ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ: 2ನೇ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ಶರಣಾದ ಪಾಕಿಸ್ತಾನ

England vs Pakistan 2nd ODI, England beat Pakistan by 52 runs and won the series

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಪಾಕಿಸ್ತಾನ ಇಂಗ್ಲೆಂಡ್ ತಂಡದ ವಿರುದ್ಧ ಹೀನಾಯ ಪ್ರದರ್ಶನ ನೀಡಿ ಶರಣಾಗಿದೆ. ಈ ಮೂಲಕ ಮತ್ತೊಮ್ಮೆ ತೀವ್ರ ಟೀಕೆಗೆ ಗುರಿಯಾಗಿದೆ. ಬಹುತೇಕ ಅನನುಭವಿ ಆಟಗಾರರನ್ನೇ ಹೊಂದಿರುವ ಇಂಗ್ಲೆಂಡ್ ಮುಂದೆ ಪಾಕಿಸ್ತಾನ ಯಾವ ಹಂತದಲ್ಲೂ ಪ್ರತಿರೋಧವನ್ನು ಒಡ್ಡಲು ವಿಫಲವಾಗಿ ಸೋಲು ಕಂಡಿದೆ.

ಶನಿವಾರ ನಡೆದ ಈ ಪಂದ್ಯದಲ್ಲಿಟಾಸ್ ಗೆದ್ದು ಮೊದಲಿಗೆ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು ಪಾಕಿಸ್ತಾನ. ಅದಕ್ಕೆ ಪೂರಕವಾಗಿ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಕಾರಣವಾಗಿದ್ದ ಡೇವಿಡ್ ಮಲನ್ ಹಾಗೂ ಜಾಕ್ ಕ್ರಾವ್ಲೇ ಅವರನ್ನು ಬೇಗನೆ ಔಟ್ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಮೇಲುಗೈ ಸಾಧಿಸಿತ್ತು.

ಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ಆದರೆ ಫಿಲಿಪ್ ಸಾಲ್ಟ್ ಹಾಗೂ ಜೆ ವಿನ್ಸಿ ಜೋಡಿ ಅದ್ಭುತ ಆಟವನ್ನು ಪ್ರದರ್ಶಿಸುವ ಮೂಲಕ ಇಂಗ್ಲೆಂಡ್‌ಗೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾದರು. ಇಬ್ಬರು ಕೂಡ ಅರ್ಧ ಶತಕವನ್ನು ದಾಖಲಿಸಿದರು. ನಂತರ ಗ್ರೆಗರಿ ಹಾಗೂ ಬ್ರೈಡನ್ ಕಾರ್ಸ್ ಕೂಡ ನಿರ್ಣಾಯಕ ಕೊಡುಗೆಯನ್ನು ನೀಡುವಲ್ಲಿ ಯಶಸ್ವಿಯಾದರು. ಈ ಮೂಲಕ ಇಂಗ್ಲೆಂಡ್ ತಂಡ 45.2 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಗಿತ್ತು.

ಮಳೆಯಿಂದಾಗಿ 47 ರನ್‌ಗಳಿಗೆ ಕಡಿತವಾದ ಈ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಲು ಆರಂಭಿಸಿತು. ಆದರೆ ಮತ್ತೊಮ್ಮೆ ಆರಂಭಿಕ ಆಘಾತಕ್ಕೆ ಒಳಗಾಯಿತು. ಪಾಕಿಸ್ತಾನದ ಇಮಾಮ್ ಉಲ್ ಹಲ್ ಕೇವಲ 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ನಾಯಕ ಬಾಬರ್ ಅಜಂ ಕೂಡ 19 ರನ್‌ಗಳಿಗೆ ತನ್ನ ಆಟವನ್ನು ಅಂತ್ಯಗೊಳಿಸಿದರು. ನಂತರ ಇಂಗ್ಲೆಂಡ್ ಒಂದರಮೇಲೊಂದರಂತೆ ಯಶಸ್ಸನ್ನು ಪಡೆಯುತ್ತಾ ಸಾಗಿತ್ತು. ಆದರೆ ಸೌದ್ ಶಕೀಲ್ ಮಾತ್ರ ಅಂತಿಮ ಹಂತದ ವರೆಗೂ ಹೋರಾಟವನ್ನು ನಡೆಸಿ 56 ರನ್‌ಗಳಿಸಿ ಕೊನೆಯದಾಗಿ ವಿಕೆಟ್ ಕಳೆದುಕೊಂಡರು.

ಇಂಗ್ಲೆಂಡ್ ತಂಡವನ್ನು ಇಟಲಿ ಪೆನಾಲ್ಟಿಯಲ್ಲಿ ಸೋಲಿಸಿ ಚಾಂಪಿಯನ್ | Oneindia Kannada

247 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 195 ರನ್‌ಗಳಿಗೆ ಆಲೌಟ್ ಆಗುವ ಮೂಲಕ 52 ರನ್‌ಗಳಿಂದ ಸೋಲು ಕಂಡಿತ್ತು. ಇಂಗ್ಲೆಂಡ್ ತಂಡದ ಪರವಾಗಿ ಲೂಯೀಸ್ ಗ್ರೇಗರಿ 3 ವಿಕೆಟ್ ಪಡೆದರೆ ಸಕೀಬ್ ಮಹ್ಮದ್, ಕ್ರೇಗ್ ಓವರ್ಟನ್, ಮ್ಯಾಥ್ಯೂ ಪಾರ್ಕಿನ್ಸನ್ ತಲಾ ಎರಡು ವಿಕೆಟ್ ಕಬಳಿಸಿದರು.

Story first published: Sunday, July 11, 2021, 10:40 [IST]
Other articles published on Jul 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X