ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು ಹೆಚ್ಚು ಅಭ್ಯಾಸ ಮಾಡುವುದಿಲ್ಲ, ಯೋಜನೆಯ ಪ್ರಕಾರವಷ್ಟೇ ಅಭ್ಯಾಸ: ದಿನೇಶ್ ಕಾರ್ತಿಕ್

Dinesh karthik

ಮೊದಲ ಎಸೆತದಲ್ಲಿ ಸಿಕ್ಸ್. ಎರಡನೇ ಎಸೆತದಲ್ಲಿ ಫೋರ್‌, ಪಂದ್ಯ ಮುಕ್ತಾಯ. 2 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗಿದ್ದ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಕಂಡಂತಹ ಸೂಪರ್ ಫಿನಿಷರ್. ಮಹೇಂದ್ರ ಸಿಂಗ್ ಧೋನಿ ಬಳಿಕ ಭಾರತ ತಂಡದಲ್ಲಿ ಫಿನಿಷರ್ ಪಾತ್ರದಲ್ಲಿ ಮಿಂಚುತ್ತಿರುವ ಅತ್ಯಂತ ಅನುಭವಿ ಬ್ಯಾಟ್ಸ್‌ಮನ್.

ನಾಗ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ತಾನು ಎದುರಿಸಿದ ಎರಡು ಎಸೆತಗಳಲ್ಲಿ ಪಂದ್ಯವನ್ನೇ ಮುಗಿಸಿಬಿಟ್ಟರು. ಕಾರ್ತಿಕ್ ಆಟ ಕಂಡು ಭಾರೀ ಖುಷಿಪಟ್ಟ ನಾಯಕ ರೋಹಿತ್ ಶರ್ಮಾ ಅಪ್ಪಿಕೊಂಡರು. ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವು ಸಮಬಲ ಸಾಧಿಸಿದಾಗ ರೋಹಿತ್ ಅವರ ಬೊಂಬಾಟ್ ಇನ್ನಿಂಗ್ಸ್ ಜೊತೆಗೆ ಫಿನಿಶರ್ ದಿನೇಶ್ ಕಾರ್ತಿಕ್ ಬಗ್ಗೆ ಚರ್ಚೆಯಾಗಿದೆ. ಕಾರ್ತಿಕ್ ಕೂಡ ಟಿ20 ವಿಶ್ವಕಪ್‌ನಲ್ಲಿ ರಿಷಬ್ ಪಂತ್‌ಗಿಂತ ಮುಂದಿದ್ದಾರೆ.

ಫಿನಿಷರ್ ಪಾತ್ರದಲ್ಲಿ ಮಿಂಚುತ್ತಿರುವ DK

ಫಿನಿಷರ್ ಪಾತ್ರದಲ್ಲಿ ಮಿಂಚುತ್ತಿರುವ DK

ದಿನೇಶ್ ಕಾರ್ತಿಕ್ ಅವರು ಒತ್ತಡದಲ್ಲಿ ಐಪಿಎಲ್‌ನಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಮರಳಿದರು. ಪಂದ್ಯದ ಕೊನೆಯಲ್ಲಿ, ಭಾರತ ತಂಡದ ವಿಕೆಟ್‌ಕೀಪರ್-ಬ್ಯಾಟರ್ ಡಿಕೆ ಫಿನಿಶರ್ ಆಗಿ ತಮ್ಮನ್ನು ತಾವು ಹೊಂದಿಸಿಕೊಳ್ಳಲು ಹೆಚ್ಚಿನ ಅಭ್ಯಾಸದ ಅಗತ್ಯವಿಲ್ಲ ಎಂದು ಹೇಳಿದರು. ಫಿನಿಶರ್ ಕಾರ್ತಿಕ್ ಅವರ ಮಾತಿನಲ್ಲಿ, ಆರ್‌ಸಿಬಿ ಕೂಡ ಈ ಪಾತ್ರವನ್ನು ನಿರ್ವಹಿಸುತ್ತಿದೆ.

ಭಾರತ ತಂಡದಲ್ಲೂ ಈ ಸಾಧನೆ ಮಾಡಿರುವುದು ಸಂತಸ ತಂದಿದೆ. ಹಲವು ದಿನಗಳಿಂದ ಇಂತಹ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ಈಗ ಅದು ವಾಡಿಕೆಯಾಗಿಬಿಟ್ಟಿದೆ. ನಾನು ಸನ್ನಿವೇಶಗಳನ್ನು ಸಹ ಅಭ್ಯಾಸ ಮಾಡುತ್ತೇನೆ (ಪರಿಸ್ಥಿತಿಗೆ ಅನುಗುಣವಾಗಿ ಗುರಿಗಳನ್ನು ಹೊಂದಿಸುವ ಮೂಲಕ ಅಭ್ಯಾಸ) ಎಂದಿದ್ದಾರೆ.

ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಸಲಹೆಯಂತೆ ಹೇಗೆ ಅಭ್ಯಾಸ ಮಾಡಬೇಕು, ಯಾವ ರೀತಿಯ ಹೊಡೆತಗಳು ಪರಿಣಾಮಕಾರಿಯಾಗಬಹುದು ಎಂಬುದರ ಕುರಿತು ಸಲಹೆ ಪಡೆಯುತ್ತೇನೆ. ಮ್ಯಾನೇಜ್‌ಮೆಂಟ್ ಬಳಿ ಖಚಿತ ಯೋಜನೆ ಇದೆ ಎಂದು ಕಾರ್ತಿಕ್ ಹೇಳಿದ್ದಾರೆ. ಇದೇ ವೇಳೆಯಲ್ಲಿ ತಾನು ಹೆಚ್ಚು ವ್ಯಾಯಾಮ ಮಾಡುವುದಿಲ್ಲ. ಯೋಜನೆಯ ಪ್ರಕಾರ ಸಾಧ್ಯವಾದಷ್ಟು ಅಭ್ಯಾಸ ಮಾಡುತ್ತೇನೆ ಎಂದಿದ್ದಾರೆ.

ಟೀಂ ಇಂಡಿಯಾ ಯೋಜನೆಗಳಲ್ಲಿ ಬದಲಾವಣೆ ನಿಶ್ಚಿತ

ಟೀಂ ಇಂಡಿಯಾ ಯೋಜನೆಗಳಲ್ಲಿ ಬದಲಾವಣೆ ನಿಶ್ಚಿತ

ನಾಗ್ಪುರ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಿಗಿಂತ ಮುಂಚಿತವಾಗಿ ಕಾರ್ತಿಕ್ ಅವರನ್ನು ಕ್ರೀಸ್‌ಗೆ ಕಳುಹಿಸಲಾಯಿತು. ಈ ಹಿನ್ನೆಲೆಯಲ್ಲಿ ತಂಡವು ನಾನಾ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಕಾರ್ತಿಕ್ ತಿಳಿಸಿದ್ರು. ಕೆಲವೊಮ್ಮೆ ಓವರ್‌ಗಳ ಸಂಖ್ಯೆ ಹೆಚ್ಚಿದ್ದರೆ ಸ್ಪಿನ್ನರ್‌ಗಳನ್ನು ಗುರಿಯಾಗಿಸಲು ಬ್ಯಾಟಿಂಗ್ ಆರ್ಡರ್ ಬದಲಾಯಿಸಬೇಕಾಗುತ್ತದೆ. ಅದರ ಹಿಂದೆ ತರ್ಕವಿದೆ. ಎಡಗೈ ಬೌಲರ್‌ಗಳ ವಿರುದ್ಧ ಎಡಗೈ ಬ್ಯಾಟ್ಸ್‌ಮನ್‌ಗಳ ಹಣಾಹಣಿಯನ್ನು ಪರಿಗಣಿಸಿ ಈ ನಿರ್ಧಾರ ಮಾಡಲಾಗುತ್ತದೆ. ಇದರಿಂದಾಗಿ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಲು ತಂಡಕ್ಕೆ ಹಲವು ಆಯ್ಕೆಗಳಿವೆ. ಇದರಿಂದಾಗಿ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಆಯ್ಕೆಯನ್ನು ನಂಬಬೇಕು ಎಂದು ಕಾರ್ತಿಕ್ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಸಮತೋಲನ ನೀಡಿದ್ದಾರೆ

ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಸಮತೋಲನ ನೀಡಿದ್ದಾರೆ

ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ಇಬ್ಬರೂ ನಾಗ್ಪುರದಲ್ಲಿ ಭಾರತದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಇದ್ದರು. ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸಿದರು. ಅನೇಕ ಕ್ರಿಕೆಟ್ ಪಂಡಿತರು ಮತ್ತು ಹಿರಿಯ ಕ್ರಿಕೆಟಿಗರು ಈ ಇಬ್ಬರೂ ಆಟಗಾರರನ್ನು ಭಾರತೀಯ ಇಲೆವೆನ್‌ನಲ್ಲಿ ನೋಡಲು ಬಯಸಿದ್ದರು.

ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 8 ಓವರ್‌ಗಳನ್ನು ಬೌಲ್ ಮಾಡಲು ನಾಲ್ಕು ಬೌಲರ್‌ಗಳು ಸಾಕು ಎಂದು ಕಾರ್ತಿಕ್ ಹೇಳಿದ್ದಾರೆ. ಆದರೆ ನಮ್ಮ ತಂಡದಲ್ಲಿ ಐವರು ಬೌಲರ್‌ಗಳಿದ್ದರು. ಹಾರ್ದಿಕ್ ಪಾಂಡ್ಯ ಅವರಂತಹ ವಿಶ್ವದರ್ಜೆಯ ಆಲ್ ರೌಂಡರ್ ಹೊಂದಿರುವ ಕಾರಣ ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ ಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಹಾರ್ದಿಕ್ ತಂಡದಲ್ಲಿದ್ದರೆ, ಇಲೆವೆನ್‌ನಲ್ಲಿ ಸಮತೋಲನವೂ ಉತ್ತಮವಾಗಿದೆ. ಹೆಚ್ಚುವರಿ ಬ್ಯಾಟರ್ ಅಥವಾ ಬೌಲರ್ ಅನ್ನು ಆಡಿಸಬಹುದು. ಹೀಗಾಗಿಯೇ ಹಾರ್ದಿಕ್ ವಿಶೇಷ.

ಹಾರ್ದಿಕ್ ಜೊತೆಗೆ ಅಕ್ಷರ್ ಪಟೇಲ್ ಕೂಡ ತಂಡಕ್ಕೆ ಸಮಬಲ ತಂದುಕೊಡುವಲ್ಲಿ ನಿಪುಣರು ಎಂದು ಡಿಕೆಶಿ ಹೇಳಿದ್ದಾರೆ. ಅಕ್ಷರ್ ಅವರ ಬ್ಯಾಟಿಂಗ್ ಕೈ ಕೂಡ ಚೆನ್ನಾಗಿದೆ ಎಂದರು. ರಿಷಬ್ ಪಂತ್ ಅವರ ಬ್ಯಾಟಿಂಗ್ ಕೌಶಲ್ಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರೂ ಈ ಪಂದ್ಯದಲ್ಲಿ ಯಶಸ್ವಿಯಾಗಬಹುದಿತ್ತು. ಒಟ್ಟಿನಲ್ಲಿ ಈ ಪಂದ್ಯಕ್ಕೆ ಪಂಥ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಸರಿಯಾದ ನಿರ್ಧಾರ ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಸೊಗಸಾದ ಬ್ಯಾಟಿಂಗ್ ಕುರಿತು ಹೊಗಳಿದ ಕಾರ್ತಿಕ್

ರೋಹಿತ್ ಸೊಗಸಾದ ಬ್ಯಾಟಿಂಗ್ ಕುರಿತು ಹೊಗಳಿದ ಕಾರ್ತಿಕ್

ರೋಹಿತ್ ಸೊಗಸಾದ ಬ್ಯಾಟಿಂಗ್ ಮಾಡಿದರು. ಪಿಚ್‌ನಲ್ಲಿ ಹೊಸ ಚೆಂಡಿನಲ್ಲಿ ಹೊಡೆತಗಳನ್ನು ಆಡುವುದು ಸುಲಭವಲ್ಲ. ಪರಿಣಾಮವಾಗಿ, ರೋಹಿತ್ ಏಕೆ ಶ್ರೇಷ್ಠ ಆಟಗಾರ ಎಂಬುದನ್ನು ಅವರ ಬ್ಯಾಟಿಂಗ್ ಸಾಬೀತುಪಡಿಸುತ್ತದೆ. ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ನಲ್ಲಿ. ಬಲಿಷ್ಠ ಬೌಲರ್ ಗಳ ವಿರುದ್ಧ ಅವರು ಬ್ಯಾಟ್ ಬೀಸುವ ರೀತಿಗೆ ಯಾವುದೇ ಸರಿಸಾಟಿಯಿಲ್ಲ. ಇದೇ ರೋಹಿತ್‌ರನ್ನು ಬ್ಯಾಟ್ಸ್‌ಮನ್ ಆಗಿ ವಿಶೇಷವಾಗಿಸಿದೆ ಎಂದು ಕಾರ್ತಿಕ್ ನಾಯಕ ಹಿಟ್‌ಮ್ಯಾನ್‌ರನ್ನ ಹೊಗಳಿದ್ದಾರೆ.

Story first published: Saturday, September 24, 2022, 16:47 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X