22 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X