ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವುದು ನನ್ನ ಸುದೀರ್ಘ ಕಾಲದ ಕನಸು: ಸೂರ್ಯಕುಮಾರ್ ಯಾದವ್

I have dreamt of winning a game for India says Suryakumar Yadav

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗಾಗಿ ಟೀಮ್ ಇಂಡಿಯಾಗೆ ಸೂರ್ಯ ಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಐಪಿಎಲ್‌ನಲ್ಲಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಸೂರ್ಯ ಕುಮಾರ್ ಯಾದವ್ ಟೀಮ್ ಇಂಡಿಯಾಗೆ ಬಹಳ ಹಿಂದಿನಿಂದಲು ಕರೆಯ ನಿರೀಕ್ಷೆಯಲ್ಲಿದ್ದರು. ಈಗ ಆ ನಿರೀಕ್ಷೆ ನಿಜವಾಗಿದೆ. ಈ ಬಗ್ಗೆ ಸೂರ್ಯಕುಮಾರ್ ಯಾದವ್ 'ನಾನು ಭಾರತ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡಲು ಸುದೀರ್ಘ ಕಾಲದಿಂದ ಕನಸು ಕಾಣುತ್ತಿದ್ದೇನೆ' ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಸೂರ್ಯ ಕುಮಾರ್ ಯಾದವ್ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿಯೂ ಸೂರ್ಯಕುಮಾರ್ ಯಾದವ್ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾ

" ಸಣ್ಣ ಸಣ್ಣ ಗುರಿಗಳನ್ನು ಮುಂದಿಟ್ಟುಕೊಂಡು ಮುಂದುವರಿಯುವುದು ಅಗತ್ಯ ಎಂದು ನಾನು ಭಾವಿಸುತ್ತೇನೆ. ಈ ವರ್ಷದ ನನ್ನ ಮೊದಲ ಗುರಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳುವುದು. ನನ್ನ ಮುಂದಿನ ಗುರಿ ಯಾವಾಗ ನನಗೆ ಅವಕಾಶ ದೊರೆಯುತ್ತದೆಯೋ ಆಗ ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವುದು. ನಾನು ಬಹಳಷ್ಟು ಸುದೀರ್ಘ ಕಾಲದಿಂದ ಈ ಅವಕಾಶಕ್ಕಾಗಿ ಕಾದುಕೊಳ್ಳಿತಿದ್ದೇನೆ" ಎಂದಿದ್ದಾರೆ ಸೂರ್ಯಕುಮಾರ್ ಯಾದವ್.

"ನಾನು ದೀರ್ಘ ಕಾಲದಿಂದ ಭಾರತ ತಂಡಕ್ಕಾಗಿ ಆಡಿ ಪಂದ್ಯವನ್ನು ಗೆಲ್ಲಿಸಿಕೊಡಬೇಕು ಎಂಬ ಕನಸನ್ನು ಕಾಣುತ್ತಿದ್ದೇನೆ. ಅದು ಮುಂದಿನ ಕೆಲವೇ ದಿನಗಳಲ್ಲಿ ನೆರವೇರುತ್ತದೆ ಎಂದು ನಾನು ಭಾವಿಸುತ್ತಿದ್ದೇನೆ. ಹಾಗಾಗಿ ಆ ಬಗ್ಗೆ ನಾನು ಬಹಳಷ್ಟು ಸಂತೋಷಗೊಂಡಿದ್ದೇನೆ" ಎಂದು ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

ಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ

"ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್ ಖಂಡಿತವಾಗಿ ನನ್ನ ಮೇಲೆ ನಾನು ಇಲ್ಲಿಗೆ 2018ರಲ್ಲಿ ಸೇರಿಕೊಂಡಾಗಲೇ ದೊಡ್ಡ ಭರವಸೆಯನ್ನು ವ್ಯಕ್ತಪಡಿಸಿತ್ತು. ಅವರು ನನಗೆ ನೀಡಿದ ಜವಾಬ್ಧಾರಿ ಹಾಗೂ ಸವಾಲನ್ನು ನಾನು ಸಾಕಷ್ಟು ಆನಂದಿಸಿದ್ದೇನೆ. ಈಗ ನಾನು ನನ್ನ ದೇಶವನ್ನು ಪ್ರತಿನಿಧಿಸಲು ಸಾಕಷ್ಟು ಸಂತಸಗೊಂಡಿದ್ದೇನೆ" ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

Story first published: Tuesday, March 2, 2021, 12:31 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X