ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಸಚಿನ್, ಗಂಗೂಲಿ, ಸೆಹ್ವಾಗ್ ಗೆ ಸಿಕ್ತು ಬಂಗಾರದ ಬ್ಯಾಟ್!

ಈ ಬಾರಿ ಟೂರ್ನಿಯಲ್ಲಿ ಭಾಗವಹಿಸಿರುವ ಎಂಟು ತಂಡಗಳ ತವರು ಕ್ರೀಡಾಂಗಣಗಳಲ್ಲಿ ಆಯಾ ತಂಡಗಳು ಆಡುವ ಮೊದಲ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಐಪಿಎಲ್ ಪಂದ್ಯಾವಳಿಗೆ ಚಾಲನೆ ಸಿಕ್ಕಿದೆ. ಇದರ ಉದ್ಘಾಟನಾ ಪಂದ್ಯವು ಬುಧವಾರ (ಏಪ್ರಿಲ್ 5) ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಜರುಗಿತು.

ಸಾಮಾನ್ಯವಾಗಿ ದೊಡ್ಡದೊಂದು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದ ನಂತರವೇ ಪಂದ್ಯಾವಳಿಯ ಪಂದ್ಯಗಳು ಆರಂಭವಾಗುತ್ತಿದ್ದುದು ಈವರೆಗಿನ ಸಂಪ್ರದಾಯ. ಆ ಉದ್ಘಾಟನಾ ಸಮಾರಂಭ ಅತ್ಯಂತ ವೈಭವೋಪೇತವಾಗಿ, ಬಾಲಿವುಡ್ ನಟ, ನಟಿಯರ ಕಣ್ಣು ಕೋರೈಸುವ ರಂಗು ರಂಗಿನ ನೃತ್ಯಗಳೊಂದಿಗೆ ಆರಂಭವಾಗುತ್ತಿತ್ತು ಐಪಿಎಲ್.[ಆರ್ ಸಿಬಿ ಸೋಲಿಗೆ ಕಾರಣವಾದ 5 ಪ್ರಮುಖ ಕಾರಣಗಳು]

ಆದರೆ, ಈ ಬಾರಿ ಈ ಉದ್ಘಾಟನಾ ಸಮಾರಂಭದ ಮಾದರಿಯನ್ನು ಕೊಂಚ ಬದಲಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸಿರುವ ಎಂಟು ತಂಡಗಳ ತವರು ಕ್ರೀಡಾಂಗಣಗಳಲ್ಲಿ ಆಯಾ ತಂಡಗಳು ಆಡುವ ಮೊದಲ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅರ್ಥಾತ್, ಈ ಬಾರಿಯ ಐಪಿಎಲ್ ನಲ್ಲಿ ಎಂಟು ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ನಡೆಯಲಿವೆ. ಆಯಾ ಪ್ರಾಂತ್ಯದ ಜನರ ಮೇಲೆ ಹೆಚ್ಚು ಪರಿಣಾಮ ಬೀರಲು ಇಂಥ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.

ಅಂತೆಯೇ, ಬುಧವಾರ ನಡೆದ, ಈ ಬಾರಿಯ ಐಪಿಎಲ್ ನ ಮೊದಲ ಪಂದ್ಯವು ಹೈದರಾಬಾದ್ ನಲ್ಲಿ ನಡೆದಾಗ, ಹೈದರಾಬಾದ್ ತಂಡಕ್ಕೆ ಅದು ಮೊದಲ ಪಂದ್ಯವೂ ಆಗಿದ್ದರಿಂದ ಆ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಸಲಾಯಿತು.

ಈ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗರಾದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿಯವರಿಗೆ ಚಿನ್ನದ ಲೇಪನವುಳ್ಳ ಪುಟ್ಟ ಬ್ಯಾಟ್ ಗಳನ್ನು ನೀಡಿ ಗೌರವಿಸಲಾಯಿತು.

ಬಾಲಿವುಡ್ ನಟಿ ಆ್ಯಮಿ ಜಾಕ್ಸನ್ ಅವರು ನೃತ್ಯ ಪ್ರದರ್ಶನ ಮಾಡಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಸಂಭ್ರಮ ತಂದರು. ತೆಲುಗು ಚಿತ್ರರಂಗದ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರು ಹೈದರಾಬಾದ್ ತಂಡದ ಅಭಿಮಾನಿಗಳ ಗ್ಯಾಲರಿಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಇವೇ ಮುಂತಾದ ಕೆಲವಾರು ವಿಶೇಷಗಳುಳ್ಳ ಈ ಉದ್ಘಾಟನಾ ಸಮಾರಂಭದ ಕೆಲವಾರು ಫೋಟೋಗಳು ಇಲ್ಲಿ ನಿಮಗಾಗಿ.

ಪ್ರತಿಜ್ಞಾ ವಿಧಿಗೆ ಸಹಿ

ಪ್ರತಿಜ್ಞಾ ವಿಧಿಗೆ ಸಹಿ

ಉದ್ಘಾಟನಾ ಸಮಾರಂಭದಲ್ಲಿ ಟ್ರೋಫಿ ಅನಾವರಣ ಮಾಡಲಾಯಿತು. ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಜಂಟಿಯಾಗಿ ಕಪ್ ಜತೆ ನಿಂತು ಛಾಯಾಗ್ರಾಹಕರಿಗೆ ಪೋಸು ನೀಡಿದರು. ಇದಾದ ನಂತರ, ಉಭಯ ತಂಡಗಳ ಆಟಗಾರರು ಐಪಿಎಲ್ ಪ್ರತಿಜ್ಞಾ ವಿಧಿಗೆ ಸಹಿ ಹಾಕಿದರು.

ವೇದಿಕೆ ಮೇಲೆ ಕಂಗೊಳಿಸಿದ ಹಳೇ ಹುಲಿಗಳು

ವೇದಿಕೆ ಮೇಲೆ ಕಂಗೊಳಿಸಿದ ಹಳೇ ಹುಲಿಗಳು

ಮಾಜಿ ಕ್ರಿಕೆಟರ್ ಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಆ್ಯಮಿ ಜಾಕ್ಸನ್ ನೃತ್ಯದ ಸೊಬಗು

ಆ್ಯಮಿ ಜಾಕ್ಸನ್ ನೃತ್ಯದ ಸೊಬಗು

ಬುಧವಾರ, ಪಂದ್ಯಕ್ಕೂ ಮುನ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲೆಲ್ಲೂ ಆ್ಯಮಿ ಜಾಕ್ಸನ್ ನದ್ದೇ ಹವಾ. ಉದ್ಘಾಟನಾ ಸಮಾರಂಭದಲ್ಲಿ ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಅವರ ಆಕರ್ಷಕ ನೃತ್ಯ ಪ್ರದರ್ಶನ ಎಲ್ಲರನ್ನೂ ಮುದಗೊಳಿಸಿತು.

ಜನಮನ ಸೂರೆಗೊಂಡ ಪರ್ಫಾಮನ್ಸ್

ಜನಮನ ಸೂರೆಗೊಂಡ ಪರ್ಫಾಮನ್ಸ್

ಆ್ಯಮಿ ಜಾಕ್ಸನ್ ಅವರ ನೃತ್ಯವು ಕೇವಲ ಅದರ ಶೈಲಿ ಮಾತ್ರವಲ್ಲ, ವಿಶೇಷ ವಸ್ತ್ರವಿನ್ಯಾಸ, ಕೊರಿಯೋಗ್ರಾಫಿಯಿಂದಾಗಿ ಜನರ ಮನ ಸೆಳೆಯಿತು.

ಪ್ರೇಕ್ಷಕರ ಜತೆಯಲ್ಲಿ ಹಿರಿಯ ನಟ

ಪ್ರೇಕ್ಷಕರ ಜತೆಯಲ್ಲಿ ಹಿರಿಯ ನಟ

ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ಸ್ಟಾರ್ ವಿಕ್ಟರ್ ವಿಕ್ಟರಿ ವೆಂಕಟೇಶ್ ಅವರು, ಹೈದರಾಬಾದ್ ಅಭಿಮಾನಿಗಳ ಗ್ಯಾಲರಿಯಲ್ಲಿ ನಿಂತು ಸಂಭ್ರಮಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X