ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಅರ್ಹತೆ ಹೊಂದಿದ್ದರೆ ಮಾತ್ರ ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆ: ಶಾಹಿದ್ ಅಫ್ರಿದಿ ಮಹತ್ವದ ನಿರ್ಧಾರ

Have Strike Rate Of More Than 135 Is T20 Selection Criteria For Pakistan Team - Shahid Afridi

ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಶಾಹಿದ್ ಅಫ್ರಿದಿ ಮುಖ್ಯ ಆಯ್ಕೆಗಾರರಾಗಿ ನೇಮಕವಾದ ನಂತರ ತಂಡದಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. ನ್ಯೂಜಿಲೆಂಡ್ ಸರಣಿಗಾಗಿ ಟೆಸ್ಟ್ ತಂಡಕ್ಕೆ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರಿಗೆ ಮತ್ತೆ ಅವಕಾಶ ನೀಡಿದ್ದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.

ಇತ್ತೀಚೆಗೆ ತಾನೆ, ತನ್ನ ಅಧಿಕಾರಾವಧಿ ಮುಗಿಯುವ ವೇಳೆಗೆ ಪಾಕಿಸ್ತಾನ ತಂಡಕ್ಕೆ ಆಡಲು ಎರಡು ತಂಡಗಳನ್ನು ಸಿದ್ಧಪಡಿಸುವುದಾಗಿ ಹೇಳಿದ್ದರು. ಇದರಿಂದ ಪಾಕ್ ತಂಡದ ಬೆಂಚ್‌ ಶಕ್ತಿ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು. ಅದರ ಬೆನ್ನಲ್ಲೇ ಈಗ ಮತ್ತೊಂದು ಮಹತ್ವದ ನಿರ್ಧಾರ ಮಾಡಿದ್ದಾರೆ.

Rishabh Pant: ಶೀಘ್ರ ಗುಣಮುಖರಾಗಿ ಎಂದು ರಿಷಬ್‌ ಪಂತ್‌ಗೆ ಹಾರೈಸಿದ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾRishabh Pant: ಶೀಘ್ರ ಗುಣಮುಖರಾಗಿ ಎಂದು ರಿಷಬ್‌ ಪಂತ್‌ಗೆ ಹಾರೈಸಿದ ರಾಹುಲ್ ದ್ರಾವಿಡ್ ಮತ್ತು ಟೀಂ ಇಂಡಿಯಾ

ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆಯಾಗಲು ಅವರು ಹೊಸ ಮಾನದಂಡವನ್ನು ತಿಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಬ್ಯಾಟರ್ ಸ್ಟ್ರೈಕ್‌ ರೇಟ್‌ 135ಕ್ಕಿಂತ ಕಡಿಮೆ ಇದ್ದರೆ, ಅಂತಹ ಆಟಗಾರರನ್ನು ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆಗಾಗಿ ಪರಿಗಣಿಸುವುದಿಲ್ಲ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಪಾಕಿಸ್ತಾನ ಟಿ20 ತಂಡದಲ್ಲಿ ಹಲವು ಬ್ಯಾಟರ್ ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಸ್ಟ್ರೈಕ್‌ ರೇಟ್‌ಗಾಗಿ ಭಾರಿ ಟೀಕೆಗೆ ಗುರಿಯಾಗಿದ್ದರು. ಶಾಹಿದ್ ಅಫ್ರಿದಿ ಹೊಸ ನಿಮಯ ಜಾರಿ ಮಾಡಿರುವುದರಿಂದ ಟಿ20 ತಂಡದಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Have Strike Rate Of More Than 135 Is T20 Selection Criteria For Pakistan Team - Shahid Afridi

ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಲವು ಬದಲಾವಣೆ

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಲ್ಲಿ ತ್ವರಿತವಾಗಿ ಹಲವು ಬದಲಾವಣೆ ಮಾಡಲಾಯಿತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಹೀನಾಯ ಸೋಲನುಭವಿಸಿದ ಬಳಿಕ ಪಿಸಿಬಿ ಅಧ್ಯಕ್ಷ ರಮೀಝ್ ರಾಜಾರನ್ನು ವಜಾ ಮಾಡಲಾಯಿತು. ಅವರ ಸ್ಥಾನಕ್ಕೆ ನಜಮ್ ಸೇಥಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ನಜಮ್ ಸೇಥಿ ಅಧ್ಯಕ್ಷರಾಗಿ ನೇಮಕವಾದ ಬಳಿಕ, ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಂಗಾಮಿ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡರು. ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ಸುಧಾರಣೆ ಮಾಡುವ ಸಲುವಾಗಿ ಶಾಹಿದ್ ಅಫ್ರಿದಿ ಹಲವು ಮಹತ್ವದ ಬದಲಾವಣೆ ಮಾಡುತ್ತಿದ್ದಾರೆ.

Have Strike Rate Of More Than 135 Is T20 Selection Criteria For Pakistan Team - Shahid Afridi

ತೀರ್ಮಾನದ ಬಗ್ಗೆ ಗೊಂದಲ

135 ಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ ಹೊಂದಿರುವ ಬ್ಯಾಟರ್ ಗಳಿಗೆ ಟಿ20 ತಂಡದಲ್ಲಿ ಸ್ಥಾನ ಇಲ್ಲ ಎಂದು ಹೇಳಿರುವ ಕ್ರಮ ಗೊಂದಲಕ್ಕೆ ಕಾರಣವಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ 135 ಸ್ಟ್ರೈಕ್‌ರೇಟ್‌ಗಿಂದ ಕಡಿಮೆ ಇದ್ದರೆ ಪಾಕಿಸ್ತಾನ ತಂಡಕ್ಕೆ ಆಯ್ಕೆಯಾಗಲ್ಲ ಎಂದು ಹೇಳಿದ್ದಾರೆ. ಆದರೆ, ಸದ್ಯ ಪಾಕಿಸ್ತಾನ ಟಿ20 ತಂಡದಲ್ಲಿರುವ ಕಡಿಮೆ ಸ್ಟ್ರೈಕ್ ಹೊಂದಿರುವ ಆಟಗಾರರಿಗೆ ಇದು ಅನ್ವಯವಾಗುತ್ತದಾ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಪಾಕಿಸ್ತಾನ ನಾಯಕ ಬಾಬರ್ ಅಜಂ ಟಿ20 ಸ್ಟ್ರೈಕ್ ರೇಟ್ 127.81 ಇದೆ. ನಂಬರ್ 1 ಟಿ20 ಬ್ಯಾಟರ್ ಆಗಿದ್ದ ಮೊಹಮ್ಮದ್ ರಿಜ್ವಾನ್ ಸ್ಟ್ರೈಕ್ ರೇಟ್ 126.62 ಇದೆ. ಒಂದು ವೇಳೆ ಶಾಹಿದ್ ಅಫ್ರಿದಿ ತಮ್ಮ ನಿಯಮ ಕಟ್ಟು ನಿಟ್ಟಾಗಿ ಜಾರಿಗೆ ತಂದರೆ ಹಲವು ಪ್ರಮುಖ ಆಟಗಾರರು ಪಾಕಿಸ್ತಾನ ಟಿ20 ತಂಡದಿಂದ ಹೊರಗುಳಿಯಬೇಕಾಗುತ್ತದೆ.

Story first published: Wednesday, January 4, 2023, 5:40 [IST]
Other articles published on Jan 4, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X