For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

England vs Pakistan, 1st Test Match, Interesting Statistics

ಮ್ಯಾನ್ಚೆಸ್ಟರ್: ಇಂಗ್ಲೆಂಡ್‌ನ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್‌-ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಬಳಗ 3 ವಿಕೆಟ್ ರೋಚಕ ಜಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್ ಕಲೆ ಹಾಕಿದ್ದ ಪಾಕ್ ಮುನ್ನಡೆ ಸಾಧಿಸಿತ್ತು. ಅಂತಿಮ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್‌ ಗೆಲುವಿಗೆ ಸವಾಲಿನ ಗುರಿ (276 ರನ್) ಇತ್ತಲ್ಲದೆ ಪಾಕ್ ಮಾರಕ ಬೌಲಿಂಗ್‌ನೊಂದಿಗೆ ಆಂಗ್ಲರಿಗೆ ಸೋಲಿನ ಭೀತಿಯೊಡ್ಡಿತ್ತು.

ಆದರೆ ಕೊನೇ ಇನ್ನಿಂಗ್ಸ್‌ನಲ್ಲಿ ಜೋಸ್ ಬಟ್ಲರ್ 75, ಕ್ರಿಸ್ ವೋಕ್ಸ್ 84 ರನ್ ಬಾರಿಸಿ ಇಂಗ್ಲೆಂಡ್‌ಗೆ ಬಲ ತುಂಬಿದರು. ಆಂಗ್ಲ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಪೂರೈಸಿ ಗೆಲುವಿನ ನಗೆ ಬೀರಿತು. ಮೂರು ಪಂದ್ಯಗಳ ಸರಣಿಯಲ್ಲೀಗ ಆತಿಥೇಯ ಇಂಗ್ಲೆಂಡ್ 1-0ಯ ಮುನ್ನಡೆ ಸಾಧಿಸಿದೆ.

ಪಾಕಿಸ್ತಾನ vs ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯ ಅನೇಕ ದಾಖಲೆಗಳಿಗೆ, ಕುತೂಹಲಕಾರಿ ಅಂಕಿ-ಅಂಶಗಳಿಗೆ ಕಾರಣವಾಗಿದೆ. ಅವುಗಳ ಮಾಹಿತಿ ಇಲ್ಲಿದೆ ನೋಡಿ.

1ನೇ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರ್‌ಕಾರ್ಡ್

1ನೇ ಟೆಸ್ಟ್‌ನ ಸಂಕ್ಷಿಪ್ತ ಸ್ಕೋರ್‌ಕಾರ್ಡ್

* ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ 326-10 (109.3 Ov), ಶಾನ್ ಮಸೂದ್ 156 ರನ್, ಬಾಬರ್ ಅಝಾಮ್ 69, ಶದಾಬ್ ಖಾನ್ 45.
* ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ 219-10 (70.3 Ov), ಆಲ್ಲಿ ಪೋಪ್ 62 ರನ್, ಜೋಸ್ ಬಟ್ಲರ್ 38, ಸ್ಟುವರ್ಟ್ ಬ್ರಾಡ್ 29.
* ಪಾಕಿಸ್ತಾನ ದ್ವಿತೀಯ ಇನ್ನಿಂಗ್ಸ್ 169-10 (46.4 Ov), ಯಾಸಿರ್ ಶಾ 33 ರನ್, ಅಸಾದ್ ಶಫೀಕ್ 29, ಮೊಹಮ್ಮದ್ ರಿಝ್ವಾನ್ 27
* ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 277-7 (82.1 Ov), ಡೊಮಿನಿಕ್ ಸಿಬ್ಲಿ 36, ಜೋ ರೂಟ್ 42, ಜೋಸ್ ಬಟ್ಲರ್ 75, ಕ್ರಿಸ್ ವೋಕ್ಸ್ 84.

ಚೇಸಿಂಗ್‌ನಲ್ಲಿ ಅತೀ ಹೆಚ್ಚು ರನ್

ಚೇಸಿಂಗ್‌ನಲ್ಲಿ ಅತೀ ಹೆಚ್ಚು ರನ್

(ಟೆಸ್ಟ್ ಕ್ರಿಕೆಟ್‌ನಲ್ಲಿ ಚೇಸಿಂಗ್ ವೇಳೆ 5 ವಿಕೆಟ್ ಕಳೆದುಕೊಂಡ ಬಳಿಕವೂ ಇಂಗ್ಲೆಂಡ್ ಹೆಚ್ಚು ರನ್ ಬಾರಿಸಿ ಪಂದ್ಯ ಗೆದ್ದ ಅಂಕಿ-ಅಂಶಗಳು ಇಲ್ಲಿವೆ)
* 215 vs ಆಸ್ಟ್ರೇಲಿಯಾ, ಓವಲ್, 1902
* 160 vs ಪಾಕ್, ಮ್ಯಾಂಚೆಸ್ಟರ್, 2020 *
* 129 vs ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್‌, 1909/10
* 122 vs ನ್ಯೂಜಿಲೆಂಡ್, ಟ್ರೆಂಟ್ ಬ್ರಿಡ್ಜ್, 2004
* 120 vs ಆಸ್ಟ್ರೇಲಿಯಾ, ಮೆಲ್ಬೋರ್ನ್, 1907/08

ಪಾಕ್‌ಗೆ ಸತತ ಸೋಲಿನ ಮುಖಭಂಗ

ಪಾಕ್‌ಗೆ ಸತತ ಸೋಲಿನ ಮುಖಭಂಗ

(ಪಾಕಿಸ್ತಾನ ಕ್ರಿಕೆಟ್ ತಂಡ ಪಾಕ್ ಅಥವಾ ಯುಎಇಯಿಂದ ಹೊರಗೆ ಆಡಿದ ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿದೆ)
* ಇಂಗ್ಲೆಂಡ್‌ ವಿರುದ್ಧ ಇನ್ನಿಂಗ್ಸ್‌ ಸಹಿತ 55 ರನ್ ಸೋಲು, ಲೀಡ್ಸ್
* ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಸೋಲು, ಸೆಂಚುರಿಯನ್.
* ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಸೋಲು, ಕೇಪ್ ಟೌನ್.
* ದಕ್ಷಿಣ ಆಫ್ರಿಕಾ ವಿರುದ್ಧ 107 ರನ್ ಸೋಲು, ಜೋಹಾನ್ಸ್ ಬರ್ಗ್.
* ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್‌ ಸಹಿತ 5 ರನ್ ಸೋಲು, ಬ್ರಿಸ್ಬೇನ್.
* ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್‌ ಸಹಿತ 48 ರನ್ ಸೋಲು, ಅಡಿಲೇಡ್,
* ಇಂಗ್ಲೆಂಡ್ ವಿರುದ್ಧ 3 ವಿಕೆಟ್ ಸೋಲು, ಮ್ಯಾನ್ಚೆಸ್ಟರ್.

ಲೀಡ್ ಪಡೆದೂ ಪಾಕ್ ಸೋತಿದ್ದು

ಲೀಡ್ ಪಡೆದೂ ಪಾಕ್ ಸೋತಿದ್ದು

(ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದರೂ ಪಾಕಿಸ್ತಾನ ಪಂದ್ಯ ಸೋತಿರುವ ಅಂಕಿ-ಅಂಶಗಳು ಇಲ್ಲಿವೆ)
* 331 vs ಇಂಗ್ಲೆಂಡ್ ಓವಲ್, 2006
* 206 vs ಆಸ್ಟ್ರೇಲಿಯಾ, ಸಿಡ್ನಿ, 2009/10
* 144 Vs ನ್ಯೂಜಿಲೆಂಡ್, ಕ್ರೈಸ್ಟ್‌ಚರ್ಚ್, 1993/94
* 133 vs ಆಸ್ಟ್ರೇಲಿಯಾ, ಮೆಲ್ಬೋರ್ನ್, 1972/73
* 110 vs ಶ್ರೀಲಂಕಾ, ಫೈಸಲಾಬಾದ್, 1995/96
* 107 vs ಇಂಗ್ಲೆಂಡ್, ಮ್ಯಾಂಚೆಸ್ಟರ್, 2020 *

Story first published: Monday, August 10, 2020, 10:16 [IST]
Other articles published on Aug 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+