ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಆತಿಥೇಯ ಇಂಗ್ಲೆಂಡ್‌ಗೆ ಆಘಾತ ನೀಡಿದ ಪಾಕಿಸ್ತಾನ!

ICC World Cup 2019 : ತವರಿನಲ್ಲೆ ಇಂಗ್ಲೆಂಡ್ ಗೆ ಶಾಕ್ ನೀಡಿದ ಪಾಕ್..? | Oneindia Kannada
England vs Pakistan, Match 6 - Live Cricket Score

ನಾಟಿಂಗ್ಹ್ಯಾಮ್, ಜೂನ್ 03: ಪ್ರಶಸ್ತಿ ಗೆಲುವಿನ ಫೇವರಿಟ್‌ ತಂಡವಾಗಿರುವ ಆತಿಥೇಯ ಇಂಗ್ಲೆಂಡ್‌ ತಂಡದ ಪರ ಸ್ಟಾರ್‌ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್‌ (107) ಮತ್ತು ಜೋಸ್‌ ಬಟ್ಲರ್‌ (103) ಶತಕ ದಾಖಲಿಸಿದರೂ, ಒತ್ತಡ ನಿಭಾಯಿಸಿದ ಪಾಕಿಸ್ತಾನ ತಂಡ 14 ರನ್‌ಗಳ ಜಯ ದಾಖಲಿಸಿ ವಿಶ್ವಕಪ್‌ನಲ್ಲಿ ಖಾತೆ ತೆರೆಯಿತು.

ಪಾಕಿಸ್ತಾನ vs ಇಂಗ್ಲೆಂಡ್, ಜೂನ್ 3, Live ಸ್ಕೋರ್‌ಕಾರ್ಡ್

1
43649

ಇಲ್ಲಿನ ಟ್ರೆಂಡ್ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಸಿಸಿ ವಿಶ್ವಕಪ್‌ನ 6ನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ಬ್ಯಾಟಿಂಗ್‌ ಆರಂಭಿಸಿದ ಪಾಕ್‌, 50 ಓವರ್‌ಗಳಲ್ಲಿ 8 ವಿಕೆಟ್‌ಗೆ 348 ರನ್‌ಗಳ ಶಿಖರ ನಿರ್ಮಿಸಿತು.

ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!

ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಒಂದು ಹಂತದಲ್ಲಿ ಸುಲಭವಾಗಿ ವಿಶ್ವಕಪ್‌ ಇತಿಹಾಸದಲ್ಲಿ ದಾಖಲೆಯ ರನ್‌ ಚೇಸ್‌ ಮಾಡುತ್ತದೆ ಎಂಬಂತಿತ್ತು. ಆದರೆ, ಅಂತಿಮ ಓವರ್‌ಗಳಲ್ಲಿ ವಹಾಬ್‌ ರಿಯಾಝ್‌ (82ಕ್ಕೆ 3) ಮತ್ತು ಮೊಹಮ್ಮದ್‌ ಆಮಿರ್‌ (67ಕ್ಕೆ 2) ಅವರ ಭರ್ಜರಿ ಬೌಲಿಂಗ್‌ ದಾಳಿ ಎದುರು ತತ್ತರಿಸಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 334 ರನ್‌ಗಳನ್ನು ಗಳಿಸಿ ಸೋಲಿಗೆ ಶರಣಾಯಿತು. ಪಾಕ್‌ ಪರ ಲೆಗ್‌ಸ್ಪಿನ್ನರ್‌ ಶದಾಬ್‌ ಖಾನ್‌ (63ಕ್ಕೆ 2) ಉತ್ತಮ ಆರಂಭ ಒದಗಿಸಿಕೊಟ್ಟರು.

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

ಇದು ಇಂಗ್ಲೆಂಡ್‌ ತಂಡ ತವರಿನಲ್ಲಿ ರನ್‌ ಚೇಸಿಂಗ್‌ ವೇಳೆ ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಮೊದಲ ಸೋಲಾಗಿದೆ. ಮತ್ತೊಂದೆಡೆ ಏಕದಿನ ಕ್ರಿಕೆಟ್‌ನಲ್ಲಿ ಸತತ 11 ಪಂದ್ಯಗಳನ್ನು ಸೋತಿದ್ದ ಪಾಕಿಸ್ತಾನ ತಂಡ ಕೊನೆಗೂ ಸೋಲಿನ ಕೊಂಡಿ ಕಳಚಿ ಗೆಲುವಿನ ಲಯಕ್ಕೆ ಮರಳಿದೆ.

ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!

ಇದಕ್ಕೂ ಮುನ್ನ ಪಾಕ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಇಮಾಮ್‌ ಉಲ್‌ ಹಕ್‌ (44) ಮತ್ತು ಫಖರ್‌ ಝಮಾನ್‌ (36) ಉತ್ತಮ ಆರಂಭ ಒದಗಿಸಿದರೆ, ಬಾಬರ್‌ ಅಝಾಮ್‌ (63) ಮತ್ತು ಅನುಭವಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಹಫೀಝ್‌ (84) ಅರ್ಧಶತಕಗಳೊಂದಿಗೆ ತಂಡವನ್ನು ಉತ್ತಮ ಮೊತ್ತದ ಕಡೆಗೆ ಸಾಗುವಂತೆ ಮಾಡಿದರು. ಇಂಗ್ಲೆಂಡ್‌ ಪರ ವೇಗಿಗಳು ವಿಕೆಟ್‌ ಪಡೆಯುವಲ್ಲಿ ವಿಫಲರಾದರೆ, ಮೊಯೀನ್‌ ಅಲಿ ತಮ್ಮ ಸ್ಪಿನ್‌ ಮೋಡಿಯೊಂದಿಗೆ (50ಕ್ಕೆ 3) ಮೂರು ವಿಕೆಟ್‌ ಉರುಳಿಸಿದ್ದರು.

ಇಂಗ್ಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದರೆ, ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು.

ಸಂಕ್ಷಿಪ್ತ ಸ್ಕೋರ್‌

ಪಾಕಿಸ್ತಾನ: 50 ಓವರ್‌ಗಳಲ್ಲಿ 348/8 (ಇಮಾಮ್‌ ಉಲ್‌ ಹಕ್‌ 44, ಫಖರ್‌ ಝಮಾನ್‌ 36, ಬಾಬರ್‌ ಅಝಾಮ್‌ 63, ಮೊಹಮ್ಮದ್‌ ಹಫೀಝ್‌ 84, ಸರ್ಫರಾಝ್‌ ಅಹ್ಮದ್‌ 55; ಮೊಯೀನ್‌ ಅಲಿ 50ಕ್ಕೆ 3, ಕ್ರಿಸ್‌ ವೋಕ್ಸ್‌ 71ಕ್ಕೆ 3, ಮಾರ್ಕ್‌ ವುಡ್‌ 53ಕ್ಕೆ 2).

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 334/9 (ಜಾನಿ ಬೈರ್‌ಸ್ಟೋವ್‌ 32, ಜೋ ರೂಟ್‌ 107, ಜೋಸ್‌ ಬಟ್ಲರ್‌ 103; ಶದಾಬ್‌ ಖಾನ್‌ 63ಕ್ಕೆ 2, ಮೊಹಮ್ಮದ್‌ ಆಮಿರ್‌ 67ಕ್ಕೆ 2, ವಹಾಬ್‌ ರಿಯಾಝ್‌ 82ಕ್ಕೆ 3).

ಅಂಕಿಅಂಶಗಳು

01

ವಿಶ್ವಕಪ್‌ ಟೂನರ್ನಿಯ ಇರಿಹಾಸದಲ್ಲಿ ತಂಡವೊಂದರಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ದಾಖಲಿಸಿದರೂ ಜಯ ದಕ್ಕಸಿಕೊಳ್ಳಲು ಸಾಧ್ಯವಾಗದೇ ಇರುವುದು ಇದೇ ಮೊದಲ ಬಾರಿ ಆಗಿದೆ.

11

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ತನ್ನ ಸತತ 11 ಪಂದ್ಯಗಳ ಸೋಲಿನ ಕೊಂಡಿಯನ್ನು ಕೊನೆಗೂ ಕಳಚಿದೆ.

75

ಜೋಸ್‌ ಬಟ್ಲರ್‌ ಪಾಕಿಸ್ತಾನ ವಿರುದ್ಧ ಶತಕ ದಾಖಲಿಸಲು ತೆಗೆದುಕೊಂಡ ಎಸೆತಗಳು. ಇದು ವಿಶ್ವಕಪ್‌ ಟೂನರ್ನಿಯ ಇತಿಹಾಸದಲ್ಲಿ ಇಂಗ್ಲೆಂಡ್‌ ತಂಡದ ಪರ ಅತ್ಯಂತ ವೇಗದ ಶತಕವಾಗಿದೆ.

ತಂಡಗಳ ವಿವರ

ಪಾಕಿಸ್ತಾನ ಪ್ಲೇಯಿಂಗ್‌ 11: ಫಖರ್ ಝಮಾನ್, ಇಮಾಮ್ ಉಲ್ ಹಕ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಝ್‌, ಸರ್ಫರಾಝ್‌ ಅಹ್ಮದ್ (ಸಿ & ವಿ.ಕೆ), ಶೊಯೇಬ್ ಮಲಿಕ್, ಆಸಿಫ್ ಅಲಿ, ಶದಾಬ್ ಖಾನ್, ಹಸನ್ ಅಲಿ, ವಹಾಬ್ ರಿಯಾಝ್‌, ಮೊಹಮ್ಮದ್ ಆಮಿರ್‌.

ಇಂಗ್ಲೆಂಡ್ ಪ್ಲೇಯಿಂಗ್‌ 11: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್‌, ಜೋ ರೂಟ್, ಐಯಾನ್ ಮಾರ್ಗನ್ (ಸಿ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.

{headtohead_cricket_2_5}

Story first published: Monday, June 3, 2019, 23:45 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X