ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋಲುವುದು ಹೇಗೆ ಎಂದು ಪಾಕಿಸ್ತಾನ ತಂಡವನ್ನು ನೋಡಿ ಕಲಿಯಿರಿ ಎಂದ ಅಭಿಮಾನಿಗಳು!

Fans Troll Pakistan Women Team After They Lost By One Run In Women’s Asia Cup Semi Final

ಮಹಿಳಾ ಏಷ್ಯಾಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೆಮಿಫೈನಲ್‌ನ ಮೊದಲ ಮ್ಯಾಚ್‌ನಲ್ಲಿ ಭಾರತದ ವನಿತೆಯರು ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸುಲಭದ ಜಯ ಸಾಧಿಸುವ ಮೂಲಕ ಫೈನಲ್ ತಲುಪಿದರು.

T20 World Cup 2022: ಟೂರ್ನಿ ಆರಂಭಕ್ಕೆ ಮುನ್ನ ರೋಹಿತ್ ಶರ್ಮಾಗೆ ಶುರುವಾಯ್ತು ಹೊಸ ಚಿಂತೆT20 World Cup 2022: ಟೂರ್ನಿ ಆರಂಭಕ್ಕೆ ಮುನ್ನ ರೋಹಿತ್ ಶರ್ಮಾಗೆ ಶುರುವಾಯ್ತು ಹೊಸ ಚಿಂತೆ

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮಹಿಳಾ ತಂಡ ಫೈನಲ್‌ ಪ್ರವೇಶಿಸಲು ಭಾರಿ ಹೋರಾಟ ನಡೆಸಿದವು. ಈ ಪಂದ್ಯದಲ್ಲಿ ಪಾಕಿಸ್ತಾನವೇ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ ವನಿತೆಯರು ಪಾಕಿಸ್ತಾನವನ್ನು ಕೇವಲ 1 ರನ್‌ಗಳ ಅಂತರದಲ್ಲಿ ಸೋಲಿಸುವಲ್ಲಿ ಯಶಸ್ವಿಯಾದರು.

14 ವರ್ಷಗಳ ನಂತರ ಶ್ರೀಲಂಕಾ ವನಿತೆಯರ ತಂಡ ಏಷ್ಯಾಕಪ್‌ನಲ್ಲಿ ಫೈನಲ್ ತಲುಪಲಿದೆ. ರೋಚಕ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಗೆಲ್ಲುವ ಮೂಲಕ ಶ್ರೀಲಂಕಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೊಂದೆಡೆ, ಪಂದ್ಯವನ್ನು ಸುಲಭವಾಗಿ ಗೆಲ್ಲುವ ಹಂತದಲ್ಲಿದ್ದ ಪಾಕಿಸ್ತಾನ ಕೊನೆ ಕ್ಷಣದಲ್ಲಿ ಸೋಲನುಭವಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪಾಕಿಸ್ತಾನ ಮಹಿಳಾ ತಂಡವನ್ನು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಸೆಮಿಫೈನಲ್‌ನಲ್ಲಿ ಸೋತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಂಡವನ್ನು ಟ್ರೋಲ್ ಮಾಡಿದ ಅಭಿಮಾನಿಗಳು

ತಂಡವನ್ನು ಟ್ರೋಲ್ ಮಾಡಿದ ಅಭಿಮಾನಿಗಳು

ಸೆಮಿಫೈನಲ್‌ನಲ್ಲಿ ಸುಲಭವಾಗಿ ಜಯ ಸಾಧಿಸಿ ಫೈನಲ್ ತಲುಪುತ್ತದೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿರುವಾಗಲೇ, ಪಾಕಿಸ್ತಾನ ಕೊನೆಯ ಹಂತದಲ್ಲಿ ಮುಗ್ಗರಿಸಿತು. ಇದರಿಂದ ರೊಚ್ಚಿಗೆದ್ದ ಅಭಿಮಾನಿಗಳು, ಗೆಲ್ಲುವ ಪಂದ್ಯವನ್ನು ಸೋಲುವುದು ಹೇಗೆ ಎಂದು ಪಾಕಿಸ್ತಾನವನ್ನು ನೋಡಿ ಕಲಿಯಿರಿ ಎಂದು ಟ್ರೋಲ್ ಮಾಡುತ್ತಿದ್ದಾರೆ.

18 ಎಸೆತಗಳಲ್ಲಿ 18 ರನ್ ಗಳಿಸಬೇಕಿದ್ದಾಗ ಹೇಗೆ ಸೋಲನುಭವಿಸಲು ಸಾಧ್ಯ ಎಂದು ಅರ್ಥವಾಗುತ್ತಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಾಯಕನೇ ಆ ತಂಡದ ದೌರ್ಬಲ್ಯ: ಬಲಿಷ್ಠ ತಂಡಕ್ಕೆ ಆಕಾಶ್ ಚೋಪ್ರ ಎಚ್ಚರಿಕೆ

 ಕೈಕೊಟ್ಟ ಮಧ್ಯಮ ಕ್ರಮಾಂಕ

ಕೈಕೊಟ್ಟ ಮಧ್ಯಮ ಕ್ರಮಾಂಕ

123 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ವನಿತೆಯರು ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ (9) ಬೇಗನೆ ಔಟಾದ ಕಾರಣ ಅವರಿಗೆ ಉತ್ತಮ ಆರಂಭ ಸಿಗಲಿಲ್ಲ. ಮುನೀಬಾ ಅಲಿ 10 ಎಸೆತಗಳಲ್ಲಿ 18 ರನ್ ಗಳಿಸಿ ಉತ್ತಮ ಆರಂಭ ಪಡೆದರು, ಹೆಚ್ಚಿನ ರನ್ ಗಳಿಸುವಲ್ಲಿ ವಿಫಲರಾದರು.

ಪಾಕಿಸ್ತಾನದ ಮಹಿಳಾ ತಂಡದ ನಾಯಕಿ ಬಿಸ್ಮಾ ಮಹ್ರೂಫ್ 41 ಎಸೆತಗಳಲ್ಲಿ 42 ರನ್ ಗಳಿಸಿ ಮುನ್ನಡೆ ಸಾಧಿಸಿದರೆ, ನಿದಾ ದಾರ್ 26 ಎಸೆತಗಳಲ್ಲಿ 26 ರನ್ ಗಳಿಸಿದರು. ಕೊನೆಯ ಮೂರು ಓವರ್‌ಗಳಲ್ಲಿ ತಂಡಕ್ಕೆ ಇಷ್ಟು ಎಸೆತಗಳಲ್ಲಿ 18 ರನ್‌ಗಳ ಅಗತ್ಯವಿದ್ದರೂ ಗುರಿ ಬೆನ್ನಟ್ಟಲು ವಿಫಲವಾಯಿತು. ಅಚಿನಿ ಕುಲಸೂರ್ಯ ಕೊನೆಯ ಓವರ್‌ನಲ್ಲಿ ಎಂಟು ರನ್‌ಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಿಕೊಂಡರು. ಶ್ರೀಲಂಕಾದ ಮತ್ತೊಬ್ಬ ಬೌಲರ್ ಇನೋಕಾ ರಣವೀರ 17 ರನ್ ನೀಡಿ 2 ವಿಕೆಟ್ ಪಡೆದರು. ಸುಗಂದಿಕಾ ಕುಮಾರಿ ಮತ್ತು ಕವಿಶಾ ದಿಲ್ಹಾರಿ ತಲಾ ಒಂದು ವಿಕೆಟ್ ಪಡೆದರು.

ಶ್ರೀಲಂಕಾ ಬ್ಯಾಟರ್ ಗಳ ಸಾಧಾರಣ ಪ್ರದರ್ಶನ

ಶ್ರೀಲಂಕಾ ಬ್ಯಾಟರ್ ಗಳ ಸಾಧಾರಣ ಪ್ರದರ್ಶನ

ಹರ್ಷಿತಾ ಸಮರವಿಕ್ರಮ (35) ಮತ್ತು ಅನುಷ್ಕಾ ಸಂಜೀವನಿ (26) ಬ್ಯಾಟಿಂಗ್ ನೆರವಿನಿಂದ ಸಿಲ್ಹೆಟ್‌ನಲ್ಲಿ ಶ್ರೀಲಂಕಾ ಪಾಕಿಸ್ತಾನದ ವಿರುದ್ಧ ಆರು ವಿಕೆಟ್ ಕಳೆದುಕೊಂಡು 122 ರನ್ ಗಳಿಸುವಲ್ಲಿ ಸಫಲವಾಯಿತು.

ಪಾಕಿಸ್ತಾನದ ಪರವಾಗಿ ನಶ್ರಾ ಸಂಧು 17 ರನ್ ನೀಡಿ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಿದಾ ದಾರ್, ಸಾದಿಯಾ ಇಕ್ಬಾಲ್ ಮತ್ತು ಐಮನ್ ಅನ್ವರ್ ತಲಾ ಒಂದು ವಿಕೆಟ್ ಪಡೆದರು.

Story first published: Thursday, October 13, 2022, 18:26 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X